ಗೋಕಾಕ ನಗರದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರತಾ ಸಪ್ತಾಹವನ್ನು ಗಣ್ಯರು ಉದ್ಘಾಟಿಸಿದರು. ಉಮೇಶ ಅತ್ನೂರೆ, ಡಾ.ಮೋಹನ ಭಸ್ಮೆ ಇತರರಿದ್ದರು. 
ರಾಜ್ಯ

ಕಾನೂನು ಪಾಲಿಸಿ ಅಪಘಾತ ತಪ್ಪಿಸಿ

ಎಂ.ಎಸ್​.ಹಿರೇಮಠ ಬೆಳಗಾವಿ
ಗೋಕಾಕ: ನಮ್ಮ ಸುರತೆಗಿರುವ ಕಾನೂನು ಪಾಲಿಸಿ ಅಪಘಾತ ತಪ್ಪಿಸಿ ಎಂದು ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯ ಉಮೇಶ ಅತ್ನೂರೆ ಹೇಳಿದರು. ನಗರದ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂ, ಪ್ರಾದೇಶಿಕ ಸಾರಿಗೆ ಇಲಾಖೆ, ತಾಲೂಕಾಡಳಿತ ಮತ್ತು ಪೊಲೀಸ್​ ಇಲಾಖೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ರ್ನಿದಿಷ್ಟವಾದ ವಾಹನ ಚಾಲನಾ ಪ್ರಮಾಣ ಪತ್ರ, ವಿಮೆ, ಸಾರಿಗೆ ನಿಯಮ ಪಾಲಿಸಿ ತಮ್ಮ ಜೀವ ರಸುವುದರೊಂದಿಗೆ ಇತರರ ಜೀವ ರಸಿ. ಅಪಘಾತವಾದ ಸಂದರ್ಭದಲ್ಲಿ ಅಪಘಾತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಪಾಲಕರು ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ಕೊಡಬೇಡಿ. ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್​ ಧರಿಸಿ ಸುರತ ಚಾಲನೆ ಮಾಡುವಂತೆ ಕರೆ ನೀಡಿದರು.
ತಹಸೀಲ್ದಾರ್​ ಡಾ.ಮೋಹನ ಭಸ್ಮೆ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ ಕುಲಕರ್ಣಿ, ನ್ಯಾಯವಾದಿಗಳ ಸಂದ ಅಧ್ಯ ಎಸ್​.ಜಿ.ಬಿ. ಪಾಟೀಲ, ಖಜಾಂಚಿ ಎ.ಸಿ.ಖಂಡ್ರಟ್ಟಿ, ಹಿರಿಯ ಮೋಟಾರು ವಾಹನ ನಿರೀಕ ಎಚ್​.ಆರ್​.ಮರಲಿಂಗಣ್ಣವರ, ಸಿಪಿಐ ಸುರೇಶ ಬಾಬು, ಪಿಎಸ್​ಐ ಕೆ.ಬಿ.ವಾಲಿಕಾರ ಇತರರಿದ್ದರು.