ಹುಲಸೂರಿನ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಶ್ರೀ ಡಾ.ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ತಹಸೀಲ್ದಾರ್​ ಶಿವಾನಂದ ಮೇತ್ರೆ, ಡಾ.ಶಂಕರಗೌಡ, ಡಾ.ಅನೀತಾ ಮಹಾಜನ, ಡಾ.ವಚನಶ್ರೀ ನಿಡೋದೆ, ಬಸವರಾಜ ಚೌರೆ ಇತರರಿದ್ದರು. 
ರಾಜ್ಯ

ತಾಯಂದಿರು ಸ್ತನ್ಯಪಾನದ ಮಹತ್ವ ತಿಳಿಯಲಿ

ಪ್ರಮುಖ ಮುಖ್ಯಾಂಶಗಳು

  • ಡಾ.ಶಂಕರಗೌಡ ಮನವಿ
  • ಹುಲಸೂರಿನಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಹುಲಸೂರು
ಮಗುವಿನ ಆರೋಗ್ಯದಲ್ಲಿ ಸ್ತನ್ಯಪಾನಕ್ಕಿಂತ ಶ್ರೇಷ್ಠ ಮತ್ತೊಂದಿಲ್ಲ. ತಾಯಂದಿರು ಸ್ತನ್ಯಪಾನದ ಮಹತ್ವ ತಿಳಿದುಕೊಳ್ಳಬೇಕು ಎಂದು ನೀಲಗಂಗಾ ಎಜುಕೇಷನಲ್​ ಟ್ರಸ್ಟ್​ ಕಾರ್ಯದರ್ಶಿ ಡಾ.ಶಂಕರಗೌಡ ಹೇಳಿದರು.
ನಗರದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನೀಲಗಂಗಾ ಎಜುಕೇಷನಲ್​ ಟ್ರಸ್ಟ್​ ಹಾಗೂ ನೀಲಗಂಗಾ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಅದರಲ್ಲಿ ಮುಖ್ಯವಾಗಿ ತಾಯಿಯ ಸ್ಥಾನ ಅತ್ಯಂತ ಮಹತ್ವದ್ದು, ತಾಯಿಯಾಗಿ ಮಗುವಿನ ಬೆಳವಣಿಗೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದ ಅವಶ್ಯಕತೆವಿದ್ದು, ಮಗುವಿನ ಆರೋಗ್ಯಕರ ಬೆಳವಣಿಗೆಗೆ ಮಹತ್ವ ನೀಡಬೇಕು ಎಂದರು.
ಈಗಾಗಲೇ ನೀಲಗಂಗಾ ಸಂಸ್ಥೆಯಿಂದ ಆಯುರ್ವೇದ ಆಸ್ಪತ್ರೆಯಿಂದ ಮಗು ಮತ್ತು ತಾಯಿಯ ಆರೋಗ್ಯಕ್ಕೆ ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ತಹಸೀಲ್ದಾರ್​ ಶಿವಾನಂದ ಮೇತ್ರೆ ಮಾತನಾಡಿ, ಸ್ತನ್ಯಪಾನದ ಬಗ್ಗೆ ಬಹಳಷ್ಟು ತಾಯಂದಿರಲ್ಲಿ ಗೊಂದಲಗಳಿವೆ. ಆದರೆ ಈ ಬಗ್ಗೆ ತಾಯಂದಿರು ಜಾಗೃತರಾಗಿ ಮಕ್ಕಳಿಗೆ ಆರೋಗ್ಯವಂತರನ್ನಾಗಿ ಮಾಡುವ ಜತೆಗೆ ಸ್ವಸ್ಥ ಸಮಾಜದ ಮೂಲಕ ಆರೋಗ್ಯಕರ ಸಮಾಜ ನಿಮಾರ್ಣಕ್ಕೆ ಮುಂದಾಗಬೇಕು ಎಂದರು.
ನೀಲಗಂಗಾ ಎಜುಕೇಶನಲ್​ ಟ್ರಸ್ಟ್​ ಅಧ್ಯಕ್ಷೆ ಡಾ.ಅನೀತಾ ಮಹಾಜನ ಮಾತನಾಡಿ, ನಮ್ಮ ಸಂಸ್ಥೆ ಸ್ತ್ರೀ ರೋಗ ವಿಭಾಗದಿಂದ ಮಗು ಮತ್ತು ತಾಯಂದಿರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ನೀಡುತ್ತಿದ್ದೇವೆ. ಯರಬಾಗದಲ್ಲಿ ನಮ್ಮ ಆಯುರ್ವೇದ ಕಾಲೇಜಿನಿಂದ ನೀಡುವ ಸೌಲಭ್ಯದ ಸದುಪಯೋಗ ಪ್ರತಿಯೊಬ್ಬರೂ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ, ದಾದಾ ಮಹಾರಾಜ, ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ ಮೈಲಾರಿ, ಡಾ.ವಚನಶ್ರೀ ನಿಡೋದೆ, ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಪಿಕೆಪಿಎಸ್​ ಸಹಕಾರ ಸಂಘದ ಅಧ್ಯಕ್ಷ ಭಾಗವತ ಜಾನಬಾ, ನಿರ್ದೇಶಕ ಬಸವರಾಜ ಚೌರೆ, ಡಾ.ಸಚಿನ್​, ಡಾ.ಬಸಯ್ಯ ಮಠಪತಿ, ಡಾ.ವೇಣುಗೋಪಾಲ, ಡಾ.ಅರ್ಚನಾ, ಡಾ.ನಿವೇದಿತಾ, ಡಾ.ವಿದ್ಯಾ, ರೋಗ, ಡಾ.ಗೌತಮಿ, ಡಾ.ರಾಘವೇಂದ್ರ, ಡಾ.ಭವ್ಯಾ, ಡಾ.ಶಶಿಕುಮಾರ ಇತರರಿದ್ದರು. ನೂರಅಹ್ಮದ್​ ಮಕಾನದಾರ್​ ಸ್ವಾಗತಿಸಿ ನಿರೂಪಣೆ ಮಾಡಿದರು. ನೀಲಗಂಗಾ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ತನ್ಯಪಾನದ ಬಗ್ಗೆ ಜಾಗೃತಿಯ ನಾಟಕ ಪ್ರದರ್ಶನ ಮಾಡಿದರು.