lecturer Propose 
ರಾಜ್ಯ

ಸ್ಟೂಡೆಂಟ್ಸ್​ ಮುಂದೇನೆ ವಿದ್ಯಾರ್ಥಿನಿಗೆ ಲೆಕ್ಚರರ್​ ಪ್ರಪೋಸ್​; ಆಮೇಲೇನಾಯ್ತು?... Lecturer Propose to Student

ಪ್ರಮುಖ ಮುಖ್ಯಾಂಶಗಳು

  • ಕಾಲೇಜಿನಲ್ಲೇ ವಿದ್ಯಾರ್ಥಿನಿಗೆ ಚಾಕೋಲೇಟ್ ಕೊಟ್ಟು ಪ್ರಪೋಸ್ ಮಾಡಿದ ಲೆಕ್ಚರರ್
  • ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಘಟನೆ
  • ಪ್ರಾಧ್ಯಾಪಕ ಅಬ್ದುಲ್​ ನಡೆಗೆ ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಹಲ್ಲೆ, ಲೆಕ್ಚರರ್​ ಪರಾರಿ
ನೆಲಮಂಗಲ: ಕಾಲೇಜಿನಲ್ಲೇ ವಿದ್ಯಾರ್ಥಿನಿಯೊಬ್ಬರಿಗೆ ಪ್ರಾಧ್ಯಾಪಕ ಪ್ರಪೋಸ್​ (Lecturer Propose to Student) ಮಾಡಿದ್ದ ಹಿನ್ನೆಲೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಕ್ಯಾಂಪಸ್‌ವೊಂದು ರಣರಂಗವಾಗಿ ಮಾರ್ಪಟ್ಟ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿ ನಡೆದಿದೆ. ​  
ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪ್ರಾಧ್ಯಪಕ ಅಬ್ದುಲ್ ಪ್ರಪೋಸ್ ಮಾಡುವ ವಿಡಿಯೋ ಹಾಗೂ ಅವರ​ ಮೇಲೆ ವಿದ್ಯಾರ್ಥಿಗಳ ಗುಂಪು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ವಿಡಿಯೋ ವೈರಲ್​ ಆಗಿದೆ. 

ಪ್ರಾಧ್ಯಾಪಕನಿಂದ ಅಸಭ್ಯ ವರ್ತನೆ

ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಅಬ್ದುಲ್  ಕ್ಲಾಸ್​ ರೂಂನಲ್ಲಿ ಸ್ಟೂಡೆಂಟ್ಸ್​ ಮುಂದೆಯೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್​​ ಮಾಡಿದ್ದಾರೆ ಎನ್ನಲಾಗಿದೆ. ಪ್ರಾಧ್ಯಾಪಕನ ಈ ಅಸಭ್ಯ ವರ್ತನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಚಪ್ಪಲಿಯಿಂದ ಕೆನ್ನೆಗೆ ಬಾರಿಸಿದ್ದಾಳೆ. 

ಚಪ್ಪಲಿ ಏಟು, ಕಾಲಿನಿಂದ ಥಳಿತ

ಪ್ರಾಧ್ಯಾಪಕನ ನಡೆ ಕಂಡು ಆಕ್ರೋಶಗೊಂಡ ವಿದ್ಯಾರ್ಥಿಗಳ ಗುಂಪು ರೊಚ್ಚಿಗೆದ್ದು, ಪ್ರಾಧ್ಯಾಪಕನಿಗೆ ಕಾಲಿನಿಂದ ಹೊದ್ದು, ಕ್ಯಾಂಪಸ್​ನಲ್ಲೇ ಅಟ್ಟಾಡಿಸಿ ದಾಳಿ ನಡೆಸಿದ್ದಾರೆ. ಕೊನೆಗೆ ಕಾಲೇಜಿನ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ ಎಂದು ತಿಳಿದು ಬಂದಿದೆ. 
ಪರಿಸ್ಥಿತಿ ಹದಗೆಡುತ್ತಲೇ ಪ್ರಾಧ್ಯಾಪಕ ಅಬ್ದುಲ್ ಕಾಲೇಜು ಕ್ಯಾಂಪಸ್‌ನಿಂದ ತಪ್ಪಿಸಿಕೊಳ್ಳಲು ತನ್ನ ಕಾರಿನತ್ತ ಓಡಿದ್ದಾನೆ. ಅಲ್ಲಿಯೂ ಆತನನ್ನು ಬಿಡದ ವಿದ್ಯಾರ್ಥಿಗಳು,  ಅಟ್ಟಾಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೊನೆಗೆ ವಿದ್ಯಾರ್ಥಿಗಳ ಹೊಡೆತಕ್ಕೆ ಬೆದರಿದ ಪ್ರಾಧ್ಯಾಪಕ ಸ್ಥಳದಿಂದ ಓಡಿ ಹೋಗಿದ್ದಾನೆ ಎನ್ನುವುದು ಕೇಳಿಬಂದಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೈಡ್ರಾಮಾ ನಡೆದಿದ್ದು, ಪೊಲೀಸರಿಂದ ದೂರು ದಾಖಲಾಗುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ, (ಏಜೆನ್ಸೀಸ್).