ತ್ಯಾಮಗೊಂಡ್ಲು ಹೋಬಳಿಯ ತಡಸೀಟ್ಟ ಗ್ರಾಮದ ಶ್ರೀ ಲಕ್ಷಿ$್ಮನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ತ್ಯಾಮಗೊಂಡ್ಲು : ಪ್ರತಿ ವರ್ಷದ ವಾಡಿಕೆಯಂತೆ ಬೆಳಗ್ಗೆಯಿಂದಲೂ ಅಲ್ಲೆಲ್ಲೂ ಕಾಣಿಸದ ಮೂರು ಗರುಡ ಪಗಳು 11.45 ಕ್ಕೆ ಸರಿಯಾಗಿ ರಥದ ಕಳಸ ಪ್ರದಣೆ ಮಾಡಿದ ತಕ್ಷಣ ಭಕ್ತರ ಜಯಘೋಷದೊಂದಿಗೆ ಪ್ರಸಿದ್ಧ ತಡಶೀಟ್ಟದ ಶ್ರೀ ಲಕ್ಷಿ$್ಮ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು. ಈ ಕೌತುಕದ ಕ್ಷಣಕ್ಕೆ ಸಹಸ್ರಾರು ಭಕ್ತರು ಸಾಯಾದರು.
ವಾಡಿಕೆಯಂತೆ ಮಧ್ಯಾಹ್ನ 1 ರಿಂದ 2ರವರೆಗೆ ನಡೆಯಬೇಕಿದ್ದ ರಥೋತ್ಸವ ಚಂದ್ರಗ್ರಹಣ ಹಿನ್ನೆಲೆ 12 ರೊಳಗೆ ರಥೋತ್ಸವ ನೆರವೇರಿತು.ದೇವಸ್ಥಾನದ ಸುತ್ತ ಪ್ರದಣೆ ಹಾಕಿಸಿ ರಥವನ್ನು ಸ್ವಸ್ಥಾನಕ್ಕೆ ಸೇರಿಸಿ ಉತ್ಸವ ಮೂರ್ತಿಯನ್ನು ದೇವಾಲಯದೊಳಗೆ ಕರೆದೊಯ್ಯಲಾಯಿತು.
ತಡಸೀಟ್ಟದ ಪಟೇಲ್ ಲೇಟ್ ನರಸೇಗೌಡ, ಓಬಳಾಪುರದ ಕಟ್ಟೆಮನೆ ಕುಟುಂಬ, ಸಿಂಪಾಡಿಪುರದ ಮಹಿಮಣ್ಣ, ತಿಪ್ಪೇನಹಳ್ಳಿ ಜಿ.ನರಸಿಂಹಮೂರ್ತಿ, ಬೆತ್ತನಗೆರೆ ಮಾರೇಗೌಡ ವಂಶಸ್ಥರು, ಆರ್ಯವೈಶ್ಯ ಭಕ್ತ ಮಂಡಳಿ, ಓಬಳಾಪುರ ನಾರಾಯಣಪ್ಪ, ತುಮಕೂರಿನ ಲೇಟ್ ನಂಜೇಗೌಡರ ಕುಟುಂಬ ಮತ್ತು ಇತರರಿಂದ ವಂಶಪಾರಂಪರ್ಯವಾಗಿ ಈ ಬ್ರಹ್ಮರಥೋತ್ಸವದ ದಿನದ ಸೇವೆಯನ್ನು ನಡೆಸಿಕೊಟ್ಟರು.
ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಭಕ್ತರು ಆಗಮಿಸಿ ಈ ವರ್ಷ ರಥೋತ್ಸವಕ್ಕೆ ಹಾಜರಿದ್ದರು. 20 ಕ್ಕೂ ಹೆಚ್ಚು ವಿವಿಧ ಕುಟುಂಬದವರು ಅರವಂಟಿಗೆ ಸ್ಥಾಪಿಸಿ ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ಹಂಚುತ್ತಿರುವ ದೃಶ್ಯ ಕಂಡುಬಂತು. ಇನ್ನೂ ಅನೇಕರ ಮನೆಗಳಲ್ಲಿ ಆಹ್ವಾನಿತರಿಗೆ ಹಬ್ಬದೂಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಬೆಳಗಿನಿಂದಲೂ ಅರ್ಚಕ ಲ್ಮಕಾಂತ್, ಸಂಕರ್ಷಣ ಆಗಮಿಕ ಡಿ.ನಾರಾಯಣಭಟ್ಟ ಅವರು ಹೋಮ ಹವನಗಳನ್ನು ನಡೆಸಿಕೊಟ್ಟರು. ಯಾವುದೇ ಅಹಿತಕರ ಟನೆ ನಡೆಯದಂತೆ ತ್ಯಾಮಗೊಂಡ್ಲು ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಲ್.ಗಿರೀಶ್ ಪೋಸರ ವ್ಯಾಪಕ ಬಂದೋಬಸ್ತನ್ನು ಏರ್ಪಡಿಸಿದ್ದರು.
ಬ್ರಹ್ಮರಥೋತ್ಸವದಲ್ಲಿ ದೊಡ್ಡಬೆಲೆ ಗ್ರಾಪಂ ಮಾಜಿ ಅಧ್ಯೆ ಮಂಗಳಾ ನಟರಾಜು, ಗ್ರಾಪಂ ಮಾಜಿ ಸದಸ್ಯರಾದ ಎ.ಮಂಜುನಾಥ್, ಅಪ್ಪಾಜಿ, ದೊಡ್ಡಬೆಲೆ ಪಿಡಿಒ ವೆಂಕಟೇಶ್ ಇನಾಂದಾರ್, ತಡಶೀಟ್ಟ ಡೇರಿ ಅಧ್ಯಕ್ಷ ಲ್ಮನಾರಾಯಣ್, ಮಾಜಿ ಅಧ್ಯಕ್ಷ ಲೋಕೇಶ್, ದೊಡ್ಡಬೆಲೆ ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ಮುಖಂಡರಾದ ತಡಶೀಟ್ಟ ನಟರಾಜ್, ತಡಶೀಟ್ಟ ಚಂದ್ರಣ್ಣ, ತಡಶೀಟ್ಟ ನರಸೇಗೌಡ, ದೊಡ್ಡಬೆಲೆ ಪುಟ್ಟಸ್ವಾಮಿ, ಇಸುವನಹಳ್ಳಿಪಾಳ್ಯ ಭೋಜಣ್ಣ, ಟಿ.ಎನ್.ಹನುಮಂತರಾಜು, ಕೊಡಿಗೇಹಳ್ಳಿ ಮಂಜುನಾಥ್, ಬೈರೇಗೌಡ ಇತರರು ಇದ್ದರು.