ನೇಸರಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಭೂಮಿಪೂಜೆ ನೆರವೇರಿಸಿದರು. ನಿಂಗಪ್ಪ ಅರಕೇರಿ, ಸಚಿನ ಪಾಟೀಲ, ಅಡಿವೆಪ್ಪ ಮಾಳಣ್ಣವರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ನೇಸರಗಿ
ಮಕ್ಷೇತ್ರದ ಎಲ್ಲ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಮೂರು ವರ್ಷ ಪೂರೈಸಿದೆ. ಹಲವಾರು ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಳಿಸಿದೆ. ಜನರು ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ನಿಂಗಪ್ಪ ಅರಕೇರಿ, ಸಚಿನ ಪಾಟೀಲ, ಅಡಿವೆಪ್ಪ ಮಾಳಣ್ಣವರ, ಬಾಳಪ್ಪ ಮಾಳಗಿ, ರಮೇಶ ರಾಯಪ್ಪಗೋಳ, ಭರಮಣ್ಣ ಸತ್ಯಣ್ಣವರ, ಚನ್ನಗೌಡ ಪಾಟೀಲ, ಸುಜಾತಗೌಡ ಪಾಟೀಲ, ಶಿವನಪ್ಪ ಮದೆಣ್ಣವರ, ಸುರೇಶ ಅಗಸಿಮನಿ, ಕಾಸೀಂಸಾಬ್ ಜಮಾದಾರ, ಶ್ರೀಧರ ಅಂಗಡಿ, ಬಸವರಾಜ ಚಿಕ್ಕನಗೌಡ ಹಾಗೂ ಗ್ರಾಮಸ್ಥರು ಇದ್ದರು.