ಬಸವ ಮಹಾಮನೆ ಪರಿಸರದ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಉದ್ಘಾಟಿಸಿದರು. ಆಯೋಗದ ಸದಸ್ಯ ವೆಂಕಟೇಶ್​, ನವೀನಕುಮಾರ್​, ಶಾರದಾ ಕಲ್ಮಾಕರ್​, ಡಾ.ರಮೇಶಬಾಬು ಹಾಲು, ಅರುಣಕುಮಾರ, ಸಿದ್ದವಿರಯ್ಯ ರುದನೂರ, ಸಂತೋಷ, ರವಿ ಮೇತ್ರಿ, ರೇಣುಕಾ ಕಟ್ಟಿಮನಿ ಇತರರಿದ್ದರು. 
ರಾಜ್ಯ

ಬಾಲ್ಯ ವಿವಾಹ ಮುಕ್ತ ರಾಜ್ಯ ನಿರ್ಮಾಣವಾಗಲಿ

ಪ್ರಮುಖ ಮುಖ್ಯಾಂಶಗಳು

  • ಜಗನ್ನಾಥ ಹಲಮಡಗಿ ಕರೆ
  • ಬಸವಕಲ್ಯಾಣದಲ್ಲಿ ಕಾರ್ಯಾಗಾರ
ಬಸವಕಲ್ಯಾಣ: ಬಾಲ್ಯ ವಿವಾಹ ತಡೆಯುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಹೇಳಿದರು.
ನಗರದ ಬಸವ ಮಹಾಮನೆ ಪರಿಸರದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆೆ, ಕಂದಾಯ, ಕಾರ್ಮಿಕ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ, ಪೊಲೀಸ್​ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್​ಎಲ್​ಎಚ್​ಪಿ) ಮೈಸೂರು ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬಾಲ್ಯ ವಿವಾಹ ಮುಕ್ತ ಹಾಗೂ ಮಕ್ಕಳ ರಕ್ಷಣೆ ಕುರಿತು ಒಂದು ದಿನದ ಕಾರ್ಯಗಾರವ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರಿನಿಂದ ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿಗೆ ಬಂದು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷೆಣೆಗಾಗಿ, ಸಮುದಾಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ. ತಾಲೂಕು ಮಟ್ಟದ ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ಹಮ್ಮಿಕೊಂಡಿರುವ ತರಬೇತಿ ಯಶಸ್ವಿಯಾಗಲಿ, ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ಮಾಡುವಲ್ಲಿ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಆಯೋಗದ ಸದಸ್ಯ ವೆಂಕಟೇಶ್​ ಮಾತನಾಡಿ, ಬೀದರ್​ ಜಿಲ್ಲೆಯನ್ನು ಇನ್ನು ಅನೇಕ ಅನಿಷ್ಟ ಪದ್ಧತಿಗಳು ಕಾಡುತ್ತಿವೆ. ಅದರಲ್ಲೂ ಬಾಲ್ಯ ವಿವಾಹ ಸಮಸ್ಯೆ. ಆದರೆ ಪ್ರಕರಣಗಳು ವರದಿಯಾಗುತ್ತಿರುವುದು ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ಬಾಲ್ಯವಿವಾಹ ಮುಕ್ತ ಜಿಲ್ಲೆ ಮಾಡುವಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ತಾವುಗಳು ಬಾಲ್ಯ ವಿವಾಹ ಪ್ರಕಾರಣಗಳು ಗಮನಕ್ಕೆ ಬಂದಾಗ ತಾಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಯಾವುದೇ ಹಿಂದೇಟು ಹಾಕದೆ ಪ್ರಕಾರಣ ದಾಖಲಿಸಬೇಕು ಎಂದು ಸಲಹೆ ನೀಡಿದರು.
ಬೀದರ್​ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನವೀನಕುಮಾರ್​ ಮಾತನಾಡಿ, ಎಲ್ಲ್ಲ ಮಕ್ಳಳ ರಕ್ಷಣೆಯ ಅಂತೀಮ ಹೊಣೆ ಸರ್ಕಾರದಾಗಿರುತ್ತದೆ. ಹೀಗಾಗಿ ಮಕ್ಕಳ ರಕ್ಷಣೆ ಮಾಡುವುದು ನಮ್ಮ ಹೊಣೆಯಾಗಬೇಕು. ಹೆಣ್ಣು ಮಕ್ಕಳಿಗೆ ಆಯ್ಕೆಗಳ ಬಗ್ಗೆ ತಿಳಿಸಿ ಮಕ್ಕಳ ರಕ್ಷಣೆಗೆ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಬಾಲ್ಯ ವಿವಾಹ ನಿಷೆೇಧ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಮಕ್ಕಳ ಸಂರಕ್ಷಣಾ ಯೋಜನೆ, ಯೂನಿಸೆಫ್​ನ ಪ್ರಾದೇಶಿಕ ಸಂಯೋಜಕ ಸಂಪನ್ಮೂಲ ವ್ಯಕ್ತಿ ಡಾ.ಕೆ.ರಾಘವೇಂದ್ರ ಭಟ್​ ತರಬೇತಿ ನೀಡಿದರು.
ಅಧಿಕಾರಿಗಳಾದ ಶಾರದಾ ಕಲ್ಮಾಕರ್​, ಡಾ.ರಮೇಶಬಾಬು ಹಾಲು, ಅರುಣಕುಮಾರ, ಸಿದ್ದವಿರಯ್ಯ ರುದನೂರ, ಸಂತೋಷ, ರವಿ ಮೇತ್ರಿ, ರೇಣುಕಾ ಕಟ್ಟಿಮನಿ, ಶಿವಪ್ರಕಾಶ, ಶಿಕ್ಷಣ ತಜ್ಞ ಶಿವಾನಂದ ಹಿರೇಮಠ, ಸ್ನೇಹಲತಾ ಮೇತ್ರೆ, ಪ್ರಿಯಾಂಕಾ, ನಾಗಮ್ಮ, ವೈಷ್ಣವಿ ಇತರರಿದ್ದರು. ಆರ್​ಎಲ್​ಎಚ್​ಪಿ ನಿರ್ದೇಶಕಿ ಸರಸ್ವತಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಶೀಲವಂತ ಸ್ವಾಗತಿಸಿದರು. ಸಂಪತ್​ ಕಟ್ಟಿ ವಂದಿಸಿದರು.ಸರುಬಾಯಿ ದೊಡ್ಡಿ ನಿರೂಪಣೆ ಮಾಡಿದರು.