ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ವನ್ಯಜೀವಿಸಂಶೋಧನೆಯಲ್ಲಿನ ಮಹತ್ವದಬೆಳವಣಿಗೆಯೊಂದರಲ್ಲಿ,ಅತ್ಯಂತ ಅಪರೂಪದವಿಶೇಷ ಬಣ್ಣ ಮತ್ತು ರೂಪದಚಿರತೆಯೊಂದನ್ನು ಕರ್ನಾಟಕದವಿಜಯನಗರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ದಾಖಲಿಸಲಾಗಿದೆ.ಹೊಳೆಮತ್ತಿನೇಚರ್ ಫೌಂಡೇಶನ್ (ಹೆಚ್‌ಎನ್‌ಎಫ್)ಸಂಸ್ಥೆಯ ಡಾ.ಸಂಜಯ್ ಗುಬ್ಬಿ ತಂಡದವರ ಸಂಶೋಧನೆಯಿಂದ ಈ ವಿಚಾರಬೆಳಕಿಗೆ ಬಂದಿದೆ.
ಸಾಮಾನ್ಯವಾಗಿಚಿರತೆಗಳು ಕಪ್ಪು ಚುಕ್ಕೆಗಳಿರುವಹಳದಿ-ಕಂದುಮಿಶ್ರಿತ ಬಣ್ಣದ ಚರ್ಮವನ್ನುಹೊಂದಿರುತ್ತವೆ.ಆದರೆ ಈ ಅತ್ಯಂತವಿರಳವಾದ ಬಣ್ಣದ ಈ ರೂಪಾಂತರವುಗಂಧದ ಬಣ್ಣವನ್ನು ಹೋಲುವ ಮಬ್ಬಾದಕೆಂಪು-ಗುಲಾಬಿಮಿಶ್ರಿತ ಬಣ್ಣದ ತುಪ್ಪಳ ಹಾಗೂಅದರ ಮೇಲಿನ ಚುಕ್ಕೆಗಳು ಮಂಕಾದಕಂದು ಬಣ್ಣ ಹೊಂದಿದೆ.ಚಿರತೆಯಲ್ಲಿನಅನುವಂಶಿಕ ಬದಲಾವಣೆಯಿಂದ ಉಂಟಾಗುವಈ ಸ್ಥಿತಿಯಿಂದ ಚಿರತೆಯ ಚರ್ಮದಲ್ಲಿಅತಿಯಾದ ಕೆಂಪು ವರ್ಣದ ಉತ್ಪಾದನೆಅಥವಾ ಗಾಢ ವರ್ಣದ ಕೊರತೆಯಿಂದ ಈಸ್ಥಿತಿ ಉಂಟಾಗುತ್ತದೆ ಎನ್ನಲಾಗಿದೆ. ಈ ರೂಪಾಂತರಕ್ಕೆಸ್ಥಳೀಯ ಗುರುತನ್ನು ನೀಡಲು ಮತ್ತುಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನುಪ್ರತಿಬಿಂಬಿಸಲು,ಡಾ.ಸಂಜಯ್ಗುಬ್ಬಿ ಇದಕ್ಕೆ ಚಂದನ ಚಿರತೆ(ಸ್ಯಾಂಡಲ್‌ವುಡ್ಲೆಪರ್ಡ್) ಎಂದುನಾಮಕರಣ ಮಾಡಿದ್ದಾರೆ.
ಜಾಗತಿಕವಾಗಿಈ ಬಣ್ಣ ರೂಪದ ಚಿರತೆಯನ್ನುಸ್ಟ್ರಾಬೆರಿ ಚಿರತೆ ಎಂದುಕರೆಯುತ್ತಾರೆ.ಅತ್ಯಂತ ಅಪರೂಪಕ್ಕೆಕಾಣಸಿಗುವ ಇವುಗಳನ್ನು ದಕ್ಷಿಣಆಫ್ರಿಕಾ ದೇಶದಲ್ಲಿ ಕೆಲವು ಕಡೆಮತ್ತು ತಾಂಜಾನಿಯಾದಲ್ಲಿ ಒಂದುಬಾರಿ ಮಾತ್ರ ದಾಖಲಿಸಲಾಗಿದ್ದು,ಜಗತ್ತಿನಾದ್ಯಂತಕೆಲವೇ ಕೆಲವು ದಾಖಲೆಗಳು ಲಭ್ಯವಿವೆ.ಭಾರತದಲ್ಲಿ ಈಚಿರತೆಗಳು ಅತ್ಯಂತ ವಿರಳ.ಇದಕ್ಕೂ ಮೊದಲು2021ರನವೆಂಬರ್‌ನಲ್ಲಿ ರಾಜಸ್ಥಾನದರಣಕಪುರ ಪ್ರದೇಶದಲ್ಲಿ ಒಂದುಚಂದನ ಚಿರತೆಯನ್ನು ದಾಖಲಿಸಲಾಗಿತ್ತು.ಹೀಗಾಗಿ ವಿಜಯನಗರಜಿಲ್ಲೆಯ ಈ ದಾಖಲೆ,ದೇಶದಲ್ಲಿನಎರಡನೇ ದಾಖಲೆಯಾಗಿದೆ.
