ಕಮಲಾಪುರ ತಾಲೂಕಿನ ಬಂಡನಕೇರಾ ತಾಂಡಾ ಶಾಲೆಯಲ್ಲಿ ನಿವೃತ್ತ ಶಿಕ್ಷಕ ಸೂರ್ಯಕಾಂತ ಪಾಟೀಲ್ ದಂಪತಿಯನ್ನು ಸನ್ಮಾನಿಸಲಾಯಿತು.
- ಮುಖ್ಯಗುರು ಸುನಿತಾ ಬಿರಾದಾರ ಅಭಿಮತ
- ಡಾ.ಸೂರ್ಯಕಾಂತ ಪಾಟೀಲ್ ನಿವೃತ್ತಿ ಸಮಾರಂಭ
ಕಲಬುರಗಿ: ಬದುಕಿನ ಆಮೂಲಾಗ್ರ ಬೆಳವಣಿಗೆಗೆ ಕಲಿಕೆ ಮಹತ್ವದ್ದಾಗಿದ್ದು, ಶಿಕ್ಷಕರಾದವರು ಅದನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ಎಂದು ಡೊಂಗರಗಾಂವ ಪ್ರೌಢಶಾಲೆ ಮುಖ್ಯಗುರು ಸುನಿತಾ ಬಿರಾದಾರ ಹೇಳಿದರು.
ಕಮಲಾಪುರ ತಾಲೂಕಿನ ಬಂಡನಕೇರಾ ತಾಂಡಾ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕ ಡಾ.ಸೂರ್ಯಕಾಂತ ಪಾಟೀಲ್ ಅವರ ವಯೋನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಟೀಲರು ಪತ್ರಕರ್ತ, ಸಾಹಿತಿ, ಶಿಕ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಅನನ್ಯವಾದುದು ಎಂದು ಕೊಂಡಾಡಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ನಬಿಸಾಬ್ ಮೋಮಿನ್ ಮಾತನಾಡಿ, ಬದುಕುವ ಕಲೆ ಮತ್ತು ಜ್ಞಾನದ ಅರಿವು ಮೂಡಿಸುವ ಶಿಕ್ಷಕರು ಕಠಿಣ ಪರಿಶ್ರಮದಿಂದಲೇ ಸಾಧಿಸಿ ತೋರಿಸಬೇಕೆಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದ ಡಾ.ಸೂರ್ಯಕಾಂತ ಪಾಟೀಲ್ ಮಾತನಾಡಿ, ಜಗತ್ತನ್ನೇ ಬದಲಾಯಿಸಬಹುದಾದ ಶಕ್ತಿಶಾಲಿ ಆಯುಧ ಶಿಕ್ಷಣ ಎಂಬುದನ್ನು ವೃತ್ತಿ ಜೀವನದಲ್ಲಿ ಮನಗಂಡಿದ್ದೇನೆ. ಅದರ ಪಾವಿತ್ರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಮುಖ್ಯಗುರುಗಳಾದ ಭೀಮಾಶಂಕರ ರಾಜೇಶ್ವರ, ಮಹಾದೇವ ಪಾಟೀಲ್, ಅಂಗದರಾವ ಪಾಟೀಲ್ ಮಾತನಾಡಿದರು. ಮುಖಂಡ ಮಾರುತಿ ಜಾಧವ, ಎಸ್ಡಿಎಂಸಿ ಅಧ್ಯ ಸತೀಶ ಜಾಧವ್, ಶಿಕರಾದ ಸಂಜುಕುಮಾರ ಚವ್ಹಾಣ್, ಮಹಾದೇವಿ ಬಿರಾದಾರ, ಡಾಕು ನಾಯಕ, ಹೇಮಾವತಿ ಮಠ, ಲೋಹಿತ್ ಚವ್ಹಾಣ್, ಮಧುಮತಿ ಪಾಟೀಲ್, ನಾಗೇಂದ್ರಪ್ಪ ಕೋರಿ, ಶಿವಲಿಂಗಪ್ಪ ಬಿರಾದಾರ, ಪದ್ಮಾವತಿ ಹರಸೂರ, ರೋಹಿದಾಸ ಚವ್ಹಾಣ್, ಫಕೀರಸಾಬ್, ರಾಜೇಶ್ವರಿ ಪಾಟೀಲ್, ಸುಭಾಷ ಇದ್ದರು.
ಅಮನ್ ಜಾಧವ್ ಪ್ರಾರ್ಥಿಸಿದರು. ಡಾ.ಸಂಕೇತ ಪಾಟೀಲ್ ಸ್ವಾಗತಿಸಿದರು. ಈಶ್ವರ ಭೋಗನ್ ನಿರೂಪಣೆ ಮಾಡಿದರು. ಪುಂಡಲೀಕ ವಂದಿಸಿದರು. ಡಾ.ಸೂರ್ಯಕಾಂತ ಪಾಟೀಲ್ ದಂಪತಿಯನ್ನು ಗ್ರಾಮಸ್ಥರು, ವಿದ್ಯಾರ್ಥಿಗಳಲ್ಲದೆ ಡೊಂಗರಗಾಂವ ಕ್ಲಸ್ಟರ್ ಶಿಕರು ಸನ್ಮಾನಿಸಿದರು.