ರಾಜ್ಯ

ಭಾಷೆ ಸಂಸ್ಕೃತಿ ಯನ್ನು ಪ್ರದರ್ಶಿಸುತ್ತದೆ : ಡಾ ನಿಶಾತ ಅರೀಫ ಹುಸ್ಸೇನಿ

ಕಲಬುರಗಿ: ನಮ್ಮ ತಾಯಿಭಾಷೆ ನಮಗೆ ಆತ್ಮೀಯತೆ ಮತ್ತು ಸೇರಿದ ಭಾವನೆಯನ್ನು ನೀಡುತ್ತದೆ. ಅದು ನಮ್ಮ ರಕ್ತದಲ್ಲಿ ಬೆಸೆದುಕೊಂಡಿದೆ. ಭಾಷೆ ಕೇವಲ ಸಂವಹನದ ಸಾಧನ ಮಾತ್ರವಲ್ಲ; ಅದು ನಮ್ಮ ಭಾವನೆಗಳು, ಪರಂಪರೆ ಮತ್ತು ವ್ಯಕ್ತಿತ್ವವನ್ನು ಹೊತ್ತಿರುತ್ತದೆ ಎಂದು ಕಲೆ,ಭಾಷಾ, ಮಾನವಿಕತೆ ಮತ್ತು ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ ನಿಶಾತ ಆರಿಫ ಹುಸ್ಸೇನಿ ಹೇಳಿದರು.
ಸೋಮವಾರ ಕೆಬಿಏನ್ ವಿಶ್ವ ವಿದ್ಯಾಲಯದಲ್ಲಿ ಮಾತೃ
ಭಾಷಾ ದಿವಸ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಒಬ್ಬ ವ್ಯಕ್ತಿ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ತನ್ನನ್ನು ತಾನು ಉತ್ತಮಗೊಳಿಸಬೇಕು. ಬೆಳವಣಿಗೆ ಎಂದರೆ ನಿರಂತರ ಪ್ರಯಾಣ. ಪ್ರತಿಯೊಬ್ಬರೂ ಕಾಲಕ್ರಮೇಣ ತಮ್ಮ ಉತ್ತಮ ರೂಪವನ್ನು ಸಾಧಿಸಲು ಪ್ರಯತ್ನಿಸಬೇಕು ಎಂದರು.
ಇಂದು “Mom” ಮತ್ತು “Dad” ಎಂಬ ಪದಗಳು “Ammi,” “Abbu,” “Avva,” ಮತ್ತು “Appa” ಎಂಬ ಪದಗಳನ್ನು ನಿಧಾನವಾಗಿ ಬದಲಿಸುತ್ತಿವೆ. ಬದಲಾವಣೆ ಸಹಜವಾದರೂ, ನಮ್ಮ ಸಂಸ್ಕೃತಿಯ ಅಭಿವ್ಯಕ್ತಿಗಳನ್ನು ಉಳಿಸಿ ಪುನರುಜ್ಜೀವನಗೊಳಿಸುವ ಶಕ್ತಿ ನಮ್ಮಲ್ಲಿದೆ. ನಮ್ಮ ಪರಂಪರೆಯನ್ನು ಜೀವಂತವಾಗಿಡುವುದು ನಮ್ಮ ಕೈಯಲ್ಲಿದೆ ಎಂದು ನುಡಿದರು.
ಪ್ರತಿ ಭಾಷೆಯಿಗೂ ತನ್ನದೇ ಆದ ರುಚಿ ಮತ್ತು ಸೌಂದರ್ಯವಿದೆ. ಬಹುಭಾಷಾ ಮತ್ತು ಬಹುಸಾಂಸ್ಕೃತಿಕ ಉತ್ಸವಗಳನ್ನು ಆಚರಿಸುವುದರಿಂದ ನಮ್ಮ ವೈವಿಧ್ಯತೆ ಮತ್ತು ಪರಂಪರೆಯನ್ನು ಗೌರವಿಸುತ್ತೇವೆ. ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ವಿಶ್ವಕ್ಕೆ ಪರಿಚಯಿಸಿ, ಹೆಮ್ಮೆಯಿಂದ ಪ್ರದರ್ಶಿಸೋಣ ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿನಿಯರಾದ ಅರಿಶಿಯಾ, ಜೈಬಾ, ಮದಿಹಾ ಜಬೀನ, ಶಿಫಾ ಅಂಜುಮ, ಅದೀಬಾ ವಿವಿಧ ರಾಜ್ಯ ಗಳ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಅಲ್ಲಿನ ರಾಜ್ಯ ಭಾಷೆಯಲ್ಲಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕರಾದ ರಮೇಶ, ಡಾ ಸಂಗನಗೌಡ ಹಿರೇಗೌಡರ, ಡಾ ತಾಜುದ್ದೀನ, ಡಾ ಅತುಂಗ, ಡಾ ಭಾರತಿ, ಡಾ ಅತಿ ಉಲ್ಲಾಹ, ಡಾ ಅಥರ, ಡಾ ಆಫಷನ ದೇಶಮುಖ ಇವರು ತಮ್ಮ ತವರು ರಾಜ್ಯದ ರಾಜ್ಯಭಾಷೆಗಳಾದ ತಮಿಳು, ಕನ್ನಡ , ತೆಲುಗು, ಮಣಿಪುರಿ , ಒರಿಯಾ , ಹಿಂದಿ , ದಕ್ಕನಿ, ಭಾಷೆಗಳಲ್ಲಿ ಮಾತನಾಡಿದರು.
ಮಾತ್ರ ಭಾಷಾ ದಿವಸದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿದ್ಯಾರ್ಥಿನಿ ಅಮ್ಮರಾ ಪ್ರಾರ್ಥಿಸಿದಳು, ಆಯೇಷಾ ಅಂಜುಮ ಸ್ವಾಗತಿಸಿದಳು, ಮಸೀರಾ ಬತುಲ ವಂದಿಸಿದಳು.
ಕಲಾ, ಭಾಷಾ ಮನವಿಕತೆ ಮತ್ತು ಸಮಾಜ ವಿಜ್ಞಾನ ನಿಕಾಯದ ಎಲ್ಲ ಪ್ರಾಧ್ಯಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.