ಸಿಂಧನೂರಿನ ಶಹರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷ ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿದರು. ಡಿವೈಎಸ್ಪಿ ಚಂದ್ರಶೇಖರ, ಸಿಪಿಐ ವಿನಾಯಕ, ಪಿಐ ವೀರಾರೆಡ್ಡಿ ಎಚ್. ಇತರರಿದ್ದರು. 
ರಾಜ್ಯ

ಹಿರಿಯರಿಗೆ ಕಿರುಕುಳ ನೀಡಿದರೆ ಕಾನೂನು ಕ್ರಮ

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಚಂದ್ರಶೇಖರ ಜಿ. ನಾಯಕ ಹೇಳಿಕೆ
ಸಿಂಧನೂರು: ಹಿರಿಯ ನಾಗರಿಕರ ಸುರಕ್ಷತೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಡಿವೈಎಸ್ಪಿ ಚಂದ್ರಶೇಖರ ಜಿ.ನಾಯಕ ಹೇಳಿದರು. 
ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸಭೆ ಅಧ್ಯಕ್ಷತೆ ವಹಿಸಿ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದರು. ಹಿರಿಯ ನಾಗರಿಕರಿಗೆ ಸಮಸ್ಯೆಗಳಾಗಿದ್ದಲ್ಲಿ ಇಆರ್‌ಎಸ್‌ಎಸ್ 112ಗೆ ಕರೆ ಮಾಡಬೇಕು ಅಥವಾ ಹಿರಿಯ ನಾಗರಿಕರ ಸಹಾಯವಾಣಿ 1090ಗೆ ಕರೆ ಮಾಡಿ ತಿಳಿಸಬೇಕು. 
ಹೆತ್ತ ತಂದೆ-ತಾಯಿಯ ಮೇಲೆ ಮಕ್ಕಳು ಹಲ್ಲೆ ಮತ್ತು ದೌರ್ಜನ್ಯವೆಸಗಿ ಮನೆಯಿಂದ ಹೊರ ಹಾಕಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. 
ಹಿರಿಯರನ್ನು ಅತ್ಯಂತ ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸೈಬರ್ ಅಪರಾಧ ಚಟುವಟಿಕೆಗಳು ಕಂಡು ಬಂದದಲ್ಲಿ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದರು. 
ಸಿಪಿಐ ವಿನಾಯಕ, ಪಿಐ ವೀರಾರೆಡ್ಡಿ ಎಚ್., ಬಿಎಸ್‌ಎನ್‌ಎಲ್ ನಿವೃತ್ತ ನೌಕರರಾದ ಟಿ.ಹುಸೇನಸಾಬ್, ಯಮನಪ್ಪ, ಪ್ರಮುಖರಾದ ಸೈಯದ್ ಬಾಬರ್‌ಪಾಷಾ ಜಾಗೀರದಾರ್, ಕೆ.ಜಿಲಾನಿ ಪಾಷಾ, ನಿವೃತ್ತ ನೌಕರ ಪಂಪಯ್ಯ ಸ್ವಾಮಿ, ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷ ಚನ್ನಬಸಯ್ಯಸ್ವಾಮಿ ಹಿರೇಮಠ, ನಗರಸಭೆ ಮಾಜಿ ಸದಸ್ಯ ಶಬ್ಬೀರ್ ಅಹ್ಮದ್, ಬಳ್ಳಾರೆಪ್ಪ ಹೊಗರನಾಳ ಇತರರಿದ್ದರು.