Laws for bars to set money aside for guarantees 
ರಾಜ್ಯ

ಗ್ಯಾರಂಟಿಗೆ ಹಣ ಹೊಂದಿಸಲು ಬಾರ್​ಗಳಿಗೆ ಲೇಸನ್ಸ್​

ಬುಕ್ಕಾಪಟ್ಟಣ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಗುರಿಯಿಂದ ಹೆಚ್ಚಿನ ಬಾರ್​ಗಳಿಗೆ ಪರವಾನಗಿ ನೀಡಿ ಪ್ರತಿ ಹಳ್ಳಿಯಲ್ಲಿಯೂ ಒಂದೊಂದು ಬಾರ್​ ಪ್ರಾರಂಭಿಸಿ ಮದ್ಯ ಮಾರಾಟ ಹೆಚ್ಚಿಸಿ ಕುಟುಂಬಗಳನ್ನು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್​ ಬಾಬು ತಿಳಿಸಿದರು.
ಶಿರಾ ತಾಲೂಕು ಬುಕ್ಕಾಪಟ್ಟಣದ ಶ್ರೀಪಾತಾಳ ಲಿಂಗೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ 2035ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗಾಗಿ ಸಾಲದ ಜತೆಗೆ ತೆರಿಗೆ ಹಾಗೂ ಮದ್ಯದ ಬೆಲೆ ಹೆಚ್ಚಿಸಿದ್ದಾರೆ. ಈ ಸಾಲದ ಹೊರೆಯನ್ನು ಜನತೆಯ ಮೇಲೆ ಹಾಕುತ್ತಿದ್ದಾರೆ. ಮದ್ಯ ಸೇವನೆ ಎಂಬುದು ಸಮಾಜಕ್ಕೆ ಅಂಟಿದ ಶಾಪವಾಗಿದೆ. ಈ ಹಿಂದೆ ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಾರಾಯಿ ನಿಷೇಧ ಮಾಡುವ ಮೂಲಕ ಹಳ್ಳಿಗಳಲ್ಲಿ ಮದ್ಯ ವ್ಯಸನಕ್ಕೆ ಕಡಿವಾಣ ಹಾಕುವ ಕೆಲಸ ಮಾಡಿದ್ದರು. ಆದರೆ ಈಗಿನ ಸರ್ಕಾರ ವದ್ಯ ಮಾರಾಟಕ್ಕೆ ಉತ್ತೇಜನ ನೀಡುತ್ತಿದೆ ಎಂದು ಟೀಕಿಸಿದರು.
ಎಲೆರಾಂಪುರ ಮಠದ ಪೀಠಾಧ್ಯ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಇಂದು ಸಮಾಜದಲ್ಲಿ ಬಡವರ, ಶ್ರಮಿಕರ, ಮಹಿಳೆಯರ ಶ್ರೇಮಾಭಿವೃದ್ಧಿಗೋಸ್ಕರ ಶ್ರಮಿಸುತ್ತಿರುವ ಹಾಗೂ ದೇವನೊಬ್ಬ ನಾಮ ಹಲವು ಎಂಬ ವಾಕ್ಯಕ್ಕೆ ಜೀವಂತ ಅರ್ಥ ಒದಗಿಸಿದಂತಹ ಏಕಕ ಸಂಸ್ಥೆಯೆಂದರೆ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾತ್ರ. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರೂಪಿಸಿರುವ ಹಲವಾರು ಕಾರ್ಯಕ್ರಮಗಳಲ್ಲಿ ನನ್ನ ಅತ್ಯಂತ ಪ್ರೀತಿಯ ಕಾರ್ಯಕ್ರಮವೆಂದರೆ ಅದು ಮದ್ಯವರ್ಜನ ಶಿಬಿರ ಎಂದು ತಿಳಿಸಿದರು.
ಬೆಂಗಳೂರು ಜನ ಜಾಗೃತಿ ವೇದಿಕೆ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ತುಮಕೂರು ಜಿಲ್ಲೆ ನಿಕಟ ಪೂರ್ವ ಅಧ್ಯ ರಾಮಚಂದ್ರಗುಪ್ತ, ಶಿರಾ&2 ಾನ ವಿಕಾಸ ಸಮನ್ವಯ ಅಧಿಕಾರಿ ಆಶಾ, ಶಿಬಿರಾಧಿಕಾರಿ ನಾಗೇಂದ್ರ, ಆರೋಗ್ಯ ಸಹಾಯಕಿ ರಂಜಿತಾ, ಬೆಂಗಳೂರು ಪ್ರಾದೇಶಿಕ ವಿಭಾಗದ ಜನ ಜಾಗೃತಿ ವೇದಿಕೆ ಮೇಲ್ವಿಚಾರಕ ದರ್ಶನ್​, ಬುಕ್ಕಾಪಟ್ಟಣ ವಲಯ ಮೇಲ್ವಿಚಾರಕ ನರೇಶ್​ ಇತರರು ಇದ್ದರು.