ಗುರುಮಠಕಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಸಂತೋಷಕುಮಾರ ನೀರೆಟಿ, ಗೊವಿಂದರಾಜು ಕಾಮಿನ್, ಸಂಜೀವಕುಮಾರ ಚಂದಾಪುರ, ನಾಗೆಂದ್ರ ಪ್ರಸನ್ನ, ಪ್ರಗತಿ ಕಾಲೇಜಿನ ಪ್ರಚಾರ್ಯ ಶಿವಕುಮಾರರೆಡ್ಡಿ, ಜ್ನಾನೆಂದ್ರರೆಡ್ಡಿ ಇದ್ದರು. 
ರಾಜ್ಯ

ಕ್ರೀಡೆ ಯುವಕರ ಚೇತನವಾಗಲಿ

ಪ್ರಮುಖ ಮುಖ್ಯಾಂಶಗಳು

  • ಶಾಂತವೀರ ಗುರುಮುರುಘರಾಜೇಂದ್ರ ಶ್ರೀ ಅಬಿಮತ
  • ಗುರುಮಠಕಲ್‌ನಲ್ಲಿ ಕ್ರೀಡಾಕೂಟಕ್ಕೆ ಚಾಲನೆ
ಗುರುಮಠಕಲ್: ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗಿದ್ದು, ಕ್ರೀಡೆ ಯುವಜನರ ಚೇತನವಾಗಬೇಕು ಎಂದು ಖಾಸಾಮಠದ ಶ್ರೀ ಶಾಂತವೀರ ಗುರುಮುರಘರಾಜೇಂದ್ರ ಸ್ವಾಮಿಜಿ ಹೇಳಿದರು.
ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಯಾದಗಿರಿ ಹಾಗೂ ಪ್ರಗತಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ನಡೆಯುವಾಗ ಇಡುವ ಹೆಜ್ಜೆಗಳು ಹೇಗೆ ಹಿಂದೆ, ಮುಂದೆ ಆಗುತ್ತವೆಯೋ ಕ್ರೀಡೆಯಲ್ಲಿ ಸೋಲು-ಗೆಲುವು ಅದೇ ರೀತಿಯ ಎರಡು ಹೆಜ್ಜೆಗಳು. ಬಲಗಾಲು ಮುಂದೆ ಇದ್ದಾಗ ಎಡಗಾಲು ಹಿಂದಿರಲೇಬೇಕು. ಅದರಂತೆ ಈಗ ಸೋತವರು ಮುಂದೆ ಗೆಲ್ಲುವ ಸಾಧ್ಯತೆ ಇದ್ದೆ ಇರುತ್ತದೆ. ಅದೇ ಕಾರಣಕ್ಕೆ ಸೋಲೇ ಗೆಲುವಿನ ಮೆಟ್ಟಿಲು ಎನ್ನುತ್ತಾರೆ ಎಂದು ಹೇಳಿದರು.
ಈ ವೇಳೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷಕುಮಾರ ನೀರೆಟಿ, ಡೆಕ್ಕನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗೊವಿಂದರಾಜು ಕಾಮಿನ್, ಸಂಜೀವಕುಮಾರ್ ಚಂದಾಪುರ, ನಾಗೆಂದ್ರ ಪ್ರಸನ್ನ, ಪ್ರಗತಿ ಕಾಲೇಜಿನ ಪ್ರಾಚಾರ್ಯ ಶಿವಕುಮಾರ ರೆಡ್ಡಿ, ಮಲ್ಲಿಕಾರ್ಜುನ ಹೊಸಮನಿ, ಶಿವಾರೆಡ್ಡಿ, ಸುದರ್ಶನರೆಡ್ಡಿ, ಜ್ಞಾನೇಶ್ವರರೆಡ್ಡಿ, ದೇವೇಂದ್ರಪ್ಪ, ಅಕ್ತರಪ್ಯಾರೆ, ನಾರಾಯಣರೆಡ್ಡಿ, ಲಕ್ಷ್ಮಿಕಾಂತರೆಡ್ಡಿ, ಅಂಜನೇಯುಲು, ಸುನೀಲ್ ಸುಕ್ಲಾ, ನಂದಕಿಶೋರ, ಗೊಪಾಲ ರೆಡ್ಡಿ, ಮಹೇಶ ಗೌಡ, ವಿಜಯಕುಮಾರ, ಲಕ್ಷ್ಮಣ ದೊಡ್ಲಾ, ಮಹೇಶ, ನವಾಜರೆಡ್ಡಿ, ಸಾಬಾರೆಡ್ಡಿ ಸ್ವಾಗತಿಸಿದರು. ಜ್ಯೋತಿಲತಾ ತಡಿಬಿಡಿ ನಿರೂಪಿಸಿದರು.