ಆಬಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಟ್ರಾೃಕ್ ಸೂಟ್, ಶಾಲಾ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಕೃಷ್ಣೇಗೌಡ, ಆರ್.ಸುರೇಶ್, ಚನ್ನಮ್ಮನಂಜಯ್ಯ, ಪವಿತ್ರಾ ಶಿವಣ್ಣ, ಸಂತೋಷ್, ಭಾಗ್ಯಮ್ಮ, ರಮೇಶ್, ಶಿವಪ್ಪ, ಕುಮಾರ್, ಅಕ್ಷತ್, ಉಮೇಶ್ ಇದ್ದರು.  
ರಾಜ್ಯ

ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕ ಕೃಷ್ಣೇಗೌಡ
  • ದಿ.ಶ್ರೀಮಾನ್ ನಂಜಯ್ಯ ಅವರ ಸ್ಮರಣಾರ್ಥ

ಮದ್ದೂರು:

ದೇಶಾಭಿಮಾನ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಮಾಜ ಸೇವಕ ಕೃಷ್ಣೇಗೌಡ ಸಲಹೆ ನೀಡಿದರು.

ದಿ.ಶ್ರೀಮಾನ್ ನಂಜಯ್ಯ ಅವರ ಸ್ಮರಣಾರ್ಥ ತಾಲೂಕಿನ ಆಬಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಟ್ರಾೃಕ್ ಸೂಟ್, ಶಾಲಾ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸುವ ಜತೆಗೆ ದೇಶಾಭಿಮಾನ, ಮಾನವೀಯ ಮೌಲ್ಯಗಳನ್ನೂ ಅಳವಡಿಸಿಕೊಂಡು ಸಮಾಜದಲ್ಲಿ ನೊಂದವರ ಬಾಳಿಗೆ ಆಸರೆಯಾಗಬೇಕು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆಯಿದ್ದು, ಸೂಕ್ತ ಮಾರ್ಗದರ್ಶನ, ಸಹಕಾರ ಮತ್ತು ತರಬೇತಿ ನೀಡಿದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ತೋರಿಸಿರುವ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಆರ್.ಸುರೇಶ್

ಸಮಾಜ ಸೇವಕರಾದ ಕೃಷ್ಣೇಗೌಡ, ಚನ್ನಮ್ಮನಂಜಯ್ಯ, ಪವಿತ್ರಾ ಶಿವಣ್ಣ ಅವರನ್ನು ಶಾಲೆಯ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಆರ್.ಸುರೇಶ್ ಆಬಲವಾಡಿ, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್, ಮುಖ್ಯಶಿಕ್ಷಕಿ ಭಾಗ್ಯಮ್ಮ, ಶಿಕ್ಷಕರಾದ ರಮೇಶ್, ಶಿವಪ್ಪ, ಕುಮಾರ್, ಅಕ್ಷತ್, ಉಮೇಶ್, ನಾರಾಯಣಸ್ವಾಮಿ ಇತರರು ಇದ್ದರು.