ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೈಕೋರ್ಟ್​ನ ಮುಂಭಾಗದಲ್ಲಿ ಬೆಂಗಳೂರು ವಕೀಲರ ಸಂದ ಸದಸ್ಯರು ಪ್ರತಿಭಟನೆ ನಡೆಸಿದರು. ಸಂದ ಅಧ್ಯಕ್ಷ ವಿವೇಕ್​ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್​.ವಿ. ಪ್ರವಿಣ್​ ಗೌಡ ಮತ್ತಿತರರಿದ್ದರು.  
ರಾಜ್ಯ

ಕಲಾಪ ಬಹಿಷ್ಕರಿಸುವುದಾಗಿ ವಕೀಲರ ಎಚ್ಚರಿಕೆ| High court

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್​ ಮುಂಭಾಗ ಪ್ರತಿಭಟನೆ
  • ಜಡ್ಜ್​ಗಳಿಂದ ಅವಹೇಳನ ಪ್ರವೃತ್ತಿ ಹೆಚ್ಚಳ ಎಂದು ಅಸಮಾಧಾನ
ಬೆಂಗಳೂರು: ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್​ನಲ್ಲಿ ವಕೀಲರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಮತ್ತು ಆಡಳಿತ ವಿಭಾಗಕ್ಕೆ 15 ದಿನಗಳ ಕಾಲಾವಕಾಶ ನೀಡಿರುವ ಬೆಂಗಳೂರು ವಕೀಲರ ಸಂಘ, ಬೇಡಿಕೆಗಳು ಈಡೇರದೆ ಹೋದರೆ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.
ಹೈಕೋರ್ಟ್​ನ ಗೋಲ್ಡನ್​ ಜ್ಯುಬಿಲಿ ಗೇಟ್​ ಮುಂಭಾಗ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂದ ಅಧ್ಯಕ್ಷ ವಿವೇಕ್​ ಸುಬ್ಬಾರೆಡ್ಡಿ ಈ ಘೋಷಣೆ ಮಾಡಿದರು. ಪ್ರತಿಭಟನಾನಿರತ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಪಾರ್ಕಿಂಗ್​, ಶೌಚಗೃಹ, ಲಿಫ್ಟ್​ನ ಕೊರತೆಯು ವಕೀಲರು ಮತ್ತು ಕೋರ್ಟ್​ಗಳಿಗೆ ಆಗಮಿಸುತ್ತಿರುವ ಕದಾರರಿಗೆ ತೀವ್ರ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಹೈಕೋರ್ಟ್​ ರಿಜಿಸ್ಟ್ರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕೇಸ್​ಗಳ ಪೋಸ್ಟಿಂಗ್​ ಪಡೆಯುವುದೇ ಸಮಸ್ಯೆಯಾಗಿದೆ. ಈ ಸಮಸ್ಯೆಗಳ ಬಗ್ಗೆ ಹಲವು ಭಾರಿ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ವಕೀಲರು ಪ್ರತಿಭಟನೆಯ ಹಾದಿ ಹಿಡಿಯಬೇಕಾಗಿದೆ ಎಂದು ತಿಳಿಸಿದರು.
ವಕೀಲರಿಗೆ ಗೌರವ ನೀಡಲಿ:
ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವು ವಕೀಲರು ತಮ್ಮ ಅಭಿಪ್ರಾಯ ಹಂಚಿಕೊಂಡು, ಅನೇಕ ನ್ಯಾಯಮೂರ್ತಿಗಳು ವಕೀಲರಿಗೆ ಸರಿಯಾಗಿ ಗೌರವ ನೀಡುತ್ತಿಲ್ಲ. ಸೌಜನ್ಯದಿಂದ ವರ್ತಿಸದೆ ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಅನಾರೋಗ್ಯಕರ ಪ್ರವೃತ್ತಿಯಾಗಿದ್ದು, ಯುವ ವಕೀಲರು ವಾದ ಮಂಡನೆಗೆ ಹೆದರುವಂತಾಗಿದೆ. ನ್ಯಾಯಮೂರ್ತಿಗಳು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ತಮ್ಮ ಆತ್ಮಗೌರವಕ್ಕಾಗಿ ವಕೀಲರು ಸಂಟಿತ ಹೋರಾಟ ಮಾಡಬೇಕಾದ ಅಗ್ಯವಿದೆ ಎಂದು ಕರೆ ನೀಡಿದರು. ಯುವ ವಕೀಲರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. 
ಸಂದ ಪ್ರಧಾನ ಕಾರ್ಯದರ್ಶಿ ಎಚ್​.ವಿ. ಪ್ರವಿಣ್​ ಗೌಡ, ಉಪಾಧ್ಯಕ್ಷ ಸಿ.ಎಸ್​. ಗಿರೀಶ್​ಕುಮಾರ್​ ಸೇರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಸಂಘ ಪ್ರಮುಖ ಬೇಡಿಕೆಗಳು:

  1. ಖಾಲಿ ಇರುವ ನ್ಯಾಯಾಧೀಶರ ನೇಮಕಾತಿಗಳನ್ನು ಶ್ರೀಘ್ರ ನಡೆಸುವುದು. 
  2. ವಿಚಾರಣಾ ನ್ಯಾಯಾಲಯಗಳಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಗೃಹ. 
  3. ಹೈಕೋರ್ಟ್​ ಸೇರಿ ನ್ಯಾಯಾಲಯಗಳ ರಿಜಿಸ್ಟ್ರಿಯನ್ನು ವಕೀಲಸ್ನೇಹಿಯಾಗಿ ರೂಪಿಸುವುದು. 
  4. ರಿಜಿಸ್ಟ್ರಿಯಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು. 
  5. ತೀರ್ಪಿನ ಪ್ರತಿಗಳ ಶ್ರೀ ಲಭ್ಯತೆಗೆ ಕ್ರಮ ಕೈಗೊಳ್ಳುವುದು ಮತ್ತು ಭಾಷಾಂತರಿತ ಪ್ರತಿಗಳನ್ನು ಒದಗಿಸುವುದು.