ಬನ್ನೇರುಟ್ಟ ಜೈವಿಕ ಉದ್ಯಾನವನದ ಸಫಾರಿ ವಾಹನದ ಮೇಲೆ ಚಿರತೆ ದಾಳಿ ಮಾಡಿದ ದೃಶ್ಯಗಳು.
ಆನೇಕಲ್: ಬನ್ನೇರುಟ್ಟ ಜೈವಿಕ ಉದ್ಯಾನವನದ ಸಫಾರಿ ವಾಹನದ ಮೇಲೆ ಚಿರತೆ ದಾಳಿ ಮಾಡಿದ್ದು, ಚೆನ್ನೆ$ ಮೂಲದ ವಹಿದಾ ಬಾನು(50) ಗಾಯಗೊಂಡಿದ್ದಾರೆ. ಪತಿ ಹಾಗೂ ಮಗನೊಂದಿಗೆ ಗುರುವಾರ ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿಗಳ ವೀಣೆಗಾಗಿ ವಹಿದಾ ಬಾನು ಆಗಮಿಸಿದ್ದರು. ಕೆ.ಎಸ್.ಟಿ.ಡಿ.ಸಿ. ವಾಹನದಲ್ಲಿ ಸಫಾರಿಗೆ ಹೋಗಿದ್ದಾಗ ಚಿರತೆ ವಾಹನದ ಮೇಲೆ ಎಗರಿ ಕಿಟಕಿ ಪಕ್ಕ ಕುಳಿತಿದ್ದ ಮಹಿಳೆಯ ಕೈಗೆ ಪರಚಿದೆ. ಅಲ್ಲದೆ ಕೈಯಲ್ಲಿದ್ದ ಬಟ್ಟೆಯನ್ನು ಕಿತ್ತುಕೊಂಡು ಹೋಗಿದೆ. ವಾಹನದಿಂದ ಕೆಳಗೆ ಇಳಿದ ಬಳಿಕವೂ ಕೆಲ ಹೊತ್ತು ಚಿರತೆ ಅಲ್ಲೆ ಇದ್ದು, ಬಸ್ನಲ್ಲಿದ್ದವರಿಗೆ ಭಯ ಹುಟ್ಟಿಸಿದೆ. ಸದ್ಯ ವಹಿದಾ ಬಾನು ಅವರಿಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಹಿಂದೆಯೂ ನಡೆದಿತ್ತು ದಾಳಿ: ಈ ಹಿಂದೆ 12 ವರ್ಷದ ಬಾಲಕನ ಮೇಲೆ ಚಿರತೆ ಆಕಸ್ಮಿಕವಾಗಿ ದಾಳಿ ಮಾಡಿತ್ತು. ಚಿರತೆ ದಾಳಿಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸುರತೆಗೆ ಆದ್ಯತೆ ನೀಡಿ ವಾಹನಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿ ಎಂಬ ಸೂಚನೆ ನೀಡಿದ್ದರು.
ಎಸಿ ಬಸ್ಗಳಲ್ಲಿ ಮಾತ್ರ ಅವಕಾಶ : ಬಸ್ ಒಳಗೆ ಇದ್ದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಬನ್ನೇರುಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಎಸಿ ಬಸ್ಗಳನ್ನು ಮಾತ್ರ ಬಳಸಲು ಸೂಚನೆ ನೀಡಿದ್ದು, ಉಳಿದ ಎಸಿ ಅಲ್ಲದ ಬಸ್ಗಳಿಗೆ ಮುಂದಿನ ದಿನಗಳಲ್ಲಿ ಸುರತೆ ಕೈಗೊಂಡ ಬಳಿಕ ಅನುವು ಮಾಡಿ ಕ್ರಮ ಕೈಗೊಳ್ಳುವುದಾಗಿ ಬನ್ನೇರುಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ವಿಜಯವಾಣಿಗೆ ತಿಳಿಸಿದ್ದಾರೆ.