ತಾಳಿಕೋಟೆ ಪಟ್ಟಣದ ಎಸ್.ಕೆ. ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಡಾ. ಯಶವಂತ ಕೊಕ್ಕನವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು. ಡಾ. ಡಿ.ಬಿ. ಮೂಗಡ್ಲಿಮಠ, ವಿ.ಸಿ. ಹಿರೇಮಠ, ಎಂ. ಎಸ್. ಸರಶೆಟ್ಟಿ, ಕೆ.ಎಸ್. ಮುರಾಳ, ಡಾ. ಅಶೋಕ ಆರ್. ಇತರರಿದ್ದರು.
- ಡಾ. ಯಶವಂತ ಕೊಕ್ಕನವರ ಹೇಳಿಕೆ
- ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ
ತಾಳಿಕೋಟೆ: ಸಮಾಜದಲ್ಲಿ ವ್ಯಕ್ತಿಗೆ ಸ್ಥಾನಮಾನ ಸಿಗಬೇಕಾದರೆ ಶಿಕ್ಷಣವೆಂಬ ಅಸ್ತ್ರ ನಮ್ಮದಾಗ ಬೇಕು. ಅಚಲ ನಂಬಿಕೆ, ಗುರಿಯೊಂದಿಗೆ ಮುನ್ನಡೆದು ಸಾಧಕರಾಗಬೇಕು ಎಂದು ಜಮಖಂಡಿ ಸಾಹಿತಿ ಮತ್ತು ಸಂಯೋಜಕರು ಕನ್ನಡ ಸ್ನಾತಕೋತ್ತರ ಕೇಂದ್ರ ರ್ಸಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಡಾ. ಯಶವಂತ ಕೊಕ್ಕನವರ ಹೇಳಿದರು.
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ 2025-26ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು, ಎನ್‌ಎಸ್‌ಎಸ್, ಎನ್‌ಸಿಸಿ ಮತ್ತು ಸೌಟ್ಸ್-ಗೈಡ್ಸ್ ಹಾಗೂ ವಿವಿಧ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯ ಡಾ. ಡಿ.ಬಿ. ಮೂಗಡ್ಲಿಮಠ ಮಾತನಾಡಿ, ವಿದ್ಯಾರ್ಥಿಗಳು ಗುರಿ, ಸಮಯಪ್ರಜ್ಞೆ, ದೃಢಸಂಕಲ್ಪದಿಂದ ಬದುಕು ಕಟ್ಟಿಕೊಳ್ಳಬೇಕು. ಉನ್ನತ ಶಿಕ್ಷಣದಿಂದ ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಹಾಗೂ ಮಹಾವಿದ್ಯಾಲಯದ ಅಧ್ಯಕ್ಷ ವಿ.ಸಿ. ಹಿರೇಮಠ
ಮಾತನಾಡಿ, ಮಕ್ಕಳು ತಮ್ಮ ಉಜ್ವಲ ಭವಿಷ್ಯಕ್ಕೆ ಸದಾ ನಿರತರಾಗಬೇಕು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ನಮ್ಮ ಮಹಾವಿದ್ಯಾಲಯ ಕಳೆದ 49 ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಹೇಳಿದರು.
ವೀರಶೈವ ವಿದ್ಯಾವರ್ಧಕ ಸಂಘ, ಕಾರ್ಯದರ್ಶಿಗಳು ಎಂ. ಎಸ್. ಸರಶೆಟ್ಟಿ, ಉಪಾಧ್ಯಕ್ಷ ಕೆ.ಎಸ್. ಮುರಾಳ, ಡಾ. ಅಶೋಕ ಆರ್. ರಾಠೋಡ, ವಿದ್ಯಾಶ್ರೀ ಅಗಸರ, ಸಿಬ್ಬಂದಿ ಇದ್ದರು.
ಮಮತಾಜ ನಾಯ್ಕೋಡಿ ಪ್ರಾರ್ಥಿಸಿದರು. ಡಾ. ಸುಜಾತಾ ಚಲವಾದಿ ಪರಿಚಯಿಸಿದರು.
ಬಹುಮಾನ ವಿತರಣೆ ಕೆ.ಬಿ. ದೇಸಾಯಿ ನಡೆಸಿಕೊಟ್ಟರು. ಡಾ. ದೀಪಾ ಮಾಳಗೆ, ಸಂಗೀತಾ
ಕೊಡೆಕಲ್ಲಮಠ ನಿರೂಪಿಸಿದರು. ಲಲಿತಾ ಗೌಡರ ವಂದಿಸಿದರು.