ಸುರಪುರದ ರುಕ್ಮಿಣಿ ಪಾಂಡುರAಗ ದೇವಸ್ಥಾನದಲ್ಲಿ ಶನಿವಾರ ಆಷಾಢ ಏಕಾದಶಿ ನಿಮಿತ್ತ ರುಕ್ಮಿಣಿ ಪಾಂಡುರAಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
- ರುಕ್ಮಿಣಿ ಪಾಂಡುರAಗ ದೇವಸ್ಥಾನದಲ್ಲಿ ವಿವಿಧ ಧಾಮಿರ್ಕ ಕಾರ್ಯಕ್ರಮ
ಸುರಪುರ : ನಗರದ ಪುರಾತನ ರುಕ್ಮಿಣಿ ಪಾಂಡುರAಗ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಶ್ರದ್ಧಾ-ಭಕ್ತಿಯೊಂದಿಗೆ ಆಷಾಢ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಲ್ಲಿ ಸುರಪುರ ಸಂಸ್ಥಾನಿಕ ರಾಜಾ ಲಕ್ಷ್ಮೀನಾರಾಯಣ ನಾಯಕ ಧ್ವಜಾರೋಹಣ ನೆರವೇರಿಸುವ ಮೂಲಕ ಆಷಾಢ ಉತ್ಸವವನ್ನು ಉದ್ಘಾಟಿಸಿದರು.
ಶನಿವಾರ ಆಷಾಢ ಏಕಾದಶಿ ನಿಮಿತ್ತ ಬೆಳಗ್ಗೆ ೬ರಿಂದ ೭ ಗಂಟೆವರೆಗೆ ಶ್ರೀವೇಣುಗೋಪಾಲ ಮಹಿಳಾ ಭಜನಾ ಮಂಡಳಿಯಿAದ ಭಜನೆ, ಮಂಡಳಿಯವರಿAದ ಗ್ರಾಮ ಪ್ರದಕ್ಷಿಣೆ ಮತ್ತು ರುಕ್ಮಿಣಿ ಪಾಂಡುರAಗ ದೇವರಿಗೆ ಪುಷ್ಪಾರ್ಚನೆ, ವಿಶೇಷ ಪೂಜೆ ಹಾಗೂ ಅಲಂಕಾರ ವೈಭವದಿಂದ ನೆರವೇರಿತು.
ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಭಾನುವಾರ ಬೆಳಗ್ಗೆ ದ್ವಾದಶಿ ಆಚರಣೆ ನಡೆಯಲಿದೆ. ಬೆಳಗ್ಗೆ ೬ಕ್ಕೆ ದೇವರ ಪೂಜೆ, ನೈವೇದ್ಯ ನಂತರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಸೋಮವಾರ ತ್ರಯೋದಶಿ ಇದ್ದು ಬೆಳಗ್ಗೆ ೯ಕ್ಕೆ ಪಲ್ಲಕ್ಕಿ ಉತ್ಸವ ನಂತರ ಗೋಪಾಳ ಕಾವಲಿ ಹಾಗೂ ಅವಭೃತ ಸ್ನಾನ ಜರುಗಲಿದೆ ಎಂದು ಶ್ರೀ ಹರೇ ವಿಠ್ಠಲ ಸೇವಾ ಸಮಿತಿ ಪ್ರಮುಖರು ಮಾಹಿತಿ ನೀಡಿದ್ದಾರೆ. ಈ ವೇಳೆ ಆನಂದ ವರ್ಮಾ, ಪಾರಪ್ಪ ಗುತ್ತೇದಾರ್, ಶ್ರೀಪಾದ ಗಡ್ಡದ, ರವಿ ಗುತ್ತೇದಾರ್, ರಾಘವೇಂದ್ರ ಕುಲ್ಕರ್ಣಿ ಶಾರದಳ್ಳಿ, ಪ್ರಕಾಶ ಕುಲ್ಕರ್ಣಿ, ಮಿಥುನ ಕುಲಕರ್ಣಿ ಬಾಡಿಹಾಳ, ಸೂರಜï ವರ್ಮಾ, ಅರುಣಕಮಾರ ಜÁಛೇಡ್, ರಾಘವೇಂದ್ರ ಭಕ್ರಿ, ಶ್ರೀ ಹರೇ ವಿಠ್ಠಲ ಸೇವಾ ಸಮಿತಿ ಪದಾಽಕಾರಿಗಳಿದ್ದರು.