ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕಳೆದ117 ವರ್ಷಗಳಿಂದಭಾರತೀಯ ಸಂಸ್ಕೃತಿ,ಇತಿಹಾಸ ಮತ್ತುಪುರಾತತ್ವ ಕ್ಷೇತ್ರದಲ್ಲಿ ಸಂಶೋಧನೆನಡೆಸುತ್ತಿರುವ ’ದಿ ಮಿಥಿಕ್ಸೊಸೈಟಿ’ಯು ಕನ್ನಡದ ಮೇರು ವಿದ್ವಾಂಸಹಾಗೂ ಸಂಶೋಧಕ ನಾಡೋಜ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿಗಳ ಇಂಗ್ಲಿಷ್ ಲೇಖನಗಳಸಂಕಲನ ರೈಟಿಂಗ್ಸ್ ಆನ್ ದಿ ಕನ್ನಡಲ್ಯಾಂಡ್,ಲ್ಯಾಂಗ್ವೇಜ್ಅಂಡ್ ಲಿಟರೇಚರ್ ಗ್ರಂಥವನ್ನುಬಿಡುಗಡೆ ಮಾಡಿದೆ.
ಭಾನುವಾರಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿವಿಮರ್ಶಕ ಡಾ.ಸಿ.ನಾಗಣ್ಣ ಕೃತಿಬಿಡುಗಡೆ ಮಾಡಿದರು.ಈ ವೇಳೆ ಮಾತನಾಡಿದಅವರು, ‘ರೀಡಿಂಗ್,ಕಾನ್ಫರೆನ್ಸ್ಹಾಗೂ ರೈಟಿಂಗ್’ ಈ ಮೂರೂ ಕಾಯಕಗಳನ್ನುಯಶಸ್ವಿಯಾಗಿ ಸಮತೋಲನಗೊಳಿಸಿರುವಶಾಸ್ತ್ರಿಗಳು,ಬರವಣಿಗೆಯಲ್ಲಿನಿಖರತೆಯನ್ನು ಮೈಗೂಡಿಸಿಕೊಂಡಿದ್ದಾರೆ.ಜ್ಞಾನಾರಾಧನೆಯನ್ನೇಬದುಕಿನ ಏಕೈಕ ಗುರಿಯಾಗಿಸಿಕೊಂಡಿರುವಇವರ ಸೃಜನಶೀಲ ಹಾಗೂ ಜ್ಞಾನನಿಷ್ಠಬದುಕು ಯುವ ಸಂಶೋಧಕರಿಗೆಆದರ್ಶಪ್ರಾಯವಾಗಿದೆ ಎಂದರು.
ಕೃತಿಯಸಂಪಾದಕ ಬಿ.ಎನ್.ಶಶಿಕಿರಣ್ ಪುಸ್ತಕಪರಿಚಯವನ್ನು ಮಾಡುತ್ತಾ,ಕೃತಿಯು ಪ್ರಾಚೀನಹಳಗನ್ನಡದ ವಿಕಾಸ,ವ್ಯಾಕರಣ,ಛಂದಸ್ಸು,ನಿಘಂಟು ಶಾಸ್ತ್ರ,ಬೌದ್ಧ ಮತ್ತುಜೈನ ಧರ್ಮಗಳ ಸಾಹಿತ್ಯಿಕ ಪ್ರಭಾವಹಾಗೂ ವಚನಕಾರ್ತಿಯರು ಸೇರಿದಂತೆಕನ್ನಡದ ಆದಿ ಮಹಿಳಾ ಸಾಹಿತಿಗಳಕೊಡುಗೆಗಳನ್ನು ಒಳಗೊಂಡಿದೆ ಎಂದುವಿವರಿಸಿದರು.
ಸಮಾರಂಭದಲ್ಲಿಮಿಥಿಕ್ ಸೊಸೈಟಿಯ ಅಧ್ಯಕ್ಷವಿ.ನಾಗರಾಜ್,ಸಂಸ್ಥೆಯ ಗೌರವಕಾರ್ಯದರ್ಶಿ ಡಾ.ಎಸ್.ರವಿ ಮಾತನಾಡಿದರು.
ಕನ್ನಡ ವಿದ್ವತ್ ವಲಯದಲ್ಲಿ ಸಂಶೋಧನಾ ಯೋಜನೆಗಳು, ಅಪೂರ್ಣವಾಗಿ ನಿಂತುಹೋಗಿವೆ. ‘ಕನ್ನಡ ಭಾಷೆಯ ಚರಿತ್ರೆ’, ‘ಕನ್ನಡ ಸಾಹಿತ್ಯ ಚರಿತ್ರೆ’ ಹಾಗೂ ‘ಕರ್ನಾಟಕ ಅಧ್ಯಯನಗಳ ಸೂಚಿ’ ಮುಂತಾದ ಗಂಭೀರ ಪ್ರಕಟಣೆಗಳು ಹಾಗೂ ಯೋಜನೆಗಳನ್ನು ಇಂದಿನ ಯುವ ಪೀಳಿಗೆಯು ಪೂರ್ಣಗೊಳಿಸಬೇಕು
— ನಾಡೋಜ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