ಅರಸೀಕೆರೆ ನಗರದ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂತೋಷ್‌ಕುಮಾರ್ ಚಾಲನೆ ನೀಡಿದರು. ಲೋಹಿತ್, ಬಿ.ಆರ್ ಶಶಿಧರ್ ಇತರರಿದ್ದರು. 
ರಾಜ್ಯ

ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್
  • ಹೆಂಜಗೊಂಡನಹಳ್ಳಿ ಬಡಾವಣೆ
ಅರಸೀಕೆರೆ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ನಿಯೋಜಿತ ಬೂತ್‌ಮಟ್ಟದ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್ ಹೇಳಿದರು.
ನಗರದ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಅರ್ಹ ಮತದಾರರ ಸೇರ್ಪಡೆ, ಅನರ್ಹರನ್ನು ತೆಗೆದು ಹಾಕುವುದು, ತಿದ್ದುಪಡಿ ಮಾಡುವ ಕಾರ್ಯ ಜು.29ರವರೆಗೆ ನಡೆಯಲಿದೆ. ಈಗಾಗಲೇ ಬಿಎಲ್ಒಗಳು ಸಂಬಂಧಿಸಿದಂತೆ ಅರ್ಜಿ ನಮೂನೆಗಳನ್ನು ವಿತರಿಸಲಿದ್ದಾರೆ. ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಮತದಾರರು ಅಗತ್ಯ ದಾಖಲೆಗಳನ್ನು ನೀಡಿ ಸಹಕಾರ ನೀಡಬೇಕು ಎಂದರು.
ಮೇಲ್ವಿಚಾರಕ ಲೋಹಿತ್, ಬಿಎಲ್ಒ ಶಶಿಧರ್ ಸೇರಿದಂತೆ ನಾಗರಿಕರು ಹಾಜರಿದ್ದರು.