ಕೈಲಾಂಚ ಹೋಬಳಿ ಮುದ್ದುಶ್ರೀ ದಿಬ್ಬದಲ್ಲಿ ಹಮ್ಮಿಕೊಂಡಿದ್ದextracurricular activities. ಕಾರ್ಯಕ್ರಮದಲ್ಲಿ ನೃತ್ಯ ವೈಭವ ನಡೆಸಿಕೊಟ್ಟ ತಂಡಕ್ಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ನೃತ್ಯಗುರು ಮಂಜುಳಾ ರವಿಕುಮಾರ್. ಕೆ. ಜೀವನ್, ಸಂಗೀತ ಶಿಕ್ಷಕಿ ಝಾನ್ಸಿರಾಣಿ ಮುಂತಾದವರಿದ್ದರು.  
ರಾಜ್ಯ

ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ extracurricular activities.

ಕೈಲಾಂಚ :ವಿದ್ಯಾರ್ಥಿ ದಿಸೆಯಲ್ಲಿ ನಾಟಕ, ಸಂಗೀತ, ನೃತ್ಯದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಮಕ್ಕಳು ದೊಡ್ಡ ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂಬುದು ಇತಿಹಾಸ ತಿಳಿಸಿದೆ. ಪಾಲಕರು ಮಕ್ಕಳ ಆಸಕ್ತಿ ಗಮನಿಸಿ ಪಾರಂಪರಿಕ ಶಿಕ್ಷಣದ ಜತೆ ಅನೌಪಚಾರಿಕ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದು ಜಾನಪದ ವಿದ್ವಾಂಸ ಡಾ.ಎಂ. ಬೈರೇಗೌಡ ತಿಳಿಸಿದರು.
ಕೈಲಾಂಚ ಹೋಬಳಿಯ ಕೆರೆಮೇಗಳದೊಡ್ಡಿ ಬಳಿ ಮುದ್ದುಶ್ರೀ ದಿಬ್ಬದ ಸಮುಚ್ಛಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೆ.ಎಸ್. ಮುದ್ದಪ್ಪ ಚಿಕ್ಕಮ್ಮರಂಗಮಂದಿರದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರತೀ ತಿಂಗಳು ನಾಲ್ಕನೇ ಶನಿವಾರ ‘ತಿಂಗಳ ತಳಿರು ಶೀರ್ಷಿಕೆಯಲ್ಲಿ ಸರಣಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಿಸಿದ್ದು, ಸರಣಿಯ ಮೂರನೇ ಕಾರ್ಯಕ್ರಮ ಎ.ಆರ್.ಕೆ. ಕಲ್ಚರಲ್ ಆ್ಯಂಡ್ ಸ್ಪೋರ್ಟ್‌ಸ ಅಕಾಡೆಮಿ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯಾಂಜಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗತ್ತಿನ ಇತಿಹಾಸ ಗಮನಿಸಿದಾಗ ಯಾವುದೇ ದಾರ್ಶನಿಕ ವ್ಯಕ್ತಿತ್ವ ರೂಪಿಸಿಕೊಂಡವರು ಕೇವಲ ಪಠ್ಯಪುಸ್ತಕಕ್ಕೆ ಜೋತುಬೀಳದೆ ಪಠ್ಯೇತರ ಓದನ್ನು ಮೈಗೂಡಿಸಿಕೊಂಡಿದ್ದಾರೆ. ಪರೀಕ್ಷಾ ದೃಷ್ಟಿಯಿಂದ ಓದುವ ಮಕ್ಕಳಿಗೂ, ಅದರಾಚೆಗೂ ಓದುವ ಮಕ್ಕಳಿಗೂ ಇರುವ ವ್ಯತ್ಯಾಸ ಗಮನಿಸಿದರೆ ಪಠ್ಯೇತರ ಓದನ್ನು ಅಳವಡಿಸಿಕೊಂಡಿರುವವರ ಸಾಧನೆಯೆ ದೊಡ್ಡದು ಎಂದು ತಿಳಿಸಿದರು.
ರಂಗನಟ ಎ.ಆರ್. ರವಿಕುಮಾರ್ ಮಾತನಾಡಿ, ಮಕ್ಕಳ ಮನಸ್ಸನ್ನು ಅರಿಯದೆ ಅವರ ಆಶೋತ್ತರಗಳಿಗೆ ಸ್ಪಂದಿಸದೆ, ಬಲವಂತದಿಂದ ಓದಿ ಶಾಲೆಗೆ ಮೊದಲ ಸ್ಥಾನದಲ್ಲಿ ಇರಬೇಕೆಂಬ ಪ್ರಕ್ರಿಯೆಯಲ್ಲಿ ತೊಡಗಿಸಿ ದೊಡ್ಡ ಅಪಾಯವನ್ನು ತಂದೊಡ್ಡುತ್ತಿದ್ದಾರೆ ಎಂದರು.
ಲಲಿತ ಕಲೆಗಳ ಹಿಂದೆ ಓಡುವ ಮಕ್ಕಳು ಜೀವನವನ್ನೂ ಸುಗಮವಾಗಿ ನಿರ್ವಹಿಸಬಲ್ಲರು. ಬದುಕು ರೂಪಿಸಿಕೊಳ್ಳುವ ತಂತ್ರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಕಲಿಸಿಕೊಡಬಲ್ಲದು. ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ತಯಾರಿಸುವ ಉದ್ಯಮವಾಗಿ ತನ್ನ ಕಬಂಧ ಬಾಹುಗಳಲ್ಲಿ ಬಂಧಿಸುತ್ತಿದೆ. ಈ ಪ್ರವೃತ್ತಿ ನಿಂತು, ಮಕ್ಕಳ ಸರ್ವತೋಮುಖ ಬೆಳವಣಿಗೆ ಕಡೆಗೆ ಶಿಕ್ಷಣ ವ್ಯವಸ್ಥೆ ಗಮನ ಕೊಡಬೇಕು ಎಂದರು.
ರಾಮನಗರದ ಎ.ಆರ್.ಕೆ. ನೃತ್ಯ ಮತ್ತು ಸ್ಪೋಟ್‌ಸ್‌ನ ಅಕಾಡೆಮಿ ಸ್ಥಾಪಕಿ ಹಾಗೂ ನೃತ್ಯಗುರು ಮಂಜುಳಾ ರವಿಕುಮಾರ್. ನೃತ್ಯಗುರು ಕೆ. ಜೀವನ್, ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಭರತನಾಟ್ಯ, ರೂಪಕ, ಜನಪದ ನೃತ್ಯ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಮರ, ಸಿಮೆಂಟ್, ಇತ್ಯಾದಿ ವೈವಿಧ್ಯಮಯ ಕಲೆ ಮೈಗೂಡಿಸಿಕೊಂಡಿರುವ ಕುಶಲಕಲೆಗಳ ಕಲಾವಿದ ಸಿದ್ಧಲಿಂಗ ಬಡಿಗೇರ ಅವರನ್ನು ಗೌರವಿಸಲಾಯಿತು.
extracurricular activities.