ಅಫಜಲಪುರ ತಾಲೂಕಿನ ಕರಜಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೈದರಾಬಾದ್​ ಕರ್ನಾಟಕ ಶಿಣ ಸಂಸ್ಥೆಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ವೈದ್ಯರು ಜನರು ಕಣ್ಣು ತಪಾಸಣೆ ಮಾಡಿದರು. ಅರುಣಕುಮಾರ ಪಾಟೀಲ್​, ಪ್ರಕಾಶ ಜಮಾದಾರ, ಮಹಾದೇವಗೌಡ ಕರೋಟಿ, ಶಿವಾನಂದ ಗಾಡಿಸಾಹುಕಾರ, ಕೈಲಾಸಯ್ಯ ಹಿರೇಮಠ ಇದ್ದರು. 
ರಾಜ್ಯ

ಪ್ರತಿಯೊಬ್ಬರಿಗೂ ಆರೋಗ್ಯದ ಕಾಳಜಿಯಿರಲಿ

ಅಫಜಲಪುರ: ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳ ಆಯೋಜಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯ ಅರುಣಕುಮಾರ ಪಾಟೀಲ್​ ಹೇಳಿದರು. ಕರಜಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೈದರಾಬಾದ್​ ಕರ್ನಾಟಕ ಶಿಣ ಸಂಸ್ಥೆಯಿಂದ ಸೋಮವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಭೌತಿಕ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯವಾಗಿದೆ. ನೇತ್ರ ದೇಹದ ಸ್ಮೂ ಅಂಗವಾಗಿದ್ದು, ಕಾಲಕಾಲಕ್ಕೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಪ್ರಕಾಶ ಜಮಾದಾರ, ಪ್ರಮುಖರಾದ ಮಹಾದೇವಗೌಡ ಕರೋಟಿ, ಶಿವಾನಂದ ಗಾಡಿಸಾಹುಕಾರ, ಕೈಲಾಸಯ್ಯ ಹಿರೇಮಠ, ಬಸವರಾಜ ಬುಶೆಟ್ಟಿ, ದತ್ತಾತ್ರೇಯ ಭಂಡಾಗರ, ಶಿವಪುತ್ರಪ್ಪ ಜಿಡ್ಡಗಿ, ಸಾತಲಿಂಗಪ್ಪ ಜಿಡ್ಡಗಿ, ಶರಣು ಈಶ್ವರಗೊಂಡ, ಅಂಬರೀಶ ಬುರಲಿ, ಡಾ.ಅಮೃತಾ ಎಚ್​., ಡಾ.ಶಶಿಕುಮಾರ, ಡಾ.ರಿಷಾದ್​ ಅಲಿ, ಡಾ.ಸುರೇಶ ಭಂಡಾಗರ ಇತರರಿದ್ದರು. ಒಟ್ಟು 75 ಜನರ ಕಣ್ಣು ತಪಾಸಣೆ ಮಾಡಿದ್ದು, 35 ಜನರನ್ನು ಶಸಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ.