ಲಿಂಗರಾಜ ಕಾಲೇಜಿನಲ್ಲಿ ಎನ್ಸಿಸಿ ಟಕದಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್ ಸಮಾರಂಭದಲ್ಲಿ ನಿವೃತ್ತ ಕ್ಯಾಫ್ಟನ್ ಚಂಗಪ್ಪ ಪಾಟೀಲ, ಸುಬೇದಾರ್ ಮೇಜರ್ ಕಲ್ಲಪ್ಪ ಪಾಟೀಲ, ಎನ್ಸಿಸಿ ತರಬೇತುದಾರ ಅರ್ಜುನ ಶಂಭುಚೆ ಅವರನ್ನು ಸನ್ಮಾನಿಸಲಾಯಿತು. ಡಾ.ಮಹೇಶ ಗುರನಗೌಡರ, ಗಿರಿಜಾ ಹಿರೇಮಠ ಇತರರಿದ್ದರು.
ಬೆಳಗಾವಿ: ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿ, ಯುದ್ಧದಲ್ಲಿ ಹುತಾತ್ಮರಾದ ಎಲ್ಲ ವೀರ ಯೋಧರ ತ್ಯಾಗ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಿವೃತ್ತ ಕ್ಯಾಫ್ಟನ್ ಚಂಗಪ್ಪ ಪಾಟೀಲ ಹೇಳಿದರು.
ಲಿಂಗರಾಜ ಕಾಲೇಜಿನಲ್ಲಿ ಎನ್ಸಿಸಿ ಟಕದಿಂದ ಈಚೆಗೆ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು, ಶಿಸ್ತು, ಕಠಿಣ ಪರಿಶ್ರಮ, ಉತ್ತಮ ಆರೋಗ್ಯ ಹಾಗೂ ಶಿಣ ಪಡೆಯುವುದು ಅಗತ್ಯ ಎಂದರು.
ಸುಬೇದಾರ್ ಮೇಜರ್ ಕಲ್ಲಪ್ಪ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳೆಸುವಲ್ಲಿ ಎನ್ಸಿಸಿ ಪಾತ್ರ ಮಹತ್ವದ್ದಾಗಿದೆ.
ಎನ್ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ ಪ್ರಾಸ್ತಾವಿಕ ಮಾತನಾಡಿದರು. ಡಾ.ಜಿ.ಎನ್.ಶೀಲಿ ಅಧ್ಯತೆ ವಹಿಸಿದ್ದರು. ಪಿಯು ಪ್ರಾಚಾಯೆರ್ ಗಿರಿಜಾ ಹಿರೇಮಠ,ಡಾ.ಸಿ.ರಾಮರಾವ್, ಡಾ.ಶಿವಾನಂದ ಬುಲಬುಲೆ, ಡಾ.ಎಚ್.ಎಂ.ಚನ್ನಪ್ಪಗೋಳ, ಪೊ.ಸುನೀತಾ ಮೂಡಲಗಿ, ಪೊ.ನಂದನ ಕಟಾಂಬಳೆ, ಡಾ.ಮಹಾಂತೇಶ ಸೊಗಲ, ಡಾ.ವಿ.ಪಿ.ಹಿರೇಮಠ ಇತರರಿದ್ದರು.