ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ರಾಮಚಂದ್ರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
- ಮೂಲ ವಿಜ್ಞಾನ, ಭೌತ ವಿಜ್ಞಾನವನ್ನು ಪಕ್ಕಕ್ಕೆ ಸರಿಸಿ ಎಲ್ಲರೂ ತಂತ್ರಜ್ಞಾನದ ಹಿಂದೆ ಬಿದ್ದಿದ್ದಾರೆ. ವಿಜ್ಞಾನವಿಲ್ಲದೆ, ತಂತ್ರಜ್ಞಾನವಿಲ್ಲ, ತಂತ್ರಜ್ಞಾನದ ಮೂಲ ಬೇರು ವಿಜ್ಞಾನ ಎಂಬುದನ್ನು ಅರಿಯಬೇಕಿದೆ
- ವಿಜ್ಞಾನವನ್ನು ಇಂಗ್ಲಿಷ್‌ನಲ್ಲಿಯೆ ಕಲಿತರಾದರೂ ಕನ್ನಡಿಗರಿಗಾಗಿ ವಿಜ್ಞಾನವನ್ನು ತಲುಪಿಸುವ ಕೆಲಸವಾಗಬೇಕು. ಸರಳ ಕನ್ನಡದಲ್ಲಿ ವಿಜ್ಞಾನವನ್ನು ತಲುಪಿಸಿದರೆ ಎಲ್ಲರಿಗೂ ಅರ್ಥವಾಗುವ ಜತೆಗೆ ಅಳವಡಿಸಿಕೊಳ್ಳಲು ಸಹಾಯ
- ವಿಜ್ಞಾನವು ಎಲ್ಲಿಯೂ ಯಾವುದನ್ನೂ ಅಂತಿಮವೆಂದು ಹೇಳಲ್ಲ. ಸಂಶೋಧನೆ ನಡೆದಂತೆಲ್ಲಾ ಹೊಸತನ ಬರುತ್ತದೆ. ಆದರೆ, ಧರ್ಮವು ಅಧಿಕಾರಕ್ಕಾಗಿ ಇದೇ ಅಂತಿಮವೆಂದು ಹೇಳುತ್ತದೆ. ಇದೇ ಕಾರಣಕ್ಕಾಗಿ ವಿರೋಧವಿದೆ
ಬೆಂಗಳೂರು: ವಿಜ್ಞಾನವನ್ನು ಇಲ್ಲಿಯವರೆಗೂ ಪಾಶ್ಚಾತ್ಯ ನೆಲೆಗಟ್ಟಿನಲ್ಲಿಯೇ ನೋಡಲಾಗಿದೆ. ಆದ್ದರಿಂದ ‘ವಿಜ್ಞಾನ ಮತ್ತು ಭಾರತೀಯ ಪರಂಪರೆ’ಯ ಅಮೂರ್ತ ಚಿಂತನೆಯಾಗಬೇಕಿದೆ ಎಂದು ವಿಮರ್ಶಕ ಪ್ರೊ. ಎಚ್.ಎಸ್. ರಾಘವೇಂದ್ರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ನೃಪತುಂಗ ವಿಶ್ವವಿದ್ಯಾಲಯದ ಎರಡು ಮತ್ತು ಮೂರನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಇಂದು ಮೂಲ ವಿಜ್ಞಾನ, ಭೌತ ವಿಜ್ಞಾನವನ್ನು ಪಕ್ಕಕ್ಕೆ ಸರಿಸಿ ಎಲ್ಲರೂ ತಂತ್ರಜ್ಞಾನದ ಹಿಂದೆ ಬಿದ್ದಿದ್ದಾರೆ. ವಿಜ್ಞಾನವಿಲ್ಲದೆ, ತಂತ್ರಜ್ಞಾನವಿಲ್ಲ, ತಂತ್ರಜ್ಞಾನದ ಮೂಲ ಬೇರು ವಿಜ್ಞಾನ ಎಂಬುದನ್ನು ಅರಿಯಬೇಕಿದೆ ಎಂದು ಹೇಳಿದರು.
ಯುವ ಜನರು ವಿಜ್ಞಾನವನ್ನು ಇಂಗ್ಲಿಷ್‌ನಲ್ಲಿಯೆ ಕಲಿತರಾದರೂ ಕನ್ನಡಿಗರಿಗಾಗಿ ವಿಜ್ಞಾನವನ್ನು ತಲುಪಿಸುವ ಕೆಲಸವಾಗಬೇಕು. ಸರಳ ಕನ್ನಡದಲ್ಲಿ ವಿಜ್ಞಾನವನ್ನು ತಲುಪಿಸಿದರೆ ಎಲ್ಲರಿಗೂ ಅರ್ಥವಾಗುವ ಜತೆಗೆ ಅಳವಡಿಸಿಕೊಳ್ಳಲು ಸಹಾಯವಾಗಲಿದೆ ಎಂದರು.
ವಿಜ್ಞಾನ ಪ್ರಗತಿಯೇ ಹೊರತು ವಿನಾಶವಲ್ಲ:
ಇತ್ತೀಚಿನ ದಿನಗಳಲ್ಲಿ ವಿಜ್ಞಾನವನ್ನು ಪ್ರಗತಿಗಿಂತ ವಿನಾಶಕ್ಕೇ ಹೆಚ್ಚು ಬಳಸಲಾಗುತ್ತಿದೆ. ಡ್ರೋನ್ ಮೂಲಕ ಎಲ್ಲೆಂದರಲ್ಲಿ ಬಾಂಬ್ ಹಾಕುವುದಕ್ಕಾಗಿಯೇ ವಿಜ್ಞಾನದ ಸಂಶೋಧನೆಗಳು ನಡೆದದ್ದು ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಹಾಗೆಯೇ ವಿಜ್ಞಾನ ಮತ್ತು ಧರ್ಮದ ನಡುವೆ ವಿರೋಧವಿದೆ. ಏಕೆಂದರೆ, ವಿಜ್ಞಾನವು ಎಲ್ಲಿಯೂ ಯಾವುದನ್ನೂ ಅಂತಿಮವೆಂದು ಹೇಳಲ್ಲ. ಸಂಶೋಧನೆ ನಡೆದಂತೆಲ್ಲಾ ಹೊಸತನ ಬರುತ್ತದೆ. ಆದರೆ, ಧರ್ಮವು ಅಧಿಕಾರಕ್ಕಾಗಿ ಇದೇ ಅಂತಿಮವೆಂದು ಹೇಳುತ್ತದೆ. ಇದೇ ಕಾರಣಕ್ಕಾಗಿ ವಿರೋಧವಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
6 ಮಂದಿಗೆ ಗೌಡಾ:
ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ರಾಮಚಂದ್ರ, ಜಲಸಂಪನ್ಮೂಲ ನಿರ್ವಹಣಾ ತಜ್ಞ ಡಾ. ಕೆ. ಜೈಪ್ರಕಾಶ್, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್. ಮರಿಸ್ವಾಮಿ ಮತ್ತು ಬಾಲಭವನದ ಕಾರ್ಯದರ್ಶಿ ನಿಶ್ಚಲ್ ಬಿ.ಎಚ್. ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
18 ಮಂದಿಗೆ ಚಿನ್ನದ ಪದಕ:
18 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 700 ಸ್ನಾತಕ ಮತ್ತು 4,081 ಸ್ನಾತಕೋತ್ತರ ಪದವಿ ಸೇರಿ 1,081 ವಿದ್ಯಾರ್ಥಿಗಳು ಪದವಿ ಪ್ರದಾನ ಮಾಡಲಾಯಿತು.
"
ನಮ್ಮ ವಿದ್ಯಾರ್ಥಿಗಳು ಉತ್ತಮ ಸ್ಥಾನ ಮತ್ತು ಶ್ರೇಯಸ್ಸು ಪಡೆಯುಬೇಕು ಎಂಬುದನ್ನು ಮಾತ್ರ ಶಿಕ್ಷಕ, ಉಪನ್ಯಾಸಕ ಬಯಸುತ್ತಾನೆ. ಸಾಧಕ ವಿದ್ಯಾರ್ಥಿಗಳೇ ನಮ್ಮ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದಾರೆ. ಯಶಸ್ಸು ಪಡೆಯಲು ಜ್ಞಾನದ ಜತೆಗೆ ನಿರಂತರ ಶ್ರಮ ಮುಖ್ಯ.
— - ಪ್ರೊ. ಬಿ. ಕೆ. ಮೋಹನ್ ಕುಮಾರ್, ಕುಲಪತಿ, ನೃಪತುಂಗ ವಿವಿ
ರು
ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಸಾಮಾನ್ಯವಾಗಿ ಘಟಿಕೋತ್ಸವಕ್ಕೆ ರಾಜ್ಯಪಾಲರು ಅಧ್ಯಕ್ಷತೆ ವಹಿಸುತ್ತಾರೆ. ಆದರೆ, ಕಾರಣಾಂತರಗಳಿಂದ ಆಗಮಿಸಲಿಲ್ಲ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ಮಂಜುನಾಥ ಟಿ.ಎಂ. ೋಷಿಸಿದರು.