ಕನಕಗಿರಿ ತಾಲೂಕಿನ ಸೂಳೇಕಲ್ ಗ್ರಾಪಂ ಮುಂದೆ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ಎಸ್‌ಎಫ್‌ಐನಿಂದ ಶನಿವಾರ ಪ್ರತಿಭಟನೆ ನಡೆಸಿ ಗ್ರಾಪಂ ನೌಕರಗೆ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ರಮೇಶ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ ಇತರರಿದ್ದರು. 
ರಾಜ್ಯ

ಏನೇ ಆಗಲಿ ನರೇಗಾ ಮುಂದುವರಿಯಲಿ

JAGADEESH KUMBAR

ಪ್ರಮುಖ ಮುಖ್ಯಾಂಶಗಳು

  • ನರೇಗಾ ಮುಂದುವರಿಯಲಿ
  • ಎಸ್‌ಎಫ್‌ಐನಿಂದ ಪ್ರತಿಭಟನೆ
ಕನಕಗಿರಿ: ಮನರೇಗಾ ಮರು ಸ್ಥಾಪನೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಕೃಷಿ ಕೂಲಿಕಾರರ ಹಾಗೂ ಕಾರ್ಮಿಕರ ಸಂಘ ಮತ್ತು ಎಸ್‌ಎಫ್‌ಐನಿಂದ ತಾಲೂಕಿನ ಸೂಳೇಕಲ್ ಗ್ರಾಪಂ ವ್ಯಾಪ್ತಿಯ ಕಾಮಗಾರಿ ಸ್ಥಳದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ತಾಲೂಕು ಅಧ್ಯಕ್ಷ ರಮೇಶ ಮಾತನಾಡಿ, ಕೇಂದ್ರ ಸರ್ಕಾರ ನರೇಗಾವನ್ನು ತೆಗೆದು ಹಾಕಿ ಹೊಸ ಕಾಯ್ದೆ ವಿಬಿ ಜಿ ರಾಮ್ ಜಿ ಜಾರಿಗೊಳಿಸಿದ್ದು, ಇದು ಕೂಲಿಕಾರರ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ. 
ನೂತನ ಯೋಜನೆಯಿಂದ ಕಾರ್ಮಿಕರಿಗೆ 125 ದಿನಗಳ ಕೆಲಸ ಸಿಗದೇ ಕೆಲಸದಿಂದ ವಂಚಿತರಾಗುತ್ತಾರೆ. ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ಮೊತ್ತ ಖರ್ಚು ಮಾಡಬೇಕೆಂದಿರುವುದರಿಂದ ಕೂಲಿಕಾರರಿಗೆ ಕೂಲಿ ಸರಿಯಾಗಿ ದೊರಕುವುದೇ ಅನುಮಾನವಾಗಿದೆ. 
ಕೇಂದ್ರ-ರಾಜ್ಯ ಸರ್ಕಾರ ಅನುದಾನ ವಿಷಯದಲ್ಲಿ ಕಾಲಹರಣ ಮಾಡುವುದರಿಂದ ಕಾರ್ಮಿಕರ ಜೀವನದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ನರೇಗಾವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಕರಡಿ ಶರಣು, ಲಖನಗೌಡ, ಬಸವರಾಜ್, ಪ್ರಭು, ಗೌರಮ್ಮ, ಗಂಗಮ್ಮ, ಹಂಪಮ್ಮ, ಶರಣಮ್ಮ, ದುರ್ಗಮ್ಮ ಇತರರಿದ್ದರು.