ಕೆ.ಎಂ.ದೊಡ್ಡಿಯಲ್ಲಿ ಆಯೋಜಿಸಿದ್ದ ವಂಶಿ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಬಿ.ಸಿದ್ದಯ್ಯ ಉದ್ಘಾಟಿಸಿದರು. ಉಪಾಧ್ಯಕ್ಷ ಗಿರೀಶ್, ನಿರ್ದೇಶಕರಾದ ಬಿ.ಎಸ್.ಪೂರ್ಣಪ್ರಕಾಶ್, ಡಿ.ಟಿ.ಶರತ್ ಕುಮಾರ್, ಎಂ.ಎನ್.ಆನಂದ್, ಎಸ್.ಟಿ.ಮಹೇಶ್, ಕೆ.ಎಸ್.ಮಧು, ಬಿ.ಸಿ.ಬೋರೇಶ್, ತನುಜಾ, ಮಾನಸಾ, ಕೆ.ಎಸ್.ಪುಟ್ಟರಾಜು ಇದ್ದರು.
ಕೆ.ಎಂ.ದೊಡ್ಡಿ: ಸಹಕಾರಿ ಕ್ಷೇತ್ರದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದ್ದು, ಠೇವಣಿದಾರರ ವಿಶ್ವಾಸ ಉಳಿಸಿಕೊಳ್ಳುವ ಮೂಲಕ ಸಹಕಾರಿ ಬ್ಯಾಂಕ್‌ಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ವಂಶಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಿ.ಸಿದ್ದಯ್ಯ ಹೇಳಿದರು.
ಇಲ್ಲಿನ ಮಳವಳ್ಳಿ-ಮದ್ದೂರು ಮುಖ್ಯರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಗ್ರಾಹಕರ ಹಣವನ್ನು ಸುರಕ್ಷಿತವಾಗಿ ಕಾಪಾಡಿ, ಅಗತ್ಯ ಸಂದರ್ಭದಲ್ಲಿ ಮರಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಹೂಡಿಕೆ ಮಾಡುವ ವಿಶ್ವಾಸವನ್ನು ನಿರ್ಮಿಸಬೇಕು. ಸಹಕಾರಿ ಯೂನಿಯನ್‌ಗಳು ಮತ್ತಷ್ಟು ಗಟ್ಟಿಯಾಗಿ ಬೆಳೆಯಬೇಕಿದ್ದು, ಸಹಕಾರಿ ಕ್ಷೇತ್ರ ಮತ್ತು ಬ್ಯಾಂಕುಗಳ ಪ್ರಗತಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು
ಠೇವಣಿದಾರರೇ ನಮ್ಮ ಪಾಲಿನ ದೇವರು. ಅವರು ಇಟ್ಟಿರುವ ಹಣವನ್ನು ಜವಾಬ್ದಾರಿಯಿಂದ ಬಳಸಿಕೊಂಡು ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿಗೆ ಶ್ರಮಿಸಬೇಕು. ಸಾಮೂಹಿಕ ಚಿಂತನೆ ಹಾಗೂ ಸಮನ್ವಯದಿಂದ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಬಹುದು. ವಂಶಿ ಸೌಹಾರ್ದ ಸಹಕಾರ ಸಂಘವು ಪ್ರಾರಂಭವಾಗಿ 2 ವರ್ಷಗಳಾಗಿದ್ದು, ಷೇರುದಾರರು ಮತ್ತು ಜನತೆಯ ಸಹಕಾರದಿಂದ ಲಾಭದಾಯಕವಾಗಿ ನಡೆಯುತ್ತಿದ್ದು, ಮುಂದೆಯೂ ಇದೇ ರೀತಿಯ ಸಹಕಾರವಿರಲಿ ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಗಿರೀಶ್, ನಿರ್ದೇಶಕರಾದ ಬಿ.ಎಸ್.ಪೂರ್ಣಪ್ರಕಾಶ್, ಡಿ.ಟಿ.ಶರತ್ ಕುಮಾರ್, ಎಂ.ಎನ್.ಆನಂದ್, ಎಸ್.ಟಿ.ಮಹೇಶ್, ಕೆ.ಎಸ್.ಮಧು, ಬಿ.ಸಿ.ಬೋರೇಶ್, ತನುಜಾ, ಮಾನಸಾ, ಕೆ.ಎಸ್.ಪುಟ್ಟರಾಜು, ಸಿಇಒ ಇಂದು ಇದ್ದರು. ಇದೇ ವೇಳೆ ಪ್ರತಿ ತಿಂಗಳು ಇಎಂಐ ಪಾವತಿಸಿರುವ ಹೇಮಾ, ಎನ್.ಪ್ರತಾಪ್, ಸಿದ್ದೇಗೌಡ ಅವರನ್ನು ಸನ್ಮಾನಿಸಲಾಯಿತು.