ಮುಳಬಾಗಿಲು Annual Day ತಾಲೂಕಿನ ತಾಯಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಕಸಾಪ ಜಿಲ್ಲಾ ಗಡಿನಾಡು ಪ್ರತಿನಿಧಿ ತಾಯಲೂರು ಗೋಪಿನಾಥ್​ ಮಾತನಾಡಿದರು. 
ರಾಜ್ಯ

ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಲಿ Annual Day

ಮುಳಬಾಗಿಲು: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ Annual Day ಪಾಲಕರ ಕಷ್ಟ ಸುಖಗಳನ್ನು ಅರಿತು ಉತ್ತಮ ಶಿಸ್ತು ಬದ್ಧ ಜೀವನ ರೂಢಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮುಂದಿನ ಜೀವನ ಸುಖದಾಯಕವಾಗಿರುತ್ತದೆ ಎಂದು ಕಸಾಪ ಜಿಲ್ಲಾ ಗಡಿನಾಡು ಪ್ರತಿನಿಧಿ ತಾಯಲೂರು ಗೋಪಿನಾಥ್​ ತಿಳಿಸಿದರು.
ತಾಲೂಕಿನ ತಾಯಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಈಗ ಉಳಿದಿರುವ 66 ದಿನಗಳಲ್ಲಿ ಪರೀಕ್ಷೆ ಎದುರಿಸಲು ರಚನಾತ್ಮಕ ಕ್ರಮ ತೆಗೆದುಕೊಳ್ಳಲು ಗುರುಗಳ ಮಾರ್ಗದರ್ಶನ ಪಡೆಯಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕಿ ನಾರಾಯಣಮ್ಮ ಶಾಲೆಯ ಪರಿಸ್ಥಿತಿ, ಫಲಿತಾಂಶ ಇತ್ಯಾದಿಗಳ ಬಗ್ಗೆ ಕೂಲಂಕುಶ ಮಾಹಿತಿ ನೀಡಿದರು.
ಕೋಲಾರದ ಡಯಟ್​ ಹಿರಿಯ ಉಪನ್ಯಾಸಕ ನಾಗರಾಜ್​, ಶಾಲೆಯನ್ನು ದತ್ತು ತೆಗೆದುಕೊಂಡು ಅಗತ್ಯ ಸೌಲಭ್ಯಗಳು ಕಲ್ಪಿಸುವ ಭರವಸೆ ನೀಡಿದರು.
ಶಾಲೆಯ ಶಿಕ್ಷಕರಾದ ರಮಾಮಣಿ, ಮುನಿಸ್ವಾಮಿಗೌಡ, ನವೀನ್​, ಶಾಹಿನ್​, ಸೈಯದ್​, ಹೈದರ್​ ಪಾಷಾ, ಲೀಲಾವತಿ ವೀಣಾ, ನಾಗರತ್ನಮ್ಮ, ಅಮ್ಜದ್​, ಅಬ್ಸರಹಮದ್​ ಇದ್ದರು.