ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕಿನ ಬಂಜಾರಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ಮಾಜಿ ಎಂಎಲ್ಸಿ ವಿಜಯಸಿಂಗ್​, ಡಾ.ಬಾಲಕೃಷ್ಣ ರಾಠೋಡ್​, ನೀಲಕಂಠ ರಾಠೋಡ್​, ಡಾ.ದೀಪಕ ಜಾಧವ್​ ಹಾಗೂ ಪ್ರಮುಖರಿದ್ದರು 
ರಾಜ್ಯ

ಬಂಜಾರ ಸಮುದಾಯ ಭವನ ನಿಮಾರ್ಣಕ್ಕೆ ಭೂಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣು ಸಲಗರ ಭರವಸೆ
  • ಕಲ್ಯಾಣದಲ್ಲಿ ಸಮಾಜದ
ಬಸವಕಲ್ಯಾಣ: ಬಂಜಾರ ಸಮಾಜದ ಸಮುದಾಯ ಭವನ ನಿಮಾರ್ಣಕ್ಕಾಗಿ ಎರಡು ಎಕರೆ ಜಮೀನು ಮಂಜೂರು ಮಾಡಲು ಕ್ರಮಕೈಗೊಳ್ಳುವುದಾಗಿ ಶಾಸಕ ಶರಣು ಸಲಗರ ಭರವಸೆ ನೀಡಿದರು.
ನಗರದ ಶುಭಮಂಗಲ ಫಂಕ್ಷನ್​ ಹಾಲ್​ನಲ್ಲಿ ತಾಲೂಕು ಬಂಜಾರಾ ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರ ಸಂಘದಿಂದ ಶನಿವಾರ ಆಯೋಜಿಸಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾವಂತರನ್ನು, ಸಾಧಕರನ್ನು ಸನ್ಮಾನಿಸುವುದು ಇತರರಿಗೆ ಸಾಧನೆಗೆ ಸ್ಪೂರ್ತಿ ಆಗಲಿದೆ ಎಂದರು.
ಮಾಜಿ ಎಂಎಲ್​ಸಿ ವಿಜಯಸಿಂಗ್​ ಮಾತನಾಡಿ, ಶೈಕ್ಷಣಿಕ ಪ್ರಗತಿಯಲ್ಲಿ ಸಮಾಜದ ಪ್ರಗತಿ ಅಡಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವಲ್ಲಿ ಕಾಳಜಿ ವಹಿಸಬೇಕು. ಬಂಜಾರಾ ಸಮಾಜದ ಪ್ರಗತಿಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.
ಲಾತೂರನ ಸಮಾಜ ಸೇವಕ, ಬರಹಗಾರ ಡಾ.ಗಣಪತಿ ರಾಠೋಡ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಲ್ಲಿ ಉನ್ನತವಾದ ಗುರಿ ಮತ್ತು ಧನಾತ್ಮಕ ಚಿಂತನೆ ಅವಶ್ಯಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡಿ ತಂದೆ-&ತಾಯಿ ಕನಸು ಸಾಕಾರಗೊಳಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಬಾಲಕೃಷ್ಣ ರಾಠೋಡ್​, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ನೀಲಕಂಠ ರಾಠೋಡ್​ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಧನಸಿಂಗ್​ ರಾಠೋಡ್​, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಶಾಂತಕುಮಾರ ರಾಠೋಡ್​, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಾ.ದೀಪಕ ಜಾಧವ್​, ಹುಮನಾಬಾದ್​ ಪಿಎಸ್​ಐ ಸುರೇಶಕುಮಾರ, ಭಾಲ್ಕಿ ದೈಹಿಕ ಶಿಕ್ಷಣ ಅಧಿಕಾರಿ ರೋಹಿದಾಸ ರಾಠೋಡ್​, ಹುಮನಾಬಾಡ್​ ಅಕ್ಷರ ದಾಸೋಹ ಯೋಜನೆ ಎಡಿ ಪ್ರೀತಮಸಿಂಗ್​ ಜಾಧವ್​, ಗೋವರ್ಧನ ಚವ್ಹಾಣ್​, ಪಿಡಿಒ ರಮೇಶ ರಾಠೋಡ್​, ಶಿವಾಜಿ ಚವ್ಹಾಣ್​, ಅಶೋಕ್​ ಜಾಧವ್​, ಪ್ರಾಚಾರ್ಯ ರಾಜಕುಮಾರ ಜಾಧವ್​, ಶ್ರಾವಣ ಪವಾರ, ವಿನೋದ ರಾಠೋಡ್​, ಪ್ರಕಾಶ ಜಾಧವ್​, ಜಯರಾಜ ರಾಠೋಡ್​, ಗುರುನಾಥ ಜಾಧವ್​, ಆನಂದ ಜಾಧವ್​, ಸಂಜು ಜಾಧವ್​, ಸೋಮಶೇಖರ ರಾಠೋಡ್​, ರವಿ ಚವ್ಹಾಣ್​, ಪ್ರೇಮಸಿಂಗ್​ ರಾಠೋಡ್​, ದೇವಿದಾಸ ಜಾಧವ್​ ಇತರರಿದ್ದರು ಕಿಶನ್​ ಚವ್ಹಾಣ್​ ಸ್ವಾಗತಿಸಿದರು. ಶಾಮ ಚವ್ಹಾಣ್​ ವಂದಿಸಿದರು. ರಾಜೇಶ್ವರಿ ಎಲ್​.ಚವ್ಹಾಣ್​ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.75ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಎಂಜಿನಿಯರಿಂಗ್​, ಜೆಇಇ ಹಾಗೂ ನೀಟ್​ ನಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
=======