ದೇವರಹಿಪ್ಪರಗಿ ಸಮೀಪದ ಮುಳಸಾವಳಗಿಯಲ್ಲಿ ಕಾಯಕ ದಾಸೋಹ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಎನ್.ಬಿ.ರೋಡಗಿ, ಸಂಗನಗೌಡ ಬಿರಾದಾರ ಮತ್ತಿತರರಿದ್ದರು. 
ರಾಜ್ಯ

ಪ್ರತಿಯೊಬ್ಬರೂ ಓದಿ ಸಮಾಜಮುಖಿಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಗೆಜ್ಜಿ ಕೆರಿಯರ್ ಅಕಾಡೆಮಿ ಅಧ್ಯಕ್ಷ ಸುರೇಶ ಗೆಜ್ಜಿ ಅಭಿಮತ
  • ಕಾಯಕ ದಾಸೋಹ ಪ್ರತಿಷ್ಠಾನದ 16ನೇ ವಾರ್ಷಿಕೋತ್ಸವ
ದೇವರಹಿಪ್ಪರಗಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆ ಯಾರೂ ಕಸಿಯದ ವಸ್ತುವಾಗಿದೆ. ಜ್ಞಾನಕ್ಕೆ ಮಾತ್ರ ಅಮೂಲ್ಯ ಬೆಲೆಯಿದ್ದು, ಪ್ರತಿಯೊಬ್ಬರೂ ಓದಿ ಸಮಾಜಮುಖಿಯಾಗಿ ಬಾಳಬೇಕು. ಸಾಧನೆಗೆ ಸತತ ಅಧ್ಯಯನ, ನಿರಂತರ ಪ್ರಯತ್ನಬೇಕು ಎಂದು ವಿಜಯಪುರದ ಗೆಜ್ಜಿ ಕೆರಿಯರ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೆಜ್ಜಿ ಹೇಳಿದರು.
ಸಮೀಪದ ಮುಳಸಾವಳಗಿಯಲ್ಲಿ ಕಾಯಕ ದಾಸೋಹ ಪ್ರತಿಷ್ಠಾನದ 16ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎ.ಎಸ್.ವಾಲಿಕಾರ ಅವರು ಬರೆದ ಎ ಥಿಯರಿ ಆ್ ಟೆಂಪರೇಚರ್ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಪ್ರತಿಷ್ಠಾನದ ವತಿಯಿಂದ ಅರವಿಂದ ಬಿರಾದಾರ ಅವರಿಗೆ ದಾಸೋಹ ರತ್ನ ಹಾಗೂ ಶಂಕರಗೌಡ ಬಿರಾದಾರ ಅವರಿಗೆ ದಾಸೋಹ ರೈತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.ಅನುಗ್ರಹ ಕಣ್ಣಿನ ಆಸ್ಪತ್ರೆಯ ಸುನೀಲಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎನ್.ಬಿ.ರೋಡಗಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಯುವ ಮುಖಂಡ ಸಾಯಬಣ್ಣ ಸೊನ್ನಳ್ಳಿ, ಗುರುರಾಜ ಆಕಳವಾಡಿ, ಎ.ಎಸ್.ವಾಲೀಕಾರ ಶರಣಯ್ಯ ಮಂಗಲಗಿ, ಶರಣಗೌಡ ಪಾಟೀಲ, ಈರಣ್ಣ ನರೂಣಿ, ಮಲಕು ಸುರಗಿಹಳ್ಳಿ ಮತ್ತಿತರರಿದ್ದರು.