ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಮೋಹನ ಭಸ್ಮೆ ಮಾತನಾಡಿದರು. ರವಿ ರಂಗಸುಭೆ, ಪರಶುರಾಮ ಗಸ್ತೆ, ಡಿವೈಎಸ್ಪಿ ರವಿ ನಾಯಿಕ, ಸುರೇಶ ಬಾಬು ಇತರರಿದ್ದರು.
ಗೋಕಾಕ: ಭಾರತೀಯ ಸಂಪ್ರದಾಯದಲ್ಲಿ ಸಾಂವಿಧಾನಿಕ ಮೌಲ್ಯ ಹಿರಿಯದಾಗಿದ್ದು, ಅದನ್ನು ಪ್ರತಿಯೊಬ್ಬರೂ ತಿಳಿಯಬೇಕಾಗಿದೆ ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶ ಗಣರಾಜ್ಯವಾಗುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ದೊಡ್ಡದಾಗಿದ್ದು, ಭಾರತೀಯರಾದ ನಾವು ಮೂಲಭೂತ ಹಕ್ಕು ಪರಿಪಾಲನೆ ಮಾಡಬೇಕು ಎಂದರು. ಪೌರಾಯುಕ್ತ ರವಿ ರಂಗಸುಭೆ, ತಾಪಂ ಅಧಿಕಾರಿ ಪರಶುರಾಮ ಗಸ್ತೆ, ಡಿವೈಎಸ್ಪಿ ರವಿ ನಾಯಿಕ, ಸಿಪಿಐ ಸುರೇಶ ಬಾಬು , ಎಂ.ಎಂ.ನದಾಫ್, ಎಂ.ಎಚ್.ಗಜಾಕೋಶ, ಡಾ.ಎಂ.ಎಸ್.ಕೊಪ್ಪದ, ಎಂ.ಎಲ್.ಜನ್ಮಟ್ಟಿ, ವಕೀಲ ಬಿ.ಆರ್.ಕೊಪ್ಪ, ಪಿಎಸ್ಐ ಕಿರಣ ಮೋಹಿತೆ, ಕೆ.ವಾಲಿಕರ, ಎಸ್.ಪಿ.ವರಾಳೆ, ಪ್ರಮೀಳಾ ಬಿದರಿ, ಅಶೋಕ ಪೂಜಾರಿ, ಪ್ರಕಾಶ ಮುರಾರಿ, ಸೋಮಶೇಖರ ಮಗದುಮ್ಮ, ಕಿರಣ ಢಮಾಮಗರ ಇತರರಿದ್ದರು.