ಗೋಕಾಕದ ಬಸವ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮಕ್ಕೆ ಡಾ.ಗುರುದೇವಿ ಹುಲೆಪ್ಪನವರಮಠ ಚಾಲನೆ ನೀಡಿದರು. ಡಾ.ವಿಜಯಲಕ್ಷಿ$್ಮ ಎಸ್​.ಹೊಸಮಠ, ಚಿತ್ರದುರ್ಗದ ಮಾತಾಜಿ ಇತರರಿದ್ದರು. 
ರಾಜ್ಯ

ಮಹಿಳೆಯರನ್ನು ಸಮಾಜ ಗೌರವಿಸಲಿ

ಗೋಕಾಕ: ಭಾರತದಲ್ಲಿನ ಶೇ.64ರಷ್ಟು ಮಹಿಳೆಯರು ಶಿಣ ಹೊಂದಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ತಿಳಿಸಿದರು.
ಇಲ್ಲಿನ ಲಕ್ಷಿ$್ಮ ಬಡಾವಣೆ ಬಸವ ಮಂದಿರದಲ್ಲಿ ಶನಿವಾರ ಬಸವ ಸತ್ಸಂಗ ಸಮಿತಿ, ಅಕ್ಕ ನಾಗಲಾಂಬಿಕಾ ಮಹಿಳಾ ಮಂಡಳ ಹಾಗೂ ಬಸವ ಯೋಗ ಪರಿವಾರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರ ಜ್ಞಾನ ಗುರುತಿಸಿ, ಗೌರವ ಭಾವದಿಂದ ಕಾಣಬೇಕು ಎಂದರು.
ಡಾ.ವಿಜಯಲಕ್ಷಿ$್ಮ ಎಸ್​.ಹೊಸಮಠ ಮಾತನಾಡಿ, ಮಹಿಳಾ ಸಬಲೀಕರಣ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಒತ್ತಡ, ಜವಾಬ್ದಾರಿ ನಿರ್ವಹಿಸಲು ಮಾರ್ಗದರ್ಶನ ಅವಶ್ಯ ಎಂದರು.
ಚಿತ್ರದುರ್ಗದ ಮಾತಾಜಿ ಮಾತನಾಡಿದರು.
ಅಕ್ಕ ನಾಗಲಾಂಬಿಕಾ ಮಹಿಳಾ ಮಂಡಳ ಅಧ್ಯೆ ಶಾಂತಾ ಹುರಕಡ್ಲಿ, ಗೌರವಾಧ್ಯೆ ಪಾರ್ವತೆಮ್ಮ ಶಿರೋಳ, ಬಸವ ಯೋಗ ಪರಿವಾರದ ಯೋಗ ಗುರುಮಾತೆ ಸೀಮಾ ಕೆ., ಸುಮಂಗಲಾ ಹಾದಿಮನಿ ಇತರರಿದ್ದರು.