ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರನ್ನು ಬುಧವಾರ ಭೇಟಿ ಮಾಡಿದ ಶಾಸಕ ಬಸವರಾಜ ಮತ್ತಿಮಡು ಅವರು ಕಮಲಾಪುರ ಭೂದಾಖಲೆಗೆ ಸಂಬಂಧಿಸಿದಂತೆ ಚರ್ಚಿಸಿದರು. ನ್ಯಾಯವಾದಿಗಳ ಸಂದ ಅಧ್ಯಕ್ಷ ಶಿವಕುಮಾರ ಪಸಾರ್​ ಇದ್ದರು. 
ರಾಜ್ಯ

ಕಮಲಾಪುರಕ್ಕೆ ಭೂ ದಾಖಲೆ ಸ್ಥಳಾಂತರಿಸಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಇಕ್ರಮ್​ ಶರೀಫ್​ ಭೇಟಿ ಮಾಡಿದ ಶಾಸಕ ಮತ್ತಿಮಡು
ಕಲಬುರಗಿ: ನೂತನ ತಾಲೂಕು ಕಮಲಾಪುರಕ್ಕೆ ಸಂಬಂಧಿಸಿದ ಭೂ ದಾಖಲೆಗಳನ್ನು ಕಲಬುರಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯಿಂದ ಕಮಲಾಪುರ ಕಚೇರಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಮನವಿ ಮಾಡಿದ್ದಾರೆ.
ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರನ್ನು ಬುಧವಾರ ಭೇಟಿ ಮಾಡಿದ ಅವರು, ಈ ಹಿಂದೆ ಎಲ್ಲ ತಾಂತ್ರಿಕ ತೊಡಕು ದೂರ ಮಾಡಿ, ಅಗತ್ಯ ಕಟ್ಟಡ ಒದಗಿಸುವಂತೆ ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ ಕಮಲಾಪುರ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಚೇರಿ ಆರಂಭಿಸಲು ಅನುಮತಿ ದೊರಕಿದ್ದು, ಸದ್ಯ ತಾಲೂಕಿನಲ್ಲಿರುವ ಸಿಬ್ಬಂದಿಯನ್ನೇ ಬಳಸಿ, ಎಲ್ಲ ದಾಖಲೆ ವರ್ಗಾವಣೆ ಮಾಡುವಂತೆ ವಿಭಾಗೀಯ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರು ಆದೇಶಿಸಿ, ಕಲಬುರಗಿ ನಿರ್ದೇಶಕರಿಗೆ ಮುಂದಿನ ಕ್ರಮಕ್ಕೆ ಸೂಚಿಸಿದ್ದಾರೆ.
ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದು, ತಣ ಭೂ ದಾಖಲೆಗಳನ್ನು ಕಮಲಾಪುರ ಕಚೇರಿಗೆ ವರ್ಗಾವಣೆ ಮಾಡುವಂತೆ ಕೋರಿದರು. ಗುಲ್ಬರ್ಗ ನ್ಯಾಯವಾದಿಗಳ ಸಂದ ಅಧ್ಯಕ್ಷ ಶಿವಕುಮಾರ ಪಸಾರ ಇತರರಿದ್ದರು.