ಮೂರನೇ ಬಾರಿ ಎಂಎಲ್ಸಿಯಾಗಿ ಕಲಬುರಗಿಗೆ ಸೋಮವಾರ ಆಗಮಿಸಿದ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಸತ್ಕರಿಸಲಾಯಿತು. ಜಗದೇವ ಗುತ್ತೇದಾರ್​, ಡಾ.ಕಿರಣ್​ ದೇಶಮುಖ, ಪ್ರವಿಣ ಪಾಟೀಲ್​ ಹರವಾಳ, ರಾಜಗೋಪಾಲ ರೆಡ್ಡಿ, ರಮೇಶ ಮರಗೋಳ್​, ಸುನಿಲ್​ ದೊಡ್ಡಮನಿ, ಫಾರುಕ್​ ಮನಿಯಾರ್​, ಈರಣ್ಣ ಝಳಕಿ, ಶಕೀಲ್​ ಸರಡಗಿ, ಬೈಲಪ್ಪ ನೆಲೋಗಿ, ಮಹಾಂತೇಶ ಕೌಲಗಿ, ರಾಜೇಶ ಗುತ್ತೇದಾರ್​, ಸೋಮಶೇಖರ ಹಿರೇಮಠ ಇದ್ದರು. 
ರಾಜ್ಯ

ಕಮಕನೂರ ಜನಪರ ಕೆಲಸ ಮಾಡಲಿ

ಪ್ರಮುಖ ಮುಖ್ಯಾಂಶಗಳು

  • ಅಫಜಲಪುರ ಶಾಸಕ ಎಂ.ವೈ.ಪಾಟೀಲ್​ ಸಲಹೆ
  • 3ನೇ ಬಾರಿಗೆ ಎಂಎಲ್ಸಿಯಾದ ತಿಪ್ಪಣ್ಣಪ್ಪಗೆ ಅದ್ದೂರಿ ಸ್ವಾಗತ
ಕಲಬುರಗಿ: ವಿಧಾನ ಪರಿಷತ್ತಿನ ಒಳ ಮತ್ತು ಹೊರಗೆ ಜನಪರವಾಗಿ ಗಟ್ಟಿ ದನಿಯಲ್ಲಿ ಮಾತನಾಡುವ ಸಾಮರ್ಥ್ಯ ನೂತನ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಹೊಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಮಂತ್ರಿ ಪ್ರಿಯಾಂಕ್​ ಖರ್ಗೆ, ಸಿಎಂ, ಕೆಪಿಸಿಸಿ ಅಧ್ಯಕ್ಷರ ಸಹಕಾರದಿಂದ ಮೂರನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದು, ಸದ್ಬಳಕೆ ಮೂಲಕ ಜನಪರ ಕೆಲಸ ಮಾಡುವ ವಿಶ್ವಾಸವಿದೆ ಎಂದು ಶಾಸಕ ಎಂ.ವೈ. ಪಾಟೀಲ್​ ಹೇಳಿದರು.
ಮೇಲ್ಮನೆಗೆ ಮೂರನೇ ಸಲ ಆಯ್ಕೆಯಾದ ನಂತರ ಸೋಮವಾರ ನಗರಕ್ಕೆ ಆಗಮಿಸಿದ ಕಮಕನೂರಗೆ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷ ನಿಷ್ಠಾವಂತರಿಗೆ ನ್ಯಾಯ ನೀಡುತ್ತದೆ ಎಂಬುದಕ್ಕೆ ತಿಪ್ಪಣ್ಣಪ್ಪಗೆ ದೊರೆತ ಅವಕಾಶವೇ ನಿದರ್ಶನ. ನೂರಾರು ವರ್ಷ ಇತಿಹಾಸದ ಕಾಂಗ್ರೆಸ್​ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಕಲ್ಪಿಸುತ್ತಿದೆ. ಅಧಿಕಾರ ಹಂಚುವ ಮೂಲಕ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ದಾಂತ ರೂಢಿಸಿಕೊಂಡು ಬಂದಿದೆ ಎಂದರು.
ಕಾಂಗ್ರೆಸ್​ ಮುಖಂಡ ಮಹಾಂತಪ್ಪ ಸಂಗಾವಿ ಮಾತನಾಡಿದರು. ಜೆಸ್ಕಾಂ ಅಧ್ಯಕ್ಷ ಪ್ರವಿಣ್​ ಪಾಟೀಲ್​ ಹರವಾಳ, ರಾಜಗೋಪಾಲರೆಡ್ಡಿ, ರಮೇಶ ಮರಗೋಳ್​, ಸುನಿಲ್​ ದೊಡ್ಡಮನಿ, ಫಾರುಕ್​ ಮನಿಯಾರ್​, ಈರಣ್ಣ ಝಳಕಿ, ಶಕೀಲ್​ ಸರಡಗಿ, ಪವನಕುಮಾರ ವಳಕೇರಿ, ಬೈಲಪ್ಪ ನೆಲೋಗಿ, ಮಹಾಂತೇಶ ಕೌಲಗಿ, ಜೆ.ಎಂ. ಕೊರಬು, ರಾಜೇಶ ಗುತ್ತೇದಾರ್​, ಶಿವಾನಂದ ಹೊನಗುಂಟಿ, ದೇವೇಂದ್ರಪ್ಪ ಹೆರೂರ, ಸೋಮಶೇಖರ ಹಿರೇಮಠ ಇತರರಿದ್ದರು. ಜಿಲ್ಲಾಧ್ಯಕ್ಷರೂ ಆದ ಎಂಎಲ್​ಸಿ ಜಗದೇವ ಗುತ್ತೇದಾರ್​ ಸ್ವಾಗತಿಸಿದರು. ಡಾ.ಕಿರಣ ದೇಶಮುಖ ನಿರೂಪಣೆ ಮಾಡಿದರು.
ಅದ್ದೂರಿ ಮೆರವಣಿಗೆ
ಮೂರನೇ ಬಾರಿಗೆ ವಿಧಾನ ಪರಿಷತ್​ ಸದಸ್ಯರಾದ ನಂತರ ನಗರಕ್ಕೆ ಆಗಮಿಸಿದ ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಮಾನ ನಿಲ್ದಾಣದಿಂದ ಕಾಂಗ್ರೆಸ್​ ಕಚೇರಿವರೆಗೆ ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯಿತು. ಜಗತ್​ ವೃತ್ತದಲ್ಲಿನ ಡಾ.ಬಿ.ಆರ್​. ಅಂಬೇಡ್ಕರ್​, ಜಗಜ್ಯೋತಿ ಬಸವೇಶ್ವರ ಹಾಗೂ ಪಾಲಿಕೆ ಬಳಿಯ ಬಾಬು ಜಗಜೀವನರಾಂ ಪ್ರತಿಮೆಗೆ ಕಮಕನೂರ ಮಾಲಾರ್ಪಣೆ ಮಾಡಿದರು.
"

