ಹೊಸಕೋಟೆ ತಾಲೂಕು ದೊಡ್ಡ ಹುಲ್ಲೂರು ಶಾಲೆಯಲ್ಲಿ ಗೋದ್ರೆಜ್ ಫುಡ್ಸ್ ಕಂಪನಿ ಹಾಗೂ ಸ್ಕೊಡ್ ವೆಸ್ ಕಂಪನಿ ಸಹಯೋಗದಲ್ಲಿ ಮಹಿಳೆಯರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಹೊಸಕೋಟೆ : ಗ್ರಾಮೀಣ ಭಾಗದಲ್ಲಿ ಕಿಶೋರಿಯರು ಹಾಗೂ ಮಹಿಳೆಯರಲ್ಲಿ ಆರೋಗ್ಯ ಅರಿವು ಮೂಡಿಸುವ ಹಾಗೂ ಪೌಷ್ಟಿಕತೆ ಮಹತ್ವ ಸಾರುವ ನಿಟ್ಟಿನಲ್ಲಿ ಸ್ಕೊಡ್ ವೆಸ್ ಸಂಸ್ಥೆಯು ಗೋದ್ರೆಜ್ ಫುಡ್ಸ್ ಕಂಪನಿಯ ಸಿಎಸ್ಆರ್ ಅನುದಾನವನ್ನು ಬಳಕೆ ಮಾಡುತ್ತಿದೆ ಎಂದು ಸಂಸ್ಥೆಯ ವವಸ್ಥಾಪಕ ಅರುಣ್ ಪ್ರಸಾತ್ ಜಯಕುಮಾರ್ ತಿಳಿಸಿದರು.
ತಾಲೂಕಿನ ದೊಡ್ಡಹುಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸ್ಕೊಡ್ ವೆಸ್ ಸಂಸ್ಥೆಯ ಜೀವನಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಕಿಶೋರಿಯರು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ಕಳೆದ ತಿಂಗಳಿನಲ್ಲಿ ಅನಿಮಿಯಾ ಪರೀೆ ಮಾಡಲಾಗಿದ್ದು, 50 ಕಿಶೋರಿಯರಲ್ಲಿ ರಕ್ತಹಿನತೆ ಕಂಡುಬಂದಿದೆ. ಅವರೆಲ್ಲರಿಗೂ ಪೌಷ್ಟಿಕ ಆಹಾರದ ಕಿಟ್ಗಳನ್ನು ನೀಡಲಾಗಿದೆ. ಇದರೊಂದಿಗೆ ಅಂಗನವಾಡಿ ಹಾಗೂ ಮಕ್ಕಳಿಗೆ ಅಗತ್ಯವಾಗಿರುವ ಬೋಧನಾ ಮತ್ತು ಶಿಕ್ಷಣ ಸಾಮಗ್ರಿ ವಿತರಿಸಿ, ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎಂದರು.
ಎಸ್ಎಫ್ಸಿಎಸ್ ನಿರ್ದೇಶಕ ಹುಲ್ಲೂರು ರಾಜಗೋಪಾಲ್ ಮಾತನಾಡಿ, ಗ್ರಾಮೀಣ ಶಾಲೆಗಳ ಶಿಕ್ಷಣ ಹಾಗೂ ಆರೋಗ್ಯ ಸುಧಾರಣೆಗೆ ಖಾಸಗಿ ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಸಿಎಸ್ಆರ್ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಈ ೇತ್ರಗಳಿಗೆ ಮೀಸಲಿಟ್ಟಿರುವುದು ಉತ್ತಮಬೆಳವಣಿಗೆ. ದೊಡ್ಡ ಹುಲ್ಲೂರು ಭಾಗದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಭಾರತದದ ಅಸಂಖ್ಯಾತರು ಹೆಚ್ಚಾಗಿದ್ದಾರೆ. ಅವರಲ್ಲೂ ಸಹ ಸಮರ್ಪಕ ಆರೋಗ್ಯ ಕಾಯ್ದಿರಿಸಿಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಸ್ಕೊಡ್ ವೆಸ್ ಕಾರ್ಖಾನೆಯ ವ್ಯವಸ್ಥಾಪಕ ಅರುಣ್ ಪ್ರಸಾದ್, ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ನಾರಾಯಣ ಹೆಗಡೆ, ಗೋದ್ರೆಜ್ ಫುಡ್ಸ್ ಲಿಮಿಟೆಡ್ ಸಂಪನ್ಮೂಲ ವ್ಯಕ್ತಿ ಲಲಿತಾ ನಾಯಕ್, ಮುಖ್ಯಸ್ಥರಾದ ನವೀನ್, ಮಂಜುನಾಥ್, ಮುಖ್ಯಶಿಕ್ಷಕರಾದ ಮಹೇಶ್, ವಿಜಯಲಕ್ಷಿ$್ಮ ಇದ್ದರು.