ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್​ ಕಲಿಕೆ ಅನಿವಾರ್ಯ english 
ರಾಜ್ಯ

ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್​ ಕಲಿಕೆ ಅನಿವಾರ್ಯ english

ಪ್ರಮುಖ ಮುಖ್ಯಾಂಶಗಳು

  • ಬಿಇಒ ವೆಂಕಟೇಶಪ್ಪ ಹೇಳಿಕೆ
ಪಾತಪಾಳ್ಯ: ಸ್ಪಧಾತ್ಮಕ ಯುಗದಲ್ಲಿ ಗ್ರಾಮೀಣ ಮಕ್ಕಳು ಮಾತೃಭಾಷೆಯೊಂದಿಗೆ ಇಂಗ್ಲಿಷ್​ ಕಲಿಯುವುದು ಅನಿವಾರ್ಯ ಎಂದು ಬಿಇಒ ವೆಂಕಟೇಶಪ್ಪ ಹೇಳಿದರು. english
ಪಾತಪಾಳ್ಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಲ್​ಕೆಜಿ, ಯುಕೆಜಿ, ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭೋತ್ಸವ ಹಾಗೂ ದಾಖಲಾತಿ ಕಾರ್ಯಕ್ರಮದಲ್ಲಿ ಮಾತನಾಡಿ,30 ವರ್ಷಗಳ ಹಿಂದೆ ಪ್ರಾರಂಭವಾದ ಉರ್ದು ಶಾಲೆಯಲ್ಲಿ ಅನುಭವಸ್ಥ, ತರಬೇತಿ ಹೊಂದಿದ, ಗುಣಾತ್ಮಕ ಶಿಕ್ಷಣ ನೀಡುವ ಉಪನ್ಯಾಸಕರಿದ್ದು, ಮಕ್ಕಳು ಪ್ರಗತಿಯತ್ತ ಸಾಗುತ್ತಿದ್ದಾರೆ. ಹಾಗಾಗಿ ಈ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಬೇಕೆಂಬ ಮಕ್ಕಳ ಪಾಲಕರು ಮನವಿಯಿಂದಾಗಿ ದಾಖಲಾತಿ ಸಂಖ್ಯೆ ಹೆಚ್ಚಿದೆ ಎಂದರು.
ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟರಾಮಪ್ಪ ಮಾತನಾಡಿ, ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಗಣತಿ ಕಡಿಮೆಯಾಗುತ್ತಿದೆ. ಸರ್ಕಾರ ವಿದ್ಯಾರ್ಥಿಗಳಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದರೂ ಕೂಡ ಪಅಲಕರು ಸಾವಿರಾರು ರೂ.ಗಳನ್ನು ತೆತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುತ್ತಾರೆ. ಮೊದಲು ತಾಲೂಕಿನಲ್ಲಿ 21 ಉರ್ದು ಶಾಲೆಗಳಿದ್ದವು. ಈಗ ಕೇವಲ 7 ಶಾಲೆಗಳು ಮಾತ್ರ ಉಳಿದಿವೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಇರುವ ಶಾಲೆಗಳನ್ನು ಮುಚ್ಚಬೇಕಾದ ಸಂಭವ ಬರಬಹುದು. ನಮ್ಮ ಶಾಲೆ, ನಮ್ಮೂರಿನ ಶಾಲೆ ಎಂಬ ಮನೋಭಾವ ಪ್ರತಿಯೊಬ್ಬ ಪಾಲಕರಿಗೂ ಬಂದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯುತ್ತವೆ. ಈ ನಿಟ್ಟಿನಲ್ಲಿ ಪೋಷಕರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಮುಖ್ಯಶಿಕ್ಷಕಿ ಶಹನಾಜ್​ ಮಾತನಾಡಿದರು. ಇಸಿಒ ಕೆ.ಆರ್​.ರವಿಕುಮಾರ್​, ಮಂಜುನಾಥ, ಬಿಆರ್​ಪಿ ಎನ್​.ಶಿವಪ್ಪ, ಎಂ.ಎನ್​.ಮಂಜುನಾಥ್​, ಬಾಬಾಜಾನ್​, ಸಿಆರ್​ಪಿ ರಫಿ ಅಹಮದ್​, ಕೆ.ಎನ್​.ಕೃಷ್ಣಪ್ಪ, ಎಸ್​ಡಿಎಂಸಿ ಮಾಜಿ ಅಧ್ಯಕ್ಷ ಹುಸೇನ್​ಖಾನ್​, ಮುನೋವರ್​, ಸಾದಿಕ್​, ಶಿಕ್ಷಕರಾದ ಫಯಾಜ್​ ಅಹಮದ್​, ಸಿ.ಎನ್​.ವಿಜಯಕುಮಾರ್​, ಅತಿಥಿ ಶಿಕ್ಷಕಿ ಸಹೇರಾಭಾನು, ನಸೀರಾಬಾನು ಇತರರಿದ್ದರು.