Learning social skills through children's play
ಚಿಕ್ಕನಾಯಕನಹಳ್ಳಿ: ಚೌಕಾಸಿ ಮಾಡಬೇಡಿ ಬೆಲೆ ರ್ನಿದಿಷ್ಟವಾಗಿದೆ. ಸಾವಯವದಲ್ಲಿ ಬೆಳೆದ ಸೊಪು$್ಪ ಇದು ಆರೋಗ್ಯಕ್ಕೆ ಒಳ್ಳೆಯದು ಈ ರೀತಿಯ ಮಾತುಗಳು ಕೇಳಿಬಂದಿದ್ದು ಹೊಸಪಾಳ್ಳಯದ ಶಾಲಾ ಆವರಣದಲ್ಲಿ.
ತಾಲೂಕಿನ ಶೆಟ್ಟಿಕೆರೆಯ ಕಲ್ಲುಬಾವಿಪಾಳ್ಯದ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಸಂತೆಯನ್ನು ಮಕ್ಕಳು ತಮ್ಮ ಜಮೀನುಗಳಲ್ಲಿ ಬೆಳೆದ ಸೊಪು$್ಪ, ತರಕಾರಿ, ಹಣ್ಣು ಸೇರಿದಂತೆ ಮೊಟ್ಟೆಯನ್ನು ಮಕ್ಕಳು ಸಂತೆಯಲ್ಲಿಟ್ಟು ಮಾರಾಟ ಮಾಡಿದರು. ಜತೆಗೆ ಪಾನಿಪುರಿಯು ಮಾರಾಟ ಹೆಚ್ಚಾಗಿದ್ದು, ಸೊಪ್ಪಿಗೆ ಬೇಡಿಕೆ ಇತ್ತು. ತಮ್ಮ ಮಕ್ಕಳ ಕೈಯಲ್ಲೇ ವ್ಯಾಪಾರ ಮಾಡಿ ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಂತಹ ಪಾಲಕರು ಮಕ್ಕಳೊಂದಿಗೆ ಖುಷಿ ಪಟ್ಟರು.
ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಸುಧಾಕರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಸಂತೆ ಮಾಡಿರುವುದು ಮಕ್ಕಳಲ್ಲಿ ವ್ಯಾಪಾರ, ಲೆಕ್ಕಚಾರ ಮತ್ತು ಮಾರುಕಟ್ಟೆಯ ಅರಿವು ಬೇಳೆಯಲಿ ಎಂಬ ಕಾರಣಕ್ಕೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಾಮಾಜಿಕ ವೈಚಾರಿಕತೆ ಜೀವನ ಶೈಲಿಯ ನೈಜ ಅನುಭವ ಆಗುತ್ತದೆ ಎಂದರು.ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷೆ ಸುಜಾತಾ, ಮಂಜುನಾಥ್, ಮುಖ್ಯಶಿಕ್ಷಕ ರಮೇಶ್, ಗ್ರಾಮಸ್ಥರಾದ ಸುನಿತಾ,ರೇಣುಕಯ್ಯ, ರಾಜಪ್ಪ, ನವೀನ್ ಇದ್ದರು.