ಐಐಬಿಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮ್ಯಾನೇಜ್ಮೆಂಟ್ ಓರಿಯಂಟೇಶನ್ ಮಾಡ್ಯೂಲ್ ಕಾರ್ಯಕ್ರಮದ ಸಮಾರೋಪದಲ್ಲಿ ಡಾ.ರಮೇಶ್ ಕುಡೆನಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಸಂಸ್ಥಾಪಕ ಜಯಪ್ರಕಾಶ್, ಪ್ರಾಂಶುಪಾಲ ಡಾ.ಟಿ.ಜಗ್ಗಯ್ಯ, ಬಾಲಿವುಡ್ ನಟಿ ಪ್ರತಿಾ ಮಿಶ್ರಾ ಇದ್ದರು.
ದೇವನಹಳ್ಳಿ : ಐಐಬಿಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮ್ಯಾನೇಜ್ಮೆಂಟ್ ಓರಿಯಂಟೇಶನ್ ಮಾಡ್ಯೂಲ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ಜರುಗಿತು. ಮ್ಯಾನೇಜ್ಮೆಂಟ್ ಓರಿಯಂಟೇಶನ್ ಮಾಡ್ಯೂಲ್ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಕ್ಷಣದ ಜತೆಗೆ ಉದ್ಯಮ ೇತ್ರದ ಅರಿವು, ನಾಯಕತ್ವ ಕೌಶಲ ಮತ್ತು ವೃತ್ತಿಪರ ಬೆಳವಣಿಗೆಗೆ ಅಗತ್ಯವಾದ ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಟಿ.ಜಗ್ಗಯ್ಯ ಮಾತನಾಡಿ, ಐಐಬಿಎಸ್ನಲ್ಲಿ ಮ್ಯಾನೇಜ್ಮೆಂಟ್ ಶಿಕ್ಷಣವನ್ನು ಕೇವಲ ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಬಾರದು ಎಂಬ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯಶಸ್ವಿ ಎಂ.ಬಿ.ಎ. ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಭಾರತ, ಕಾರ್ಪೊರೇಟ್ ಜಗತ್ತು ಹಾಗೂ ಜಾಗತಿಕ ವ್ಯವಹಾರಿಕ ಪರಿಸರದೊಂದಿಗೆ ಸಂಪರ್ಕಿಸಬೇಕು ಎಂದು ಹೇಳಿದರು.
ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟ್ರಾರ್ ಡಾ.ರಮೇಶ್ ಕುಡೆನಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಅವಧಿಯಲ್ಲಿ ಶೈಕ್ಷಣಿಕ ಜ್ಞಾನವನ್ನು ಪಡೆದುಕೊಳ್ಳುವುದರ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು. ಉದ್ಯೋಗ ೇತ್ರದಲ್ಲಿ ಯಶಸ್ವಿಯಾಗಲು ಶಿಸ್ತು, ಸಮಯಪಾಲನೆ, ನಾಯಕತ್ವ, ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ನಿರಂತರ ಕಲಿಕೆಯ ಮನೋಭಾವ ಅತ್ಯಗತ್ಯ ಎಂದು ಹೇಳಿದರು.
ವಿಶೇಷ ಅತಿಥಿ ಬಾಲಿವುಡ್ ನಟಿ ಪ್ರತಿಾ ಮಿಶ್ರಾ ಮಾತನಾಡಿ, ಆತ್ಮವಿಶ್ವಾಸ, ಸತತ ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವವು ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.
ಕಾಲೇಜು ಸಂಸ್ಥಾಪಕ ಜಯಪ್ರಕಾಶ್ ಮಾತನಾಡಿ, ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವುದರೊಂದಿಗೆ, ಅವರ ಭವಿಷ್ಯದ ವೃತ್ತೀಜಿವನಕ್ಕೆ ಉತ್ತಮ ದಿಕ್ಕು ನೀಡುವ ಮೂಲಕ ಅವರ ಭವಿಷ್ಯಕ್ಕೆ ಬೆಳಕಾಗಲಿದೆ ಎಂದರು.