ಕಂಪ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಪಾರ್ವತಿ, ಎ.ಸ್ವಾಮಿ, ತಾಯಮ್ಮ, ರಾಮ, ಓಬಳೇಶ ಇತರರಿದ್ದರು. 
ರಾಜ್ಯ

ವಿಮುಕ್ತ ದೇವದಾಸಿಯರ ಗಣತಿ ಸಮರ್ಪಕ ನಡೆಯಲಿ

ಕಂಪ್ಲಿ: ವಿಮುಕ್ತ ದೇವದಾಸಿಯರು ಮತ್ತು ಅವರ ಮೂರು ತಲೆಮಾರುಗಳ ಗಣತಿ ಸಮರ್ಪಕವಾಗಿ ನಡೆಸುವಂತೆ ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಗುರುವಾರ ಮನವಿ ಸಲ್ಲಿಸಿದರು. 
ತಾಲೂಕು ಅಧ್ಯಕ್ಷೆ ಪಾರ್ವತಿ, ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, 2007-08ರ ಗಣತಿಯಲ್ಲಿ ರಾಜ್ಯದ 46,800 ವಿಮುಕ್ತ ದೇವದಾಸಿಯರನ್ನು ಗುರುತಿಸಿದ್ದು, 20 ಸಾವಿರಕ್ಕೂ ಅಧಿಕ ವಿಮುಕ್ತ ದೇವದಾಸಿಯರು ಆಗ ಹೊರಗುಳಿದಿದ್ದರು. ಸದ್ಯದ ಗಣತಿಯಲ್ಲಿ 23,385 ವಿಮುಕ್ತ ದೇವದಾಸಿಯರನ್ನು ಮಾತ್ರ ಗುರುತಿಸಲಾಗಿದೆ.
 ಇದರಿಂದಾಗಿ ಈ ಗಣತಿ ದೋಷದಿಂದ ಕೂಡಿದೆ. ಪಟ್ಟಿಯಲ್ಲಿ ಇಲ್ಲದ ವಿಮುಕ್ತ ದೇವದಾಸಿಯರ ಗಣತಿ ಮಾಡಬೇಕು. ಕೂಡಲೇ ಬಾಕಿ ಪಿಂಚಣಿ ಬಿಡುಗಡೆಗೊಳಿಸಬೇಕು. 
ಮಕ್ಕಳ ಶಿಕ್ಷಣಕ್ಕೆ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕೆಂದು ಒತ್ತಾಯಿಸಿದರು.  
ಪದಾಧಿಕಾರಿಗಳಾದ ತಾಯಮ್ಮ, ಲಕ್ಷ್ಮೀದೇವಿ, ಗಂಗಮ್ಮ, ಮರಿಯಮ್ಮ, ಹೊನ್ನೂರಮ್ಮ, ಹುಲಿಗೆಮ್ಮ, ಶಿವಮ್ಮ, ರಾಜ್ಯ ದೇವದಾಸಿ ಮಹಿಳೆಯರ-ಮಕ್ಕಳ ಹೋರಾಟ ಸಮಿತಿ ತಾಲೂಕು ಕಾರ್ಯದರ್ಶಿ ರಾಮ, ಓಬಳೇಶ ಇತರರಿದ್ದರು.