ಯಾದಗಿರಿ ತಾಲೂಕಿನ ಗುಂಡಳ್ಳಿಯಲ್ಲಿ ವೀರಯೋಧ ಬೀರಪ್ಪ ಅವರನ್ನು ಬಿಜೆಪಿ ಯುವಮೋರ್ಚಾ ಜಿ¯್ಲÁಧ್ಯಕ್ಷ ಶ್ರೀಧರ ಸಾಹುಕಾರ ಸನ್ಮಾನಿಸಿದರು. ಮಂಜುನಾಥ ಗುತ್ತೇದಾರ್, ಮಲ್ಲು ಕೋಲಿವಾಡ, ಅರುಣ ಹೊರಮನಿ ಸಾಹುಕಾರ, ಅಮರೇಶ್ ನಾಲ್ವಡಗಿ, ಯಲ್ಲಪ್ಪ ಗುಂಡಗರ್ತಿ, ಮರೆಪ್ಪ ಬಲಕಲï ಇತರರಿದ್ದರು.
- ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಾಹುಕಾರ ಬಣ್ಣನೆ
- ಗುಂಡಳ್ಳಿಯಲ್ಲಿ ವೀರಯೋಧ ಬೀರಪ್ಪಗೆ ಸನ್ಮಾನ
ಯಾದಗಿರಿ : ದೇಶ ಕಾಯುವ ಯೋಧನಿಗಿಂತ ಮಿಗಿಲಾದ ದೇವರಿಲ್ಲ, ಭಾರತಾಂಬೆಯ ರಕ್ಷಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುವುದು ಪ್ರತಿಯೊಬ್ಬ ಭಾರತೀಯನಿಗೂ ಸಿಗುವ ಅತ್ಯುನ್ನತ ಸೌಭಾಗ್ಯ ಎಂದು ಬಿಜೆಪಿ ಯುವ ಮೋರ್ಚಾ ಜಿ¯್ಲÁಧ್ಯಕ್ಷ ಶ್ರೀಧರ ಸಾಹುಕಾರ ಹೇಳಿದರು.
ದೇಶದ ರಕ್ಷಣಾ ಪಡೆಗೆ ಆಯ್ಕೆಯಾಗಿರುವ ವೀರಯೋಧ ಬೀರಪ್ಪ ತಿಪ್ಪಣ್ಣ ಗೋಡಿಹಾಳ ಅವರನ್ನು ಗುಂಡಳ್ಳಿಯ ಅವರ ಸ್ವಗೃಹದಲ್ಲಿ ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು. ನಮ್ಮ ಭಾಗದ ಗ್ರಾಮೀಣ ಪ್ರದೇಶದ ಯುವಕನೊಬ್ಬ ಗಡಿ ಕಾಯುವ ಸಂಕಲ್ಪ ಮಾಡಿರುವುದು ಇಡೀ ಜಿ¯್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು. ದೇಶದ ಗಡಿ ಸುರಕ್ಷಿತವಾಗಿದ್ದರೆ ಮಾತ್ರ ನಾವಿಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ, ತನ್ನ ಸ್ವಾರ್ಥವನ್ನು ಬದಿಗಿಟ್ಟು, ದೇಶವೇ ಮೊದಲು ಎಂಬ ಧ್ಯೇಯದೊಂದಿಗೆ ಹೊರಟಿರುವ ಬೀರಪ್ಪ ಅವರ ದೇಶಸೇವೆಯ ಪಯಣ ಇಂದಿನ ಯುವ ಪೀಳಿಗೆಗೆ ನಿಜವಾದ ಪ್ರೇರಣೆಯಾಗಿದೆ ಎಂದು ಶ್ಲಾöಸಿದರು.
ಈ ವೇಳೆ ಮಂಜುನಾಥ ಗುತ್ತೇದಾರ್, ಮಲ್ಲು ಕೋಲಿವಾಡ, ಅರುಣ ಹೊರಮನಿ ಸಾಹುಕಾರ, ಅಮರೇಶ್ ನಾಲ್ವಡಗಿ, ಯಲ್ಲಪ್ಪ ಗುಂಡಗರ್ತಿ, ಮರೆಪ್ಪ ಬಲಕಲï, ಭಾಷ ಕುರುಕುಂದಿ, ದುಳಪ್ಪಾ ಬಡಿಗೇರ, ಭೀಮು ಯಾದಗಿರಿ, ಮರೆಪ್ಪ ಕಟ್ಟಿಮನಿ, ಸಿದ್ದು ಬೈರಗೊಂಡ, ಸಿದ್ದು ವಿ, ಸೇರಿದಂತೆ ಇತರರಿದ್ದರು.ಗ್ರಾಮದ ಯೋಧನ ಸ್ನೇಹಿತರು ಭಾರತ ಮಾತಾ ಕೀ ಜೈ, ವೀರಯೋಧ ಬೀರಪ್ಪನಿಗೆ ಜಯವಾಗಲಿ ಎಂಬ ಘೋಷಣೆಗಳೊಂದಿಗೆ ಯೋಧನಿಗೆ ಜೈಕಾರ ಹಾಕಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.