ಬಸವಕಲ್ಯಾಣ ಅನುಭವ ಮಂಟಪದ ಪರಿಸರದಲ್ಲಿ ಮಂಗಳವಾರ ಶ್ರಾವಣ ಮಾಸದ ನಿಮಿತ್ತ ನಡೆಯಲಿರುವ ಅಮರಂಗಣಂಗಳ ಆತ್ಮ ಚರಿತ್ರೆ ಪ್ರವಚನದ ಕರಪತ್ರವನ್ನು ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಬಿಡುಗಡೆಗೊಳಿಸಿದರು. ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯಮಾತೆ ಸುಗುಣಾತಾಯಿ, ಪೂಜ್ಯ ಹಾಲಮ್ಮತಾಯಿ, ಶ್ರೀ ಅನೀಲ ಮಹಾರಾಜರು, ಶ್ರೀ ಬಸವದೇವರು, ಸಿದ್ದಣ್ಣ ಭೂಮಾ, ಶಿವಪುತ್ರಪ್ಪ ಅವಸೆ, ಮಹಾದೇವಪ್ಪ ಇಜಾರೆ ಇತರರಿದ್ದರು.
- ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಲಹೆ
- ಕಲ್ಯಾಣದಲ್ಲಿ ಪ್ರವಚನದ ಕರಪತ್ರ ಬಿಡುಗಡೆ
ಬಸವಕಲ್ಯಾಣ: ಶ್ರಾವಣ ಮಾಸದಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಕೇಳುವ ಮೂಲಕ ನಾವೆಲ್ಲರೂ ನಮ್ಮ ಜೀವನ ಶರಣ ಮಾರ್ಗದಲ್ಲಿ ಸಾಗಿಸಬೇಕು ಎಂದು ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಅನುಭವ ಮಂಟಪದ ಪರಿಸರದಲ್ಲಿ ಮಂಗಳವಾರ ಶ್ರಾವಣ ಮಾಸದ ನಿಮಿತ್ತ ಶ್ರೀ ಶಿವಾನಂದ ಸ್ವಾಮೀಜಿ ಅವರಿಂದ ನಡೆಯಲಿರುವ ಅಮರಂಗಣಂಗಳ ಆತ್ಮ ಚೆರಿತ್ರೆ ಪ್ರವಚನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಶ್ರಾವಣ ಎಂದರೆ ಶ್ರವಣ ಮಾಡುವುದು ಅಂದರೆ ಕೇಳುವುದು. ನಾವು ಒಂದು ತಿಂಗಳು ಶರಣರ ವಿಚಾರಗಳನ್ನು ಕೇಳಿ ಹನ್ನೊಂದು ತಿಂಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಹನ್ನೆರಡನೇ ಶತಮಾನದಲ್ಲಿ ದೇಶದ ಮೂಲೆಮೂಲೆಗಳಿಂದ ಶರಣರು ಕಲ್ಯಾಣಕ್ಕೆ ಅನುಭಾವ ಗೋಷ್ಠಿ ಕೇಳಲಿಕ್ಕೆ ಆಗಮಿಸುತ್ತಿದ್ದರು. ಶರಣರು ಅನುಭಾವಕ್ಕೆ ಬಹಳ ಮಹತ್ವ ನೀಡಿದ್ದಾರೆ. ಶ್ರೀ ಶಿವಾನಂದ ಸ್ವಾಮೀಜಿ ಅಧ್ಯಯನಶೀಲರು, ಲಿಂಗಯೋಗಿಗಳು ಆಗಿದ್ದಾರೆ. ಅವರಿಂದ ಅಜ್ಞಾತ ಅಮರಂಗಣಂಗಳ ಆತ್ಮಚರಿತ್ರೆ ಪ್ರವಚನ ಕೇಳುವುದು ಒಂದು ಸಂಭ್ರಮ ಎಂದು ಹೇಳಿದರು.
ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಸಿದ್ದಣ್ಣ ಭೂಮಾ ಮಾತನಾಡಿ, ಗುರುವಾರದಿಂದ ಒಂದು ತಿಂಗಳು ಪ್ರತಿದಿನ ಸಂಜೆ 6ಕ್ಕೆ ಪ್ರವಚನ ನಡೆಯಲಿದೆ. ನಗರದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯಮಾತೆ ಸುಗುಣಾತಾಯಿ, ಪೂಜ್ಯ ಹಾಲಮ್ಮತಾಯಿ, ಶ್ರೀ ಅನೀಲ ಮಹಾರಾಜರು, ಶ್ರೀ ಬಸವದೇವರು, ಮಹಾದೇವಪ್ಪ ಇಜಾರೆ, ಪ್ರಮೋದ ಶಮಾರ್, ಶಿವಪುತ್ರಪ್ಪ ಅವಸೆ, ಜಗನ್ನಾಥ ಪತಂಗೆ, ವೀರೇಶ ಕುಂಬಾರ, ರಾಜಕುಮಾರ ರಟಕಲ್ಲೆ, ರವಿ ಕೋಳಕೂರ, ಶಂಕರ ಮದರಗೈ, ಶ್ರೀಶೈಲ ಬಿರಾದಾರ, ಪ್ರಭುಶೆಟ್ಟಿ ಜ್ಯಾಂತಿ, ಗಂಗಾಧರ ಬಿರಾದಾರ, ಶಿವಶಂಕರ ಕುಂಬಾರ, ಸರಸ್ವತಿ ಪಾಟೀಲ, ಪ್ರಭಾವತಿ ಅವಸೆ, ಶರಣಮ್ಮ ಮದರಗೈ ಇದ್ದರು.