Let CSR funds be used appropriately. 
ರಾಜ್ಯ

ಸಿಎಸ್​ಆರ್​ ನಿಧಿ ಸಮರ್ಪಕ ಬಳಕೆಯಾಗಲಿ

ತುಮಕೂರು ಡೆಸ್ಕ್
ಪಾವಗಡ: ಸೋಲಾರ್​ ಸಿಎಸ್​ಆರ್​ ನಿಧಿಯಿಂದ ಆಂಬುಲೆನ್ಸ್​ ನೀಡುತ್ತಿರುವುದು ಉತ್ತಮ ಸೇವೆಯಾಗಿದೆ ಎಂದು ಆಂಧ್ರದ ಟಿಡಿಪಿ ಪಕ್ಷದ ಧರ್ಮಾವರಂ ಇಂಚಾರ್ಜ್​ ಪರಿಟಾಲ ಶ್ರೀರಾಮ್​ ತಿಳಿಸಿದರು.
ಆಯನ ರಿನಿವಬಲ್​ ಪವರ್​ ಸೋಲಾರ್​ ಕಂಪನಿಯು ಸಿಎಎಸ್​ಆರ್​ ನಿಧಿಯಿಂದ ಕೊಡುಗೆಯಾಗಿ ನೀಡಿದ್ದ ಉಚಿತ ಆಂಬುಲೆನ್ಸ್​ ವಾಹನವನ್ನು ವೆಂಕಟನಹಳ್ಳಿಯಲ್ಲಿ ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಆಂಧ್ರ ಗಡಿ ಹಂಚಿಕೊಂಡಿರುವ ವಳ್ಳೂರು ಮತ್ತು ತಿರುಮಣಿ ಗ್ರಾಮ ಪಂಚಾಯಿತಿ ಸಾರ್ವಜನಿಕರು ಪಟ್ಟಣದಿಂದ 30 ಕಿಮೀ ದೂರದಲ್ಲಿದ್ದು. ಅನಾರೋಗ್ಯದ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್​ ಸೇವೆಯ ಅಗತ್ಯ ಪರಿಗಣಿಸಿ ವಾಹನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದ್ಬಳಕೆಯಾಗಲಿ ಎಂದು ಅಭಿಪ್ರಾಯಪಟ್ಟರು.
ಅಯನ ರಿನೆವೆಬಲ್​ ಪವರ್​ ತಾಲೂಕು ಮುಖ್ಯಸ್ಥ ತಾಲ್ಲೂರಿ ಅನಿಲ್​ ಮಾತನಾಡಿ, ಸಂಸ್ಥೆಯು ಸಾರ್ವಜನಿಕ ಸೇವೆಗೆಂದು ಸಿಎಸ್​ಆರ್​ ನಿಧಿ ಹಣದಲ್ಲಿ ಆಂಬುಲೆನ್ಸ್​ ಸೇವೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಆಂಬುಲೆನ್ಸ್​ ವಾಹನದಿಂದ ಇನ್ನಷ್ಟು ಜನರಿಗೆ ಅನುಕೂಲವಾಗಲಿ ಎಂದು ತಿಳಿಸಿದರು.
ಕಂಪನಿಯ ವೈಭವ್​ ಕಠಾರಿಯಾ, ಗುತ್ತಿಗೆದಾರ ಶಂಕರ್​ ರೆಡ್ಡಿ , ವೆಂಕಟಮ್ಮನಹಳ್ಳಿ ಮುಖಂಡ ಚೆನ್ನಕೇಶವ, ವಳ್ಳೂರು ರವಿ, ಅಶೋಕ್​, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಶೇಷಗಿರಿ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್​, ಸದಸ್ಯ ರವಿ ಮತ್ತಿತರರು ಇದ್ದರು.