ಬೆನಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಿಶ್ಚಲ ಸ್ವರೂಪ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಶ್ರೇಯಸ್ ಮಾಮನಿ, ಉಮೇಶ ಬಾಳಿ, ಪಂಚನಗೌಡ ದ್ಯಾಮನಗೌಡರ ಇತರರಿದ್ದರು.
ಬೆನಕಟ್ಟಿ: ಶ್ರಾವಣ ಮಾಸದಲ್ಲಿ ನಿತ್ಯ ದೇವರ ಸ್ಮರಣೆ ಮಾಡಿದರೆ ಒಳಿತಾಗುತ್ತದೆ. ಮಠ&ಮಂದಿರಗಳಲ್ಲಿ ನಡೆಯುವ ಮಹಾತ್ಮರ ಪ್ರವಚನ ಆಲಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಹೇಳಿದರು.
ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ 3ನೇ ವರ್ಷದ ಅನುಭಾವ ದರ್ಶನ ಆಧ್ಯಾತ್ಮಿಕ ಪ್ರವಚನ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬೆಳಗಾವಿ ಪ್ರಣವಂ ೌಂಡೇಷನ್ ಗುರುಕುಲದ ನಿಶ್ಚಲ ಸ್ವರೂಪ ಸ್ವಾಮೀಜಿ, ಮುನವಳ್ಳಿ ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ಎ.ಐ.ಶಿರಸಂಗಿ, ಮುಖಂಡರಾದ ಶ್ರೇಯಸ್ ಮಾಮನಿ, ಉಮೇಶ ಬಾಳಿ, ಅಪ್ಪಯ್ಯಪ್ಪ ಶಿರಸಂಗಿ, ರುದ್ರಪ್ಪ ರೇವಣ್ಣವರ, ಶ್ರೀಶೈಲ ಕುಸಲಿ, ತೇಜಪ್ಪ ವೀರಶೆಟ್ಟಿ, ಈರಯ್ಯ ಹಿರೇಮಠ, ರಾಜು ಗಯ್ಯಾಳಿ, ಪ್ರವಿಣ ಚಿನ್ನಪ್ಪನ್ನವರ, ಪಂಚಪ್ಪ ಮಾತಾರಿ, ರುದ್ರಪ್ಪ ಗಿಲಾಕಿ, ಮಹಾಂತೇಶ ಭಿಷ್ಟಣ್ಣವರ, ಭೀಮಪ್ಪ ಹೊನಕುಪ್ಪಿ, ಕಾಳಪ್ಪ ಬಡಿಗೇರ, ಪುಂಡಲೀಕ ಮರ್ದಣ್ಣವರ, ಎಂ.ಎಂ.ಲಕ್ಕಣ್ಣವರ, ಸೋಮನಿಂಗ ರೇವಣ್ಣವರ, ಬಸವರಾಜ ಗಯ್ಯಾಳಿ, ಮಲ್ಲಿಕಾರ್ಜುನ ಗುರವ್ವಗೋಳ, ಮಾಯಪ್ಪ ಚೂರಿ ಇತರರಿದ್ದರು. ಪಿ.ಆರ್.ಭಿಷ್ಟಣ್ಣವರ ನಿರೂಪಿಸಿದರು.