ಚಿತ್ತಾಪುರ ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಸ್ಥಾನದಿಂದ ಮೇಲ್ಮನೆ ಪ್ರವೇಶಿಸುವವರೆಗೆ ಕಮಕನೂರ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಪಕ್ಷನಿಷ್ಠೆ ಮತ್ತು ಪ್ರಾಮಾಣಿಕತೆ ಜತೆ ನೇರ ನುಡಿಯ ರಾಜಕಾರಣಿ. ಮುಂದಿನ ಆರು ವರ್ಷ ಜನಪರ, ಸಮಾಜಪರ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ.

— > ಜಗದೇವ ಗುತ್ತೇದಾರ್​ ಜಿಲ್ಲಾಧ್ಯಕ್ಷ, ಕಾಂಗ್ರೆಸ್​ ಕಲಬುರಗಿ
"

ತಿಪ್ಪಣ್ಣಪ್ಪ ಕಮಕನೂರ ಹ್ಯಾಟ್ರಿಕ್​ ಹೀರೋ ಆಗಿದ್ದಾರೆ. ಹಿಂದುಳಿದ ಸಮುದಾಯದ ಭರವಸೆಯ ನಾಯಕನಾಗಿರುವ ಇವರು ಎಲ್ಲ ಸಮುದಾಯದ ಬೇಕು-ಬೇಡಗಳಿಗೆ ಸ್ಪಂದಿಸುವಂಥ ವ್ಯಕ್ತಿತ್ವ ಹೊಂದಿದ್ದಾರೆ.

— > ಶರಣಪ್ಪ ಮಾನೇಗಾರ್​ ಮುಖಂಡ

"

ಬೆಂಗಳೂರು ವಿಧಾನಸೌಧ ಎದುರು ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆಗೆ ಶಕ್ತಿಮೀರಿ ಪ್ರಯತ್ನಿಸಿ ಜಾತಿಯ ಋಣ ತೀರಿಸುವೆ. ಸೇಡಂನ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅಭಿವೃದ್ಧಿ ಪ್ರಾಧಿಕಾರಕ್ಕೆ 3 ಕೋಟಿ ರೂ. ಮಂಜೂರಾತಿ ದೊರೆತಿದೆ.

— > ತಿಪ್ಪಣ್ಣಪ್ಪ ಕಮಕನೂರ ನೂತನ ಎಂಎಲ್​ಸಿ