ಇಟಗಿ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಶ್ರೀಶೈಲ ತುರಮರಿ ಮಾತನಾಡಿದರು. ಬಸವರಾಜ ಸಾಣಿಕೊಪ್ಪ , ಆರ್.ಬಿ.ಹುಣಶೀಕಟ್ಟಿ ಇತರರಿದ್ದರು.
ಇಟಗಿ: ಪರಿಸರ ಕಾಳಜಿ, ನಾಯಕತ್ವ ಗುಣ ಹಾಗೂ ಸೇವಾ ಮನೋಭಾವ ಬೆಳೆಸುವಲ್ಲಿ ಎನ್ಎಸ್ಎಸ್ ಸಹಕಾರಿಯಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಶ್ರೀಶೈಲ ತುರಮರಿ ಹೇಳಿದರು.
ಗ್ರಾಮದ ಜನತಾ ಶಿಣ ಪ್ರಸಾರ ಸಮಿತಿಯ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎನ್ಎಸ್ಎಸ್ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶದ ಸಮಗ್ರತೆ ಮತ್ತು ಪ್ರಗತಿಗೆ ಕೈಜೋಡಿಸಬೇಕು ಎಂದರು. ತಾಪಂ ಮಾಜಿ ಸದಸ್ಯ ಬಸವರಾಜ ಸಾಣಿಕೊಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯ ಪ್ರಜ್ಞೆ, ಶಿಸ್ತು, ಸೇವೆ ಹಾಗೂ ಸಂಯಮ ರೂಢಿಸುವಲ್ಲಿ ಎನ್ಎಸ್ಎಸ್ ಉತ್ತಮ ವೇದಿಕೆಯಾಗಿದೆ ಎಂದರು.
ನಿರ್ದೇಶಕ ಶಂಕರ ಗಣಾಚಾರಿ, ಪ್ರಾಚಾರ್ಯ ಆರ್.ಬಿ.ಹುಣಶೀಕಟ್ಟಿ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಬಿ.ವಿ.ಬೆಣಚಮರ್ಡಿ, ನಿರ್ದೇಶಕ
ಆರ್.ಬಿ.ಇಟಗಿ, ಎನ್ಎಸ್ಎಸ್ ಶಿಬಿರಾಧಿಕಾರಿ ಬಸವರಾಜ ಸವದಿ, ಸಹಶಿಬಿರಾಧಿಕಾರಿ ಶಿವಾನಂದ ಸುಣಗಾರ, ಕೆ.ಡಿ.ಕರ್ಕಿ, ಗಣೇಶ ದುರ್ಗಣ್ಣವರ, ಎಸ್.ಸಿ.ಗುರುವನ್ನವರ ಇತರರಿದ್ದರು. ನಿಹಾಲ್ ಸನದಿ ವಂದಿಸಿದರು.