ಬಲಿಜ ಸಮುದಾಯಕ್ಕೆ ಜಮೀನು ಮಂಜೂರು Balija community 
ರಾಜ್ಯ

ಬಲಿಜ ಸಮುದಾಯಕ್ಕೆ ಜಮೀನು ಮಂಜೂರು Balija community

ಪ್ರಮುಖ ಮುಖ್ಯಾಂಶಗಳು

  • ಸಮುದಾಯದಿಂದ ಸಚಿವರಿಗೆ ಕೃತಜ್ಞತೆ
ಚಿಂತಾಮಣಿ: ಬಲಿಜ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಜನರ ಬೇಡಿಕೆಗೆ ಅನುಗುಣವಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕಲಿಕಾ ಕೇಂದ್ರ ಕಟ್ಟಡ ನಿಮಾರ್ಣ ಮಾಡಲು ತಾಲೂಕಿನ ನಲ್ಲಗುಟ್ಟಹಳ್ಳಿ ಸರ್ವೇ ನಂ. 42 ಬ್ಲಾಕ್​ 15ರಲ್ಲಿ ಜಮೀನು ಮಂಜೂರು ಮಾಡಿದಕ್ಕೆ ಸಮುದಾಯದ ಪರವಾಗಿ ಕ್ಷೇತ್ರದ ಶಾಸಕ ಡಾ.ಎಂ.ಸಿ.ಸುಧಾಕರ್​ಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಮುದಾಯದ ತಾಲೂಕು ಅಧ್ಯಕ್ಷ ಮುರಗಮಲ್ಲಾ ಲಕ್ಷಿ$್ಮನಾರಾಯಣರೆಡ್ಡಿ ಹೇಳಿದರು. Balija community
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ 34 ಸಮುದಾಯಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ಜಮೀನು ಒದಗಿಸಿದ್ದು, ಅದರಂತೆ ಬಲಿಜ ಜನಾಂಗವನ್ನು ಗುರುತಿಸಿ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕಲಿಕಾ ಕೇಂದ್ರದ ಸ್ಥಾಪನೆಗೆ ಅವಕಾಶ ಒದಗಿಸಿದ್ದಾರೆ ಎಂದರು.
ಎಪಿಎಂಸಿ ದಯಾನಂದ ಸಾಗರ್​, ಟೊಮ್ಯಾಟೊ ಮಾರುಕಟ್ಟೆ ದ್ವಾರಕನಾಥ್​, ಬೀರಂಗಿ ಶ್ರೀನಿವಾಸ್​, ನಿವೃತ್ತ ಶಿಕ್ಷಕ ಲಕ್ಷ$್ಮಣ ಕುಲದೇಶ ಶೆಟ್ಟಿ, ಶ್ರೀನಿವಾಸರೆಡ್ಡಿ, ಕೋಟಿಗಲ್​ ಶ್ರೀನಿವಾಸ್​, ಗ್ಯಾಸ್​ ಮುರಳಿ, ಕೆಇಬಿ ಲಕ್ಷ$್ಮಯ್ಯ, ಎನ್​.ಪಿ.ನಾಗಭೂಷಣ್​, ಕಂಟ್ರಾಕ್ಟ್​ ಮುರಳಿ ಇತರರು ಇದ್ದರು.