ಬೆಳಗಾವಿ ವಿಟಿಯುವ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಡಾ.ಪ್ರಸಾದ ರಾಮಪುರೆ, ಡಾ.ಯು.ಜೆ.ಉಜ್ವಲ, ಡಾ.ಪ್ರಶಾಂತ ನಾಯಕ ಇತರರಿದ್ದರು. 
ರಾಜ್ಯ

ಸುಸ್ಥಿರ ಜೀವನಶೈಲಿಗೆ ಆದ್ಯತೆ ಸಿಗಲಿ

ಬೆಳಗಾವಿ: ಸುಸ್ಥಿರ ಜೀವನಶೈಲಿ ಮತ್ತು ವೃಾರೋಪಣೆ ಮೂಲಕ ಪರಿಸರ ಸಂರಣೆಯಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದೆ ಎಂದು ವಿಟಿಯು ಕುಲಸಚಿವ ಡಾ.ಪ್ರಸಾದ ರಾಮಪುರೆ ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎನ್​ಎಸ್​ಎಸ್​ ಟಕ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಹಸಿರು ಪರಿಸರ ಹಾಗೂ ಆರೋಗ್ಯಕರ ಭವಿಷ್ಯ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಔಷಧೀಯ ಸಸಿಗಳು ವಿದ್ಯಾರ್ಥಿಗಳಿಗೆ ಶೈಣಿಕ ಸಂಪನ್ಮೂಲವಾಗುವ ಜೊತೆಗೆ ವಿಶ್ವವಿದ್ಯಾಲಯದ ಆವರಣದ ಪರಿಸರ ಮೌಲ್ಯವನ್ನು ಹೆಚ್ಚಿಸಲಿವೆ. ಈ ಕಾರ್ಯಕ್ರಮವು ಪರಿಸರ ಸಂರಣೆಯತ್ತ ವಿಟಿಯು ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸಿದೆ ಎಂದು ತಿಳಿಸಿದರು. ಮೌಲ್ಯಮಾಪನ ಕುಲಸಚಿವ ಡಾ.ಯು.ಜೆ. ಉಜ್ವಲ, ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ, ಡಾ.ಪಿ.ವಿ.ಕದಗಡಕಾಯಿ ಇತರರಿದ್ದರು.