ಬೆಸ್ಕಾಂ ಸಮರ್ಪಕ ವಿದ್ಯುತ್​ ಪೂರೈಸಲಿ BESCOM 
ರಾಜ್ಯ

ಬೆಸ್ಕಾಂ ಸಮರ್ಪಕ ವಿದ್ಯುತ್​ ಪೂರೈಸಲಿ BESCOM

ಪ್ರಮುಖ ಮುಖ್ಯಾಂಶಗಳು

  • ಟಿಎಪಿಸಿಎಂಎಸ್​ ನಿರ್ದೇಶಕ ಆಲಂಗೂರು ಶಿವಣ್ಣ ಆಗ್ರಹ
ಮುಳಬಾಗಿಲು: ಬೇಸಿಗೆ ಆರಂಭವಾಗಿದ್ದು ಕೆಪಿಟಿಸಿಎಲ್​ನಿಂದ ಗುಣಮಟ್ಟದ ವಿದ್ಯುತ್​ ಪೂರೈಕೆ ಆಗುತ್ತಿಲ್ಲ. ಇಲಾಖೆ ಈ ಬಗ್ಗೆ ಗಮನಿಸುತ್ತಿಲ್ಲ, ಕೂಡಲೇ ಪರಿಶೀಲಿಸಿ ಗುಣಮಟ್ಟದ ವಿದ್ಯುತ್​ ಪೂರೈಕೆಗೆ ಮುಂದಾಗಬೇಕು ಎಂದು ಟಿಎಪಿಸಿಎಂಎಸ್​ ನಿರ್ದೇಶಕ ಆಲಂಗೂರು ಶಿವಣ್ಣ ಆಗ್ರಹಿಸಿದರು.BESCOM
ತಾಲೂಕಿನ ಬೆಸ್ಕಾಂ ಕಚೇರಿ ಮುಂದೆ ಮಂಗಳವಾರ ರೈತರು ಹಮ್ಮಿಕೊಂಡಿದ್ದ ವಿದ್ಯುತ್​ ಸಮಸ್ಯೆಯ ಪ್ರತಿಭಟನೆಯಲ್ಲಿ ಮಾತನಾಡಿ, ರೈತರು ಲಾಂತರ ರೂ. ವ್ಯಯಿಸಿ ಕೊಳವೆಬಾವಿ ಮೂಲಕ ಬೆಳೆಗಳನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಆದರೆ ಸರಿಯಾಗಿ ವಿದ್ಯುತ್​ ಕೊಡದ ಪರಿಣಾಮ ವಿದ್ಯುತ್​ ಮೋಟಾರ್​ ಪಂಪುಗಳು ಸುಟ್ಟು ಹೋಗುತ್ತಿವೆ. ಬೆಸ್ಕಾಂ ಅಧಿಕಾರಿಗಳು ತಣ ಈ ಬಗ್ಗೆ ಗಮನ ಹರಿಸಬೇಕು ಎಂದರು.
ರೈತ ಮುಖಂಡ ಕೆ.ವಿ.ರಾಜೇಂದ್ರರಾಜು ಮಾತನಾಡಿ, ಆಲಂಗೂರು ಎ್​5ಗೆ ಸಬ್​ಸ್ಟೇಷನ್​ ನಿರ್ಮಾಣಕ್ಕಾಗಿ <20.78 ಕೋಟಿ ರೂ. ಮಂಜೂರು ಮಾಡಿ ಎನ್​.ವಡ್ಡಹಳ್ಳಿ ಬಳಿ ಜಾಗವನ್ನು ಗುರುತಿಸಲಾಗಿತ್ತು. ಆದರೆ ಇದುವರೆಗೂ ಟೆಂಡರ್​ ಕೂಡ ಕರೆದಿಲ್ಲ. ಹೀಗಾದರೆ ರೈತರಿಗೆ ಸಮರ್ಪಕ ವಿದ್ಯುತ್​ ಹೇಗೆ ಲಭಿಸುತ್ತದೆ. ಏ.10ರ ಒಳಗಾಗಿ ಆಲಂಗೂರು ಎ್​5 ಫೀಡರ್​ ಕಾಮಗಾರಿ ಆರಂಭಿಸದಿದ್ದಲ್ಲಿ ಬೆಸ್ಕಾಂ ಮುಂದೆ ಅರ್ನಿಧಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಳೆದ 7 ವರ್ಷಗಳಿಂದ ಆಲಂಗೂರು ಫೀಡರ್​ ವ್ಯಾಪ್ತಿಯ ರೈತರು ಅನೇಕ ಬಾರಿ ದೂರು ಸಲ್ಲಿಸಿದ್ದು ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ವಿಳಂಬ ಮಾಡಿದ್ದೀರಿ. 1 ಎಕರೆ ವ್ಯವಸಾಯ ಮಾಡಲು ಕನಿಷ್ಠ 2 ಲ ವೆಚ್ಚವಾಗುತ್ತದೆ. ಆದರೆ ಸಮರ್ಪಕ ವಿದ್ಯುತ್​ ಲಭ್ಯವಿಲ್ಲದ ಕಾರಣ ಬೆಳೆಗಳು ನಾಶವಾಗುತ್ತಿದೆ. ರೈತರ ಕುರಿತಾದ ಈ ರ್ನಿಲಕ್ಷ$್ಯ ಸರಿಯಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಸ್ಕಾಂ ಎಇಇ ವಿ.ಎಂ.ರಮೇಶ್​, ರೈತರ ಸಮಸ್ಯೆಗಳ ಕುರಿತು ಸಲ್ಲಿಸಿರುವ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಬೆಸ್ಕಾಂ ನೌಕರರ ಸಂದ ಪ್ರಧಾನ ಕಾರ್ಯದರ್ಶಿ ಬೆಸ್ತರಹಳ್ಳಿ ರಾಮಚಂದ್ರ, ಬಿಜೆಪಿ ಮಾಜಿ ಅಧ್ಯ ಕೆ.ಅಮರೇಶ್​, ದಲಿತ ಮುಖಂಡ ಕೀಲುಹೊಳಲಿ ಸತೀಶ್​, ಕರ್ನಾಟಕ ರಣಾ ವೇದಿಕೆ ಗೌರವಾಧ್ಯ ಮಿಟ್ಟಹಳ್ಳಿ ಪ್ರಕಾಶ್​, ಅಧ್ಯ ಹರೀಶ್​ಗೌಡ, ಮುಖಂಡರಾದ ಮಲ್ಲಪ್ಪನಹಳ್ಳಿ ರಾಮಕೃಷ್ಣಪ್ಪ, ಹನುಮನಹಳ್ಳಿ ಕೃಷ್ಣಮೂರ್ತಿ, ಕೇಶವರೆಡ್ಡಿ ಇದ್ದರು.