ಪಟ್ಟಣ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಕುರಿತು ವಿಶೇಷ ಸಾಮಾನ್ಯ ಸಭೆ ಕರೆಯಬೇಕು ಎಂದು ಆಗ್ರಹಿಸಿ ಪಪಂ ಸದಸ್ಯರು ಮುಖ್ಯಾಧಿಕಾರಿ ರವಿ ಸಿರಗುಪ್ಪಿ ಅವರಿಗೆ ಮನವಿ ಸಲ್ಲಿಸಿದರು. ಚಂದ್ರಕಾಂತ ಕಾಂಬಳೆ, ಚಂದ್ರಶೇಖರ ಹಳೆಮನಿ, ಹಣಮಂತ ಹೂಗಾರ ಇತರರಿದ್ದರು.
- ವಿಶೇಷ ಸಾಮಾನ್ಯ ಸಭೆ ಕರೆಯಲು ಆಗ್ರಹ
- ಪಪಂ ಮುಖ್ಯಾಧಿಕಾರಿಗೆ ಮನವಿ
ಆಲಮೇಲ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹ್ಮದಸಾಧೀಕ ಸುಂಬಡ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಕುರಿತು ವಿಶೇಷ ಸಾಮಾನ್ಯ ಸಭೆ ಕರೆಯಬೇಕು ಎಂದು ಆಗ್ರಹಿಸಿ ಪಪಂ ಸದಸ್ಯ ಡಾ. ಸಂಜೀವಕುಮಾರ ಯಂಟಮನ ನೇತೃತ್ವದಲ್ಲಿ ಪಪಂ ಸದಸ್ಯರು ಶುಕ್ರವಾರ ಮುಖ್ಯಾಧಿಕಾರಿ ರವಿ ಸಿರಗುಪ್ಪಿ ಅವರಿಗೆ ಮನವಿ ಸಲ್ಲಿಸಿದರು.
ಸದಸ್ಯ ಡಾ. ಸಂಜೀವಕುಮಾರ ಯಂಟಮನ ಮಾತನಾಡಿ, ಕಳೆದ 22 ತಿಂಗಳ ಅವಧಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹ್ಮದಸಾಧೀಕ ಸುಂಬಡ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಸಾಕಷ್ಟು ಅವ್ಯವಹಾರ ನಡೆಸಿ, ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳು ಆಲಮೇಲ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿಗೆ ಸಂಬಂಧಪಟ್ಟ ಹಣಕಾಸಿನ ಖಾತೆಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಅಭಿವೃದ್ಧಿ ಕೆಲಸಗಳಲ್ಲಿ ಪಪಂ ಸದಸ್ಯರನ್ನು ಕಡೆಗಣಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷಿಯ ನಿರ್ಧಾರ ತೆಗೆದುಕೊಂಡು ಚುನಾಯಿತ ಸದಸ್ಯರಿಗೆ ಮನ್ನಣೆ ಕೊಡದೆ ಇರುವ ಅಧ್ಯಕ್ಷರ ಆಡಳಿತ ವೈಖರಿಯನ್ನು ಖಂಡಿಸುತ್ತೆವೆ, ಅಧ್ಯಕ್ಷರ ಸರ್ವಾಧಿಕಾರ ಧೋರಣೆಯಿಂದ ಸ್ಥಳೀಯ ಆಡಳಿತ ಸಂಪೂರ್ಣ ಹದಗೆಟ್ಟು ಬಡಾವಣೆಗಳ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಆದ ಕಾರಣ ಅವಿಶ್ವಾಸ ಮಂಡಿಸುವವರೆಗೆ ಯಾವುದೇ ಹಣಕಾಸಿನ ವ್ಯವಹಾರ, ಬಿಲ್ ಪಾಸ್, ಚೆಕ್ ಜಾರಿ ಮಾಡುವುದನ್ನು ತಡೆಯಬೇಕು ಎಂದು ಲಿಖಿತ ಮೂಲಕ ಮನವಿ ಸಲ್ಲಿಸಲಾಗಿದೆ ಎಂದರು.
ಪಪಂ ಸದಸ್ಯರಾದ ಚಂದ್ರಕಾಂತ ಕಾಂಬಳೆ, ಚಂದ್ರಶೇಖರ ಹಳೆಮನಿ, ಹಣಮಂತ ಹೂಗಾರ, ಉಮರ ಬಿಳವಾರ, ರೇಣುಕಾ ಭೋವಿ, ಯಲ್ಲಮ್ಮ ನಾಯ್ಕಡಿ, ಬಿಸ್ಮಿಲ್ಲಾ ಮಸಳಿ, ಸದಸ್ಯರ ಪ್ರತಿನಿಧಿಗಳಾದ ಸಂತೋಷ ಜರಕರ, ಶ್ರೀಶೈಲ ಭೋವಿ ಇದ್ದರು.
"
ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಸಭೆ ಕರೆಯುವಂತೆ ಸದಸ್ಯರು ಮನವಿ ಸಲ್ಲಿಸಿದ್ದಾರೆ. ಮನವಿಯನ್ನೂ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು, ಅವರ ಆದೇಶದಂತೆ ಮುಂದಿನ ಕ್ರಮ ಜರುಗಿಸಲಾಗುವುದು.
ರವಿ ಸಿರಗುಪ್ಪಿಪ್ರಭಾರ ಮುಖ್ಯಾಧಿಕಾರಿ ಪಪಂ ಆಲಮೇಲ.