- ಲಂಡನ್‌ನಲ್ಲಿ ವಿಜಯ್ ಮಲ್ಯ ಹುಟ್ಟು ಹಬ್ಬದ ಆಯೋಜನೆ
- ಹುಟ್ಟು ಹಬ್ಬದ ಆಯೋಜಕ ಲಲಿತ್ ಮೋದಿ
- ಬೆಲ್‌ಗ್ರೇವ್ ಸ್ಕ್ವೇರ್ ನಿವಾಸದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಹಾಜರು
- ವಿಜಯ್ ಮಲ್ಯ ತನ್ನ ಸ್ನೇಹಿತನೆಂದ ಲಲಿತ್ ಮೋದಿ
Vijay Mallaya : ಮಾಜಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಲಲಿತ್ ಮೋದಿ ಲಂಡನ್‌ನಲ್ಲಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ(Vijay Mallaya) ಅವರ ಹುಟ್ಟುಹಬ್ಬ ಪೂರ್ವ ಆಚರಣೆಯನ್ನು ಆಯೋಜಿಸಿದ್ದು ಇದೀಗ ವೈರಲ್ ಆಗಿದ್ದು, ಅವರ ಬೆಲ್‌ಗ್ರೇವ್ ಸ್ಕ್ವೇರ್ ನಿವಾಸದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಹಾಜರಿದ್ದರು. ಅತಿಥಿಗಳ ಪಟ್ಟಿಯಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ, ನಟಿ ಇದ್ರಿಸ್ ಎಲ್ಬಾ ಮತ್ತು ಫ್ಯಾಷನ್ ಡಿಸೈನರ್ ಮನೋವಿರಾಜ್ ಖೋಸ್ಲಾ ಇದ್ದರು. ಸಂಜೆ ಹೊರಬಿದ್ದ ಫೋಟೊದಲ್ಲಿ ಮಜುಂದಾರ್-ಶಾ ಒಂದು ಫ್ರೇಮ್‌ನಲ್ಲಿ ಖೋಸ್ಲಾ ಜೊತೆ ಪೋಸ್ ನೀಡುತ್ತಿರುವುದನ್ನು ಮತ್ತು ಇನ್ನೊಂದು ಫ್ರೇಮ್‌ನಲ್ಲಿ ಎಲ್ಬಾ ಜೊತೆ ಮಾತನಾಡುತ್ತಿರುವ ಪೋಟೊ ವೈರಲ್ ಆಗಿವೆ. ಛಾಯಾಗ್ರಾಹಕ ಜಿಮ್ ರೈಡೆಲ್ ಅವರು X ನಲ್ಲಿ ಲಲಿತ್ ಮೋದಿ ಮತ್ತು ಮಲ್ಯ ಅವರ ಚಿತ್ರವನ್ನು ಹಂಚಿಕೊಂಡಿದ್ದು, ಲಂಡನ್ನಿನ ತಮ್ಮ ಮನೆಯಲ್ಲಿ ಮಲ್ಯ ಅವರ ಗೌರವಾರ್ಥವಾಗಿ 70 ನೇ ಹುಟ್ಟುಹಬ್ಬಕ್ಕೂ ಮುನ್ನ ಅದ್ಭುತ ಪಾರ್ಟಿ ಆಯೋಜಿಸಿದ್ದಕ್ಕಾಗಿ ಮೋದಿಯವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಲಲಿತ್ ಮೋದಿ ಅವರು, ಭಾಗವಹಿಸಿದವರನ್ನು ಶ್ಲಾಘಿಸುತ್ತಾ ಮತ್ತು ಮಲ್ಯ ಅವರನ್ನು ತಮ್ಮ ಸ್ನೇಹಿತ ಎಂದು ಉಲ್ಲೇಖಿಸುತ್ತಾ, ನನ್ನ ಸ್ನೇಹಿತ ವಿಜಯ್ ಮಲ್ಯ ಅವರ ಪೂರ್ವ ಹುಟ್ಟುಹಬ್ಬದ ಪಾರ್ಟಿಯನ್ನು ನನ್ನ ಮನೆಯಲ್ಲಿ ಆಚರಿಸಲು ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಲಲಿತ್ ಮೋದಿ ಮತ್ತು ಮಲ್ಯ ಅವರು ಭಾರತೀಯ ಅಧಿಕಾರಿಗಳಿಂದ ವರ್ಷಗಳಿಂದ ತಪ್ಪಿಸಿಕೊಳ್ಳುತ್ತಿದ್ದರೂ ಸಹ ಅವರು ಸಂತೋಷದಿಂದ ಸಮಯವನ್ನು ಕಳೆಯುತ್ತಿದ್ದಾರೆಂದು ಟ್ರೋಲ್ ಆಗುತ್ತಿವೆ.
ಭಾರತ ಬಿಟ್ಟರು ಲಂಡನ್ ಸೇರಿದರು
ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಕುಸಿತಕ್ಕೆ ಸಂಬಂಧಿಸಿದ ಹೆಚ್ಚುತ್ತಿರುವ ಕಾನೂನು ತೊಂದರೆಗಳ ನಡುವೆ ವಿಜಯ್ ಮಲ್ಯ ಮಾರ್ಚ್ 2016 ರಲ್ಲಿ ಭಾರತವನ್ನು ತೊರೆದರು. 9,000 ಕೋಟಿ ರೂ.ಗಳಿಗೂ ಹೆಚ್ಚಿನ ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ ವಂಚನೆ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಭಾರತೀಯ ಅಧಿಕಾರಿಗಳು ಅವರನ್ನು ಹುಡುಕುತ್ತಿದ್ದಾರೆ. ಅಂದಿನಿಂದ ಮಲ್ಯ ಯುಕೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಭಾರತಕ್ಕೆ ಹಸ್ತಾಂತರದ ವಿರುದ್ಧ ಹೋರಾಡುತ್ತಿದ್ದಾರೆ.
ಐಪಿಎಲ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಲಿತ್ ಮೋದಿ, ಬಿಡ್ ರಿಗ್ಗಿಂಗ್ ಮತ್ತು ಹಣ ವರ್ಗಾವಣೆ ಸೇರಿದಂತೆ ಹಣಕಾಸಿನ ಅಕ್ರಮಗಳ ಆರೋಪದ ನಂತರ ಐಪಿಎಲ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲ್ಪಟ್ಟ ನಂತರ 2010 ರಲ್ಲಿ ಭಾರತವನ್ನು ತೊರೆದರು.(ಏಜನ್ಸೀಸ್).