ಸೇಡಂನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪದಲ್ಲಿ ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಮಾತನಾಡಿದರು. ಅನುರಾಧಾ ಪಾಟೀಲ್, ಜಗದೀಶ ಕಡಬಗಾಂವ್, ಎನ್.ಎಂ.ತಳವಾರ ಇದ್ದರು.
- ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಅಭಿಮತ
- ಸೇಡಂನಲ್ಲಿ ವಿಚಾರ ಸಂಕಿರಣ ಸಮಾರೋಪ
ಸೇಡಂ: ಇಂದಿನ ಸಂಶೋಧನೆ ಕುಳಿತಲ್ಲೆ ನಡೆಯುತ್ತಿರುವುದು ನೋವಿನ ಸಂಗತಿ. ಸಂಶೋಧನಾ ವಿದ್ಯಾರ್ಥಿಗಳು ಸ್ಥಳಕ್ಕೆ ತೆರಳಿ ನೈಜತೆಯ ಅಧ್ಯಯನ ನಡೆಸಿ ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಹೇಳಿದರು.
ಅನ್ವೀಕಿ ಅಧ್ಯಯನ ಕೇಂದ್ರದಲ್ಲಿ ಮೈಸೂರಿನ ಶಾಸಿಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ನೃಪತುಂಗ ಅಧ್ಯಯನ ಕೇಂದ್ರದಿಂದ ಶ್ರೀ ವಿಜಯನ ಕವಿರಾಜಮಾರ್ಗ ಹಾಗೂ ರಾಷ್ಟ್ರಕೂಟರ ಶಾಸನಗಳು ವಿಷಯ ಕುರಿತು ಆಯೋಜಿಸಲಾದ ಮೂರು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಸಮಾರೋಪದಲ್ಲಿ ಮಾತನಾಡಿ, ಬಿಸಿಲು, ಮಳೆ, ಧೂಳು, ಆಯಾಸ ಎಲ್ಲವೂ ಇರುತ್ತವೆ. ಅವುಗಳಿಗೆ ಜಗ್ಗದೆ, ಬಗ್ಗದೆ ನೈಜ ಇತಿಹಾಸ ಕಲೆಹಾಕುವ ಕೆಲಸ ಯುವ ಸಂಶೋಧನಾಕಾರರು ಮಾಡಬೇಕು ಎಂದು ಕರೆ ನೀಡಿದರು.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅನುರಾಧಾ ಪಾಟೀಲ್, ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಜಗದೀಶ ಕಡಬಗಾಂವ್, ಶಾಸಿಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪೊ.ಎನ್.ಎಂ ತಳವಾರ ಮಾತನಾಡಿದರು.
ಉಪನ್ಯಾಸಕಿ ಸುಗಂಧಾ ಪ್ರಾರ್ಥಿಸಿದರು. ಸಂಶೋಧಕ ಡಾ.ಸಣ್ಣಪಾಪಯ್ಯ ಸ್ವಾಗತಿಸಿದರು. ಸುವರ್ಣ ವಝೆ ನಿರೂಪಣೆ ಮಾಡಿದರು. ಅವಿನಾಶ ಬೋರಂಚಿ ವಂದಿಸಿದರು.