ಬಸವನಬಾಗೇವಾಡಿ ಪಟ್ಟಣದ ಬಿಎಲ್ಡಿಇ ಸಂಸ್ಥೆಯಲ್ಲಿ ನಶಾಮುಕ್ತ ಭಾರತ ಅಭಿಯಾನದಡಿಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ರೇಣುಕಾ ಅಕ್ಕ, ಡಾ. ಎ.ವಿ. ಸೂರ್ಯವಂಶಿ, ಸಿ.ಪಿ. ದಡೆಕರ್, ಡಾ. ವೈ.ಬಿ. ನಾಯಕ, ಡಾ.ಎಸ್.ಎಂ. ಬಿಜಾಪುರ, ಡಾ. ಕೃಷ್ಣಮೂರ್ತಿ ಸಿ.ಎನ್., ಎಸ್.ಕೆ. ಚಿಕ್ಕನರ್ತಿ, ಡಾ. ಜಯಶ್ರೀ ಬೀರಪ್ಪ ಮತ್ತಿತರರಿದ್ದರು.
- ಬ್ರಹ್ಮಕುಮಾರಿ ಈರಮ್ಮ ಅಕ್ಕ ಸಲಹೆ
- ನಶಾಮುಕ್ತ ಭಾರತ ಅಭಿಯಾನದಡಿಯಲ್ಲಿ ಪ್ರತಿಜ್ಞಾವಿಧಿ ಬೋಧನೆ
ಬಲಿಷ್ಠ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ಯುವ ಪೀಳಿಗೆಯೇ ದೇಶದ ಆಶಾಕಿರಣ ಎಂದು ಬ್ರಹ್ಮಕುಮಾರಿ ಈರಮ್ಮ ಅಕ್ಕ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ
ನಶಾಮುಕ್ತ ಭಾರತ ಅಭಿಯಾನದಡಿಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಸಮಾಜದ ಪ್ರತಿಯೊಬ್ಬ ವ್ಯಕ್ತಿ ಯಶಸ್ವಿಯಾಗಿ ಜೀವನ ಸಾಗಿಸಬೇಕಾದರೆ ಅವರೆಲ್ಲ ಒತ್ತಡ ಹಾಗೂ ದುಶ್ಚಟಗಳಿಂದ ಮುಕ್ತರಾಗಿರಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಉಲ್ಲಾಸಭರಿತ ಜೀವನ ಸಾಗಿಸಬೇಕಾದರೆ ಮೊದಲು ವ್ಯಸನದಿಂದ ದೂರಿದ್ದು ಯೋಗ, ಧ್ಯಾನ, ಒಳ್ಳೆಯ ಹವ್ಯಾಸಗಳಿಂದ ಜೀವನ ಕಟ್ಟಿಕೊಂಡರೆ ಸುಂದರ ಜೀವನ ರೂಪಗೊಳ್ಳುತ್ತದೆ. ವ್ಯಸನಗಳು ಕೇವಲ ಒಬ್ಬ ವ್ಯಕ್ತಿಯನ್ನು ಕೊಲ್ಲದೆ ಇಡೀ ಕುಟುಂಬ ಹಾಗೂ ಸಮಾಜವನ್ನೇ ಕೊಲ್ಲುತ್ತದೆ ಇದರಿಂದ ಶಾಂತಿ ಹಾಗೂ ಸಮೃದ್ಧಿಯ ಸಮಾಜ ಕಾಣಲು ಸಾಧ್ಯವಿಲ್ಲ ಎಂದರು.
ಪಿ.ಎಂ. ಗೂಳನ್ನವರ, ಎ.ಯು. ಪಾಟೀಲ, ವಿದ್ಯಾರ್ಥಿಗಳು ಇತರರಿದ್ದರು.