ವಿಜಯನಗರಜಿಲ್ಲೆಯಲ್ಲಿ ದಾಖಲಾಗಿರುವ ಚಂದನಚಿರತೆ ಸುಮಾರು 6-7ವರ್ಷ ವಯಸ್ಸಿನಹೆಣ್ಣು ಚಿರತೆಯಾಗಿದ್ದು,ಕ್ಯಾಮೆರಾಟ್ರ್ಯಾಪ್‌ನಲ್ಲಿ ಇದರ ಚಿತ್ರಸೆರೆಯಾಗಿದೆ.ಒಂದು ಚಿತ್ರದಲ್ಲಿಈ ಚಿರತೆ ಸಾಮಾನ್ಯ ಬಣ್ಣ ಹೊಂದಿರುವಮರಿಯೊಂದಿಗೆ ಕೂಡ ಕ್ಯಾಮೆರಾಟ್ರ್ಯಾಪ್‌ನಲ್ಲಿ ದಾಖಲಾಗಿದೆ.
ಚಿರತೆಯಲ್ಲಿಈ ಬಣ್ಣ ಹೈಪೊಮೆಲನಿಸಮ್ ಅಥವಾಎರಿತ್ರಿಸಮ್ ಎನ್ನುವ ಅನುವಂಶಿಕಸ್ಥಿತಿಯಿಂದ ಉಂಟಾಗುತ್ತದೆ.ಪ್ರಸ್ತುತ,ಈ ಚಿರತೆಯಸ್ಥಿತಿಯನ್ನು,ಛಾಯಾಚಿತ್ರಮತ್ತು ಬಣ್ಣಗಳ ವೈಶಿಷ್ಟ್ಯಗಳಆಧಾರದ ಮೇಲೆ ಧೃಡೀಕರಿಸಲಾಗಿದೆ.ಈ ಲಕ್ಷಣಗಳುವಿಶಿಷ್ಟವಾಗಿದ್ದರೂ,ನಿಖರವಾದ ಅನುವಂಶಿಕಬದಲಾವಣೆಯನ್ನು ದೃಢೀಕರಿಸಲುಅವುಗಳ ಹಿಕ್ಕೆ ಅಥವಾ ಕೂದಲುಗಳಿಂದಅನುವಂಶಿಕ ಮಾದರಿಗಳನ್ನು ಸಂಗ್ರಹಿಸಿ,ಅಧ್ಯಯನ ನಡೆಸುವಅಗತ್ಯವಿದೆ.ಇಂತಹ ಅನುವಂಶಿಕಸಾಕ್ಷ್ಯಗಳು ಲಭ್ಯವಾಗುವವರೆಗೆ,ಈ ಪ್ರಾಣಿಯನ್ನುನಿರ್ದಿಷ್ಟ ಅನುವಂಶಿಕ ವಿಧಕ್ಕೆ ಸೇರಿಸುವ ಬದಲು ವಿರಳವಾದ ಬಣ್ಣದರೂಪಾಂತರವೆಂದು ವೈಜ್ಞಾನಿಕವಾಗಿವಿವರಿಸುವುದು ಸೂಕ್ತ ಎಂದು ಡಾ.ಸಂಜಯ್ ಗುಬ್ಬಿಹೇಳಿದರು.
ಭಾರತದಲ್ಲಿಕಾಣಸಿಗುವ ಚಿರತೆಗಳ ಮತ್ತೊಂದುಬಣ್ಣದ ರೂಪವೆಂದರೆ ಕಪ್ಪುಚಿರತೆ.ಇವು ಚಂದನಚಿರತೆಗಿಂತ ಹೆಚ್ಚು ಕಂಡುಬರುತ್ತದೆ.
ಡಾ.ಸಂಜಯ್ಗುಬ್ಬಿ ನೇತೃತ್ವದ ಈ ಸಂಶೋಧನೆಯಲ್ಲಿಸಂದೇಶ್ ಅಪ್ಪು ನಾಯ್ಕ,ಶ್ರವಣ್ ಸುತಾರ್,ಎಚ್.ಸಿ.ಪೂರ್ಣೇಶ,ರೂಮಾ ಕಂದುರ್ಕರ್,ರವಿಚಂದ್ರವೆಲಿಪ್, ದಯಾನಂದಮಿರಾಶಿ, ಸುಮಿತ್ವೆಲಿಪ್, ಐಶ್ವರ್ಯಕಾರಂತ್ ಹಾಗೂ ಮಯೂರ ಮಿರಾಶಿಇದ್ದರು.
ಇವರಅಧ್ಯಯನದ ಪ್ರಕಾರ,ಕರ್ನಾಟಕದಲ್ಲಿಸುಮಾರು 2,500ಚಿರತೆಗಳು ಇವೆಎಂದು ತಿಳಿದು ಬಂದಿದೆ.ಈ ಸಂಸ್ಥೆಯಕೆಲಸದಿಂದ ರಾಜ್ಯದಲ್ಲಿ ಮೊದಲಬಾರಿಗೆ ತರಕರಡಿಯ ಮತ್ತು ಬಿಳಿವರ್ಣದ ಸೀಳು ನಾಯಿಯ ಇರುವಿಕೆಪತ್ತೆಯಾಗಿದೆ.ಸಣ್ಣಹುಲ್ಲೆ,ಕೆನ್ನಾಯಿ ಮತ್ತುಕಂದು ಮುಂಗುಸಿಗಳ ಆವಾಸಸ್ಥಾನಗಳುಸೇರಿದಂತೆ ಇನ್ನಿತರ ಹಲವು ಮಹತ್ವದವಿಚಾರಗಳು ಬೆಳಕಿಗೆ ಬಂದಿವೆ.