ಸುರಪುರದಲ್ಲಿ ಶನಿವಾರ ಕಲ್ಯಾಣದಲ್ಲಿ ಕ್ಷೀರ ಕ್ರಾಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಯಲ್ಲಪ್ಪ ನಾಯಕ ಮಲ್ಲಿಭಾವಿ, ಶಿವಶರಣಪ್ಪ ಸಾಹುಕಾರ ಹೈಯಾಳ, ಕೋಟ್ರೇಶ ಚೌಧರಿ, ಭೀಮು ನಾಯಕ ಮಲ್ಲಿಭಾವಿ, ಗೋವಿಂದಪ್ಪ ಟಣಕೇದಾರ, ರಾಘವೇಂದ್ರ ಹಸನಾಪುರ, ರಾಮಚಂದ್ರಪ್ಪ ದೊರೆ, ಚಂದ್ರಶೇಖರ ಸಾಹು ಇತರರಿದ್ದರು.
ಸುರಪುರ: ಇಲ್ಲಿನ ಜೈ ಸೀತಾರಾಮ ರೈತ ಉತ್ಪಾದಕ ಸಂಸ್ಥೆ ವತಿಯಿಂದ ದಿ.ರಾಜಾ ವೆಂಕಟಪ್ಪ ನಾಯಕ ಅವರ ಸ್ಮರಣಾರ್ಥ ಸೆ.೧೬ ರಂದು ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕಲ್ಯಾಣದಲ್ಲಿ ಕ್ಷೀರ ಕ್ರಾಂತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಯಲ್ಲಪ್ಪ ನಾಯಕ ಮಲ್ಲಿಭಾವಿ, ನಿರ್ದೇಶಕ ಶಿವಶರಣಪ್ಪ ಸಾಹುಕಾರ ಹೈಯಾಳ ಜಂಟಿಯಾಗಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಅಧ್ಯಕ್ಷತೆ ವಹಿಸುವರು, ಶಾಸಕ ಶರಣಬಸಪ್ಪ ದರ್ಶನಾಪುರ, ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮುಖ್ಯ ಅತಿಥಿಗಳಾಗಿದ್ದಾರೆ. ರುಕ್ಮಾಪುರ ಮತ್ತು ಲಕ್ಷ್ಮಿಪುರದ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಂಸದ ಜಿ.ಕುಮಾರನಾಯಕ ಲಾಂಛನ ಬಿಡುಗಡೆ ಮಾಡುವರು. ಪಶು ಸಂಗೋಪನಾ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ ಎಂದರು.
ಈ ವೇಳೆ ಕೋಟ್ರೇಶ್ ಚೌಧರಿ, ಭೀಮು ನಾಯಕ ಮಲ್ಲಿಭಾವಿ, ಮುಖಂಡರಾದ ಗೋವಿಂದಪ್ಪ ಟಣಕೇದಾರ, ರಾಘವೇಂದ್ರ ಹಸನಾಪುರ, ರಾಮಚಂದ್ರಪ್ಪ ದೊರೆ, ಚಂದ್ರಶೇಖರ ಸಾಹು, ಸಣ್ಣ ದೇವೇಗಾಡ ಪಾಟೀಲï, ಭೀಮನಗೌಡ ಪಾಟೀಲï, ಶ್ರೀಶೈಲ್ ವಾಲಿ, ಸಿದ್ದಪ್ಪ ದಿವಳಗುಡ್ಡ, ಮಾನಪ್ಪ ದೇವಡಿ, ಚಾಂದ ಹುಸೇನ್, ಭೀರಪ್ಪ ಭೀಮನಗೌಡ ಚಂದ್ಲಾಪುರ, ಯಂಕಪ್ಪ ಮಲ್ಲಿಭಾವಿ, ಯಲ್ಲಪ್ಪ ತಳವಾರಗೇರಿ, ಮಾನಪ್ಪ, ವೆಂಕಟೇಶ ಮಲ್ಲಿಭಾವಿ, ವೆಂಕಟೇಶ ಕುಪಗಲ್, ಹುಲಗಮ್ಮ ರುಕ್ಮಾಪುರ ಇತರರಿದ್ದರು.
ಸ್ವಾವಲಂಬನೆಗೆ ಹೆಚ್ಚಿನ ಒತ್ತು
ಸುರಪುರದಲ್ಲಿ ರೈತರ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ ಮೂಲಕ ಬೃಹತ್ ಪ್ರಮಾಣದಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆಯಲಾಗುತ್ತಿದೆ. ಈಗಾಗಲೇ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದ್ದು, ಸುಮಾರು ೩೦೦ ರೈತರು ಸದಸ್ಯರಾಗಿದ್ದಾರೆ. ಮುಂದಿನ ದಿನಗಳಲ್ಲಿ ೧೦ ಸಾವಿರ ರೈತರನ್ನು ಸದಸ್ಯರನ್ನಾಗಿ ಮಾಡಿ, ೨೦ ಸಾವಿರ ಹಸುಗಳನ್ನು ಖರೀದಿಸಿ, ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಮಹತ್ವದ ಗುರಿ ಹೊಂದಲಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡುವ ಜತೆಗೆ ರೈತರಿಗೆ ಹಾಲಿನ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಎಸ್.ಎಚ್.ಖಾನಾಪುರ ಮಾರುಕಟ್ಟೆಯಲ್ಲಿ ಡೈರಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ. ಸ್ಥಳೀಯವಾಗಿ ಹಾಲು ಸಂಗ್ರಹಿಸಿ, ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಯಲ್ಲಪ್ಪ ನಾಯಕ ಮಲ್ಲಿಭಾವಿ ವಿವರಿಸಿದರು